ಅನುದಾನದ ಸದ್ಬಳಕೆ ಮಾಡಿಕೊಳ್ಳಿ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ: ಎ, ೦೭ ಕ್ಷೇತ್ರದ ನೀರಲಗಿ, ತಿಗರಿ, ನೇಲೋಗಿಪೂರ, ಗ್ರಾಮಗಳಲ್ಲಿ ಎಸ್.ಟಿ.ಪಿ. ಯೋಜನೆಯಡಿಯಲ್ಲಿ ಅಂದಾಜು ಮೊತ್ತ ರೂ.೭೫ ಲಕ್ಷದ ಸಿಸಿ ರಸ್ತೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಯೋಜನೆಯಡಿಯಲ್ಲಿ ರೂ. ೧೦ ಲಕ್ಷದ ನೇಲೋಗಿಪೂರ ಗ್ರಾಮದಲ್ಲಿ ಸಮುದಾಯ ಭವನದ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ರಾಜ್ಯದ ಜನಪ್ರೀಯ ಕಾಂಗ್ರೇಸ್ ಸರ್ಕಾರದ ಅವದಿಯಲ್ಲಿ ಗ್ರಾಮಗಳ ವಿಕಸಯೋಜನೆಯಡಿಯಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗುತ್ತಿದ್ದು, ಗ್ರಾಮದ ಜನತೆ ಹಾಗೂ ವಿದ್ಯಾವಂತ ಯುವಕರು ಗ್ರಾಮ ಅಭಿವೃದ್ಧಿಗೆ ಹೆಚ್ಚುಒತ್ತುಕೊಟ್ಟು ಗ್ರಾಮಗಳ ನೈರ್ಮಲ್ಯೀಕರಣಕ್ಕೆ ಶ್ರಮೀಸಬೇಕು. ಪ್ರತಿಯೊಬ್ಬರು ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಂಡು ರೋಗ-ರುಜಿನಗಳು ಬರದಂತೆ ಗ್ರಾಮದ ಸ್ವಚ್ಛತೆಬಗ್ಗೆ ಅರಿವು ಮುಡಿಸಬೇಕು. ಕಾಮಗಾರಿಯ ಗುಣಮಟ್ಟವನ್ನು ಅರಿತು ಕಳಪೆ ಕಾಮಗಾರಿಗಳು ನಡೆಯುತ್ತಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೂ ಹಾಗೂ ಶಾಸಕರ ಗಮನಕ್ಕೆ ತರಬೇಕು. ಅಭಿವೃದ್ಧಿ ವಿಷಯದಲ್ಲಿ ರಾಜಿ ಸಲ್ಲದು, ಅಭಿವೃದ್ಧಿ ಕಾರ್ಯಗಳಿಗೆ ಪಕ್ಷಬೇದ ಮರೆತು ಎಲ್ಲರೂ ಕೈಜೋಡಿಸಿದಾಗ ಮಾತ್ರ ಸರ್ಕಾರ ನೀಡುವ ಅನುದಾನಕ್ಕೆ ಹೆಚ್ಚಿನ ಮಹತ್ವ ಬರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅದ್ಯಕ್ಷರಾದ ಕೇಶವರೆಡ್ಡಿ,  ಹನುಮರೆಡ್ಡಿ ಹಂಗನಕಟ್ಟಿ, ನೇಲೋಗಿಪೂರ ಗ್ರಾ.ಪಂ.ಅದ್ಯಕ್ಷರಾದ, ಎಲ್ಲಪ್ಪ ಮುಕ್ಕಣ್ಣ, ಹಟ್ಟಿ ಭರಮಪ್ಪ, ಜಯಪ್ಪ ತಿಗರಿ, ಹೊನ್ನಪ್ಪ ಗೌಡ, ಜಗದೀಶ ಕರ್ಕಿಹಳ್ಳಿ, ಶಿವಲಿಂಗ ಹಿಟ್ನಾಳ, ನಾರಾಯಣಪ್ಪ ಬೇಟಗೇರಿ, ಪಂಪಣ್ಣಕತ್ತಿ, ಬಸವರಾಜಕತ್ತಿ, ನಿರ್ಮೀತಿ ಅಭಿಯಂತರರಾದ ಮಹದೇವಪ್ಪ, ಬೂಸೇನಾ ನಿಗಮದ ಬಸವರಾಜ ಆನೆಗುಂದಿ, ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.

Related posts

Leave a Comment