ವಲ್ಲಭ ಬಾಯಿ ಪಟೇಲ್‌ರ ೬೩ನೇ ಪುಣ್ಯ ತಿಥಿ ನಿಮಿತ್ಯ :ಏಕತಾ ಓಟ

 ಭಾರತದ ಉಕ್ಕಿನ ಮನುಷ್ಯ ಸರದಾರ ವಲ್ಲಭ ಬಾಯಿ ಪಟೇಲ್‌ರ ೬೩ನೇ ಪುಣ್ಯ ತಿಥಿ ನಿಮಿತ್ಯ ಇಂದು ದಿ.೧೫ ರಂದು ಬೆಳಿಗ್ಗೆ ೮.೩೦ ಕ್ಕೆ ಏಕತಾ ಓಟಕ್ಕೆ ನಗರದ ಶ್ರೀಗವಿಸಿದ್ದೇಶ್ವರ ಕಾಲೇಜ್ ಬಳಿಯಿಂದ ರಾಮಕೃಷ್ಣ ಆಶ್ರಮದ ಶ್ರೀಗಳು ಚಾಲನೆ ನೀಡುವರು ಗಡಿಯಾರ ಕಂಭದ ಮೂಲಕ ವಾಗಿ ಜವಾಹರ ರಸ್ತೆಯ ಮುಖಾಂತರ  ಸಂಚರಿಸಿ ಸಮಾರೋಪವು ಸರಕಾರಿ ಪದವಿ ಕಾಲೇಜಿನಲ್ಲಿ ಜರಗುವುದು.  
                       ಸರದಾರ ವಲ್ಲಭ ಬಾಯಿ ಪಟೇಲ್‌ರು ಹೈದ್ರಾಬಾದ್-ಕರ್ನಾಟಕವನ್ನು ಭಾರತ ದೇಶದಲ್ಲಿ ವಿಲೀನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಸ್ಮರಿಸಬಹುದು, ಈ ಏಕತಾ ಓಟಕ್ಕೆ ಜಿಲ್ಲೆಯ ಯುವಕರು, ನಾಗರಿಕರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡು ಯಶಸ್ವೀಗೊಳಿಸುವಂತೆ ಜಿಲ್ಲಾ ಸಂಚಾಲಕರಾದ   ಮಲ್ಲಪ್ಪ ಬೇಲೇರಿ ಹಾಗೂ ಸಹ ಸಂಚಾಲಕ ಗವಿಸಿದ್ದಪ್ಪ ಚಿನ್ನೂರು ನಾಗರಿಕರಲ್ಲಿ ವಿನಂತಿಸಿದ್ದಾರೆ.  

Leave a Reply