You are here
Home > Koppal News > ಗಾಂಧೀ ಅಧ್ಯಯನ ಕೇಂದ್ರ ಉದ್ಘಾಟನಾ ಕಾರ್ಯಕ್ರಮ

ಗಾಂಧೀ ಅಧ್ಯಯನ ಕೇಂದ್ರ ಉದ್ಘಾಟನಾ ಕಾರ್ಯಕ್ರಮ

ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಕೊಪ್ಪಳದಲ್ಲಿ ಗಾಂಧೀ ಅಧ್ಯಯನ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ದಿನಾಂಕ ೦೬.೧೧.೨೦೧೪ರಂದು ಮುಂಜಾನೆ ೧೧.೩೦ ಗಂಟೆಗೆ ಜರುಗಿತು. ಮಾನ್ಯ ಆಯುಕ್ತರು ಕಾಲೇಜು ಶಿಕ್ಷಣ ಇಲಾಖೆ ಬೆಂಗಳೂರವರ ನಿರ್ದೇಶನದ ಮೇರೆಗೆ ಪ್ರತಿಯೊಂದು ಪದವಿ ಮಹಾವಿದ್ಯಾಲಯದಲ್ಲಿ ಗಾಂಧಿ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕೆನ್ನುವ ನಿಟ್ಟಿನಲ್ಲಿ ಅಧ್ಯಯನ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಪ್ರೊ. ಶರಣಬಸಪ್ಪ ಬಿಳಿಎಲಿ ಕೇಂದ್ರದ ಉದ್ದೇಶಗಳನ್ನು ವಿವರಿಸುತ್ತ ಗಾಂಧೀಜಿ ಆದರ್ಶಗಳು ಸರ್ವಕಾಲಿಕ ಪ್ರಸ್ತುತತೆಯನ್ನು ಹೊಂದಿರುವುದರಿಂದ ವಿದ್ಯಾರ್ಥಿಗಳು ಗಾಂಧಿ ತತ್ವಗಳನ್ನು ಅಳವಡಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ ಕೇಂದ್ರ ಸ್ಥಾಪನೆಯಾಗುತ್ತಿದೆ.
ಕಾರ್ಯಕ್ರಮದಲ್ಲಿ ಸ್ವಾತಂತ್ಯ ಹೋರಾಟದಲ್ಲಿ ಗಾಂಧೀಜಿಯ ಪಾತ್ರ ಕುರಿತು ಮಾತನಾಡಿದ ಇತಿಹಾಸದ ಉಪನ್ಯಾಸಕರಾದ ಶರಣಪ್ಪ ಉಮಚಗಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಶಾಂತಿ ಸತ್ಯಾಗ್ರಹ ಅಹಿಂಸೆಗಳೆಂಬ ಮಾನವೀಯ ಮೌಲ್ಯಗಳನ್ನು ಅಳವಡಿಸುವ ಮೂಲಕ ವಿಶೇಷತೆಯನ್ನು ತಂದುಕೊಟ್ಟರು. ಇಂತಹ ಹೋರಾಟ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಪ್ರೇರಣೆ ನೀಡಿತು. ಗಾಂಧೀಜಿಯವರು ಕೇವಲ ಭಾರತಕ್ಕೆ ಸೀಮಿತರಾಗಿರದೇ ಜಾಗತಿಕ ನಾಯಕರಲ್ಲಿ ತಮ್ಮ ವಿಶೇಷ ತತ್ವಗಳಿಂದ ವಿಭಿನ್ನರಾಗಿ ಗೋಚರಿಸುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಪ್ರೊ.ಎಸ್.ಎಲ್.ಮಾಲೀಪಾಟೀಲರವರು ಸರಳ ಜೀವನ ಉನ್ನತ ಚಿಂತನೆ ಗಾಂಧೀಜಿಯವರ ಜೀವನ ಸಂದೇಶವಾಗಿದ್ದು, ವಿದ್ಯಾರ್ಥಿ ಜೀವನದಲ್ಲಿಯೇ ಗಾಂಧೀಯ ತತ್ವಗಳನ್ನು ಅಧ್ಯಯನ ಮಾಡುವದರಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು. ಈ ನಿಟ್ಟಿನಲ್ಲಿ ಗಾಂಧೀ ಅಧ್ಯಯನ ಕೇಂದ್ರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಅವಕಾಶ ಕೊಡುತ್ತದೆ ಎಂದರು. 
ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ವಿರೂಪಾಕ್ಷಿ ಕೈಗೊಂಡರೆ, ಸ್ವಾಗತ ಮತ್ತು ಪರಿಚಯವನ್ನು ಕು. ಪೂರ್ಣಿಮಾರವರು ನಿರ್ವಹಿಸಿದರು. ಗವಿಕುಮಾರ ವಂದನಾರ್ಪಣೆಗೈದರು.

Leave a Reply

Top