You are here
Home > Koppal News > ಈದ್‌ಮೀಲಾದ್ ಮೆರವಣಿಗೆಯಲ್ಲಿ ಕೆ.ಎಂ.ಸೈಯದ್ ಭಾಗಿ

ಈದ್‌ಮೀಲಾದ್ ಮೆರವಣಿಗೆಯಲ್ಲಿ ಕೆ.ಎಂ.ಸೈಯದ್ ಭಾಗಿ

 ಪ್ರವಾದಿ ಮೊಹಮ್ಮದ ಪೈಗಂಬರ್(ಸ)ರವರ ಜಯಂತಿ ಪ್ರಯಕ್ತ ನಗರದ ಪ್ರಮುಖ ರಸ್ತೆಗಳಲ್ಲಿ ಮಂಗಳವಾರ ಬೆಳಿಗ್ಗೆ ಮುಸ್ಲಿಂ ಸಮಾಜ ಬಾಂಧವರು ಪವಿತ್ರ ಮೆಕ್ಕಾ, ಮದೀನಾ ಸ್ತಬ್ತ ಚಿತ್ರಗಳ ಭವ್ಯ ಮೆರವಣಿಗೆ ಜರುಗಿತು   ಈ ಮೆರವಣಿಗೆಯಲ್ಲಿ ಸೈಯದ್ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ  ಹಾಗೂ ಸಮಾಜ ಸೇವಕರಾದ ಕೆ.ಎಂ.ಸೈಯದ್ ರವರು ಭಾಗವಹಿಸಿ ಪರಸ್ಪರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶುಭಾಷಯ ವಿನಿಮಯ ಮಾಡಿಕೊಂಡರು.
    ಹಬ್ಬಗಳು ಭಾವೈಕ್ಯತೆಯ ಸಂಕೇತವಾಗಿದ್ದು ಹಬ್ಬದ ಆಚರಣೆ ಮೂಲಕ ಮಹಾನ್ ಪ್ರವಾದಿ ಮೊಹಮ್ಮದ ಪೈಗಂಬರ್(ಸ) ರವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಜೀವನ ಸಾಗಿಸಬೇಕು ಅಂದಾಗ ಮಾತ್ರ ಬದುಕು ಸಾರ್ಥಕ ವಾಗುತ್ತದೆ ಪರಸ್ಪರ ಸೌಹಾರ್ದಯುವಾಗಿ ಬಾಳುವುದರ ಜೊತೆಗೆ ಇತರರ ನೋವು ನಲಿವುಗಳಿಗೆ ಸದಾ ಸ್ಪಂದನೆ ಇರಬೇಕು ಅದೇ ಮಾನವಧರ್ಮದ ಮೂಲ ಉದ್ದೇಶವಾಗಿದ್ದು ಅದೇನಮ್ಮ ಇಸ್ಲಾಂ ಧರ್ಮ ಪ್ರತಿಪಾದಿಸುತ್ತದೆ ಎಂದು ಸೈಯದ್ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ  ಹಾಗೂ ಸಮಾಜ ಸೇವಕರಾದ ಕೆ.ಎಂ.ಸೈಯದ್ ರವರು ಹೇಳಿದರು.  
 ಈ ಸಂದರ್ಭದಲ್ಲಿ ಅವರೊಂದಗೆ ಯುವ ನಾಯಕರಾದ ವಾಹಿದ್ ಸೋಂಪುರ್, ಅಬ್ದುಲ್ ಅಜೀಜ್, ಅಹಮ್ಮದ್ ಹುಸೇನ್ ಮುದಗಲ್, ಸಜಾದ್ ಸಾಬ್ ಕವಲೂರ್, ಸೈಯದ್ ಖಾದ್ರಿ ಸಾಹೇಬ್ ಸೇರಿದಂತೆ ಮೌಲಾನಾಗಳು, ಹಾಫೀಜ್ ಮತ್ತು ಮುಫ್ತಿಗಳು ಅಲ್ಲದೆ ಸಹಸ್ರಾರು ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡಿದ್ದರು.

Leave a Reply

Top