ಸಂಪತ್ತಿಗೆ ಸವಾಲ್ ನಾಟಕ ಪ್ರದರ್ಶನ

ಕೊಪ್ಪಳ : ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪ್ರಯುಕ್ತ ಕೊಪ್ಪಳ ಮೀಡಿಯಾ ಕ್ಲಬ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕೊಪ್ಪಳ  ಇವರ ಸಂಯುಕ್ತ ಆಶ್ರಯದಲ್ಲಿ  ದಿ. ಶ್ರೀ ನೀಲನಗೌಡ ಹಿರೇಗೌಡ ಭಾನಾಪೂರ ಸ್ಮರಣಾರ್ಥ ಹಿರಿಯ ರಂಗಕರ್ಮಿ ಶ್ರೀಮತಿ ಸರೋಜಮ್ಮ ದುತ್ತರಗಿ ಸಹಾಯಾರ್ಥವಾಗಿ ದಿ.ಪಿ.ಬಿ.ಧುತ್ತರಗಿ ವಿರಚಿತ ಸಂಪತ್ತಿಗೆ ಸವಾಲ್ ನಾಟಕ ಪ್ರದರ್ಶನವನ್ನು ಇದೇ ದಿನಾಂಕ : ೧೬-೧೧-೨೦೧೩ ಶನಿವಾರರ ಸಂಜೆ : ೬-೦೦ಕ್ಕೆ ಸಾಹಿತ್ಯ ಭವನ,ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗಿದೆ. 
ಕಾರ‍್ಯಕ್ರಮದ ಉದ್ಘಾಟನೆಯನ್ನು ಶಿವರಾಜ್ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವರು,ಕೊಪ್ಪಳ,ಸಾನಿಧ್ಯ ಮ.ನಿ.ಪ್ರ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಶ್ರೀಗವಿಮಠ, ಕೊಪ್ಪಳ ಅಧ್ಯಕ್ಷತೆ  ಸೋಮರಡ್ಡಿ ಅಳವಂಡಿ ಅಧ್ಯಕ್ಷರು, ಕೊಪ್ಪಳ ಮೀಡಿಯಾ ಕ್ಲಬ್ ವಹಿಸಿಕೊಳ್ಳಲಿದ್ದಾರೆ.
ಆಶಯ ನುಡಿಗಳು  ಗುಡಿಹಳ್ಳಿ ನಾಗರಾಜ್ ಹಿರಿಯ ಪತ್ರಕರ್ತರು,ಬೆಂಗಳೂರು ಇವರಿಂದ. ಕಾರ‍್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಕೆ.ಶಿವರಾಮಗೌಡ ಸಂಸದರು, ಕೊಪ್ಪಳ,ರಾಘವೇಂದ್ರ ಹಿಟ್ನಾಳ ಶಾಸಕರು,ಕೊಪ್ಪಳ , ಇಕ್ಬಾಲ್ ಅನ್ಸಾರಿ ಶಾಸಕರು,ಗಂಗಾವತಿ ,ಬಸವರಾಜ್ ರಾಯರಡ್ಡಿ ಶಾಸಕರು,ಯಲಬುರ್ಗಾ ,ದೊಡ್ಡನಗೌಡ ಪಾಟೀಲ್  ಶಾಸಕರು,ಕುಷ್ಟಗಿ , ಹಾಲಪ್ಪ ಆಚಾರ್ ವಿಧಾನ ಪರಿಷತ್ ಸದಸ್ಯರು, ಟಿ.ಜನಾರ್ಧನ ಹುಲಗಿ,ಅಧ್ಯಕ್ಷರು ಜಿ.ಪಂ.ಕೊಪ್ಪಳ, ಕೆ.ಪಿ.ಮೋಹನ್ ರಾಜ್ ಜಿಲ್ಲಾಧಿಕಾರಿಗಳು,ಕೊಪ್ಪ, ಮಂಜುನಾಥ ಅಣ್ಣಿಗೇರಿ  ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಕೊಪ್ಪಳ, ಶ್ರೀಮತಿ ಅನ್ನಪೂರ್ಣ ಕಂದಕೂರಪ್ಪ ,ಜಿ.ಪಂ. ಉಪಾಧ್ಯಕ್ಷರು ,ಬಸವರಾಜ ಹಿಟ್ನಾಳ ,ಜಿಲ್ಲಾ ಅಧ್ಯಕ್ಷರು ಕಾಂಗ್ರೆಸ್ ಕೊಪ್ಪಳ,ಸಂಗಣ್ಣ ಕರಡಿ,ಜಿಲ್ಲಾ ಅಧ್ಯಕ್ಷರು ಬಿಜೆಪಿ,ಕೊಪ್ಪಳ ಎಸ್.ಬಿ.ಖಾದ್ರಿ ಜಿಲ್ಲಾ ಅಧ್ಯಕ್ಷರು ಜೆಡಿಎಸ್ ಕೊಪ್ಪಳ, ಅಮರೇಗೌಡ ಬಯ್ಯಾಪೂರ ಮಾಜಿ ಶಾಸಕರು,ಕುಷ್ಟಗಿ,ಪರಣ್ಣ ಮುನವಳ್ಳಿ ಮಾಜಿ ಶಾಸಕರು,ಗಂಗಾವತಿ ಹಾಗು ಅತಿಥಿಗಳಾಗಿ   ಶ್ರೀಮತಿ ಲತಾ ಸಂಡೂರ ಅಧ್ಯಕ್ಷರು ನಗರಸಭೆ,ಅಮ್ಜದ್ ಪಟೇಲ್ ಉಪಾಧ್ಯಕ್ಷರು ನಗರಸಭೆ,ಸರ್ವ ಸದಸ್ಯರು, ಬಿ.ವಿ.ತುಕಾರಾಂ ವಾರ್ತಾಧಿಕಾರಿಗಳು,ಕೊಪ್ಪಳ, ನಾಗರಾಜ  ಜುಮ್ಮಣ್ಣನವರ, ಅಧ್ಯಕ್ಷರು,ಜಿಲ್ಲಾ ಸರಕಾರಿ ನೌಕರರ ಸಂಘ,ಕೊಪ್ಪಳ.,ಕೊಟ್ರಪ್ಪ ಸಿ. ಸಹಾಯಕ ನಿರ್ದೆಶಕರು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ, ಶೇಖರಗೌಡ ಮಾಲೀಪಾಟೀಲ್ ಮಾಜಿ ಅಧ್ಯಕ್ಷರು, ಜಿಲ್ಲಾ ಕ.ಸಾ.ಪ .ಕೊಪ್ಪಳ ಆಗಮಿಸಲಿದ್ದಾರೆ. 
ಕೊಪ್ಪಳ ಮೀಡಿಯಾ ಕ್ಲಬ್‌ನ ಸದಸ್ಯರು ಈ ನಾಟಕವನ್ನು ಅಭಿನಯಿಸಲಿದ್ದಾರೆ. ಹಿರಿಯ ರಂಗಕರ್ಮಿ ಶ್ರೀಮತಿ ಸರೋಜಮ್ಮ ದುತ್ತರಗಿ ಯವರೂ ಸಹ ಈ ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ.  
ನಾಟಕ ಪ್ರವೇಶ ಉಚಿತವಾಗಿದ್ದು ಸಾರ್ವಜನಿಕರು,ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕೆಂದು ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷರಾದ ಸೋಮರಡ್ಡಿ ಅಳವಂಡಿ ಮನವಿ ಮಾಡಿಕೊಂಡಿದ್ದಾರೆ.  
Please follow and like us:
error