fbpx

ಜನಾರ್ಧನರಿಗೆ ಕಲ್ಯಾಣ ಕರ್ನಾಟಕ ಬಸವ ಪ್ರಶಸ್ತಿ ಪ್ರದಾನ

ಸ್ವಚ್ವ ಗ್ರಾಮ ಹಾಗೂ ಶೌಚಾಲಯ ಅಭಿಯಾನದ ಸಾಧನೆಗೆ ಮನ್ನಣೆ
ಕೊಪ್ಪಳ, ಮಾ. ೧೩. ಕೊಪ್ಪಳ ಜಿಲ್ಲೆಯನ್ನು ಬಯಲು ಶೌಚಾಲಯ ಮುಕ್ತ ಜಿಲ್ಲೆ ಮಾಡುವ ಸಂಕಲ್ಪತೊಟ್ಟಿರುವ ಜಿ. ಪಂ. ಅಧ್ಯಕ್ಷ ಟಿ. ಜನಾರ್ಧನ ಹುಲಿಗಿಯವರಿಗೆ ಇತ್ತೀಚೆಗೆ ನಗರದಲ್ಲಿ ನಡೆದ ಸಮಾರಂಭದಲ್ಲಿ ಕಲ್ಯಾಣ ಕರ್ನಾಟಕ ಬಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೊಪ್ಪಳದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಬ್ಲ್ಯೂಸ್ಟಾರ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳು ಜಂಟಿಯಾಗಿ ನೀಡುವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಜಿ. ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಮರೇಶ ಕುಳಗಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಅಶೋಕ ತೋಟದ, ತಾ. ಪಂ. ಅಧ್ಯಕ್ಷ ಮುದೇಗೌಡ ಮಾಲಿಪಾಟೀಲ, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ವೈ. ಸುದರ್ಶನರಾವ್, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ. ಗೊಂಡಬಾಳ, ಬಸನಗೌಡ ಬಿ.ಟಿ.ಪಾಟೀಲ ಇತರರು ಇದ್ದರು.
ಪ್ರಶಸ್ತಿ ಸ್ವೀಕರಿಸಿದ ಜನಾರ್ಧನರು, ಪ್ರಶಸ್ತಿ ಜಿಲ್ಲೆಯ ಎಲ್ಲಾ ಸ್ವಯಂಸೇವಕರಿಗೆ, ಗ್ರಾ.ಪಂ., ತಾ.ಪಂ., ಜಿ.ಪಂ. ಸದಸ್ಯರಿಗೆ ಅಧಿಕಾರಿಗಳಿಗೆ, ಸ್ವಯಂ ಸೇವಾ ಸಂಘಗಳಿಗೆ ಸಲ್ಲುವಂತಹದು, ಪ್ರಶಸ್ತಿ ನನ್ನ ಮೇಲೆ ದೊಡ್ಡ ಜವಾಬ್ದಾರಿ ಹೊರಿಸಿದೆ, ಅಧಿಕಾರದಲ್ಲಿರುವವರೆಗೆ ಹಾಗೂ ಮುಂದೆಯೂ ಸಮಾಜಕ್ಕೆ ಕೊಡುಗೆ ನೀಡುವದಾಗಿ ಭಾವುಕರಾಗಿ ಹೇಳಿದರು.
Please follow and like us:
error

Leave a Reply

error: Content is protected !!