ಅಂತರಂಗದ ಕತ್ತಲೆಯನ್ನು ತೊಲಗಿಸಲು ಜ್ಞಾನದ ಬೆಳಕು ಅವಶ್ಯಕ – ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು-

ಭಾಗ್ಯನಗರ:- ಬಾಹ್ಯ ಕತ್ತಲನ್ನು ಓಡಿಸಲು ಬೆಳಕು ಹೇಗೆ ಅಗತ್ಯವೋ ಹಾಗೇ ಅಂತರಂಗದ ಕತ್ತಲನ್ನು ಅಳಿಸಲು ವಿದ್ಯೆಯೆಂಬ ಜ್ಞಾನದ ಬೆಳಕು ಅವಶ್ಯಕ ಎಂದು ಸಂಸ್ಥಾನ ಶ್ರೀಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಅವರು ಇಲ್ಲಿನ ಪಯೋನಿಯರ್ ಪಬ್ಲಿಕ್ ಸ್ಕೂಲ್‍ನ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.  ಯಾವುದು ಸದಾ ಇರುತ್ತದೆಯೋ ಅದು ಸಂಪತ್ತು.  ಕಳ್ಳರು ಕದಿಯದ, ಅಣ್ಣ ತಮ್ಮಂದಿರು ಪಾಲು ಕೇಳದ, ಎಂದೂ ಅಳಿಯದ ಸಂಪತ್ತೆಂದರೆ ವಿದ್ಯಾ ಸಂಪತ್ತು ಮಾತ್ರ.  ಕೇವಲ ಆಂಗ್ಲ ಭಾಷೆ ಮಾತ್ರ ಶಿಕ್ಷಣ ಎಂದು ಭಾವಿಸದೆ ಉತ್ತಮ ಸಂಸ್ಕಾರಗಳನ್ನು ನೀಡುವ ಮೂಲಕ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿ ಜೀವನ ದರ್ಶನ ಮಾಡಿಸಿ ಎಂದು ಪಾಲಕರಿಗೆ ಕರೆ ನೀಡಿದರು.  ಮೌಲ್ಯಗಳ ಮೂಲಕ ಜ್ಞಾನದ ಬೆಳಕನ್ನು ಪಸರಿಸುವಂತೆ ಸಂಸ್ಥೆಯ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರಾದ ಶಿವರಾಜ್ ತಂಗಡಿ  ಮಾತನಾಡಿ ಹಿಂದೆ ಮಕ್ಕಳನ್ನು ದಂಡಿಸುವಂತೆ ಪೋಷಕರು ಶಿಕ್ಷಕರಿಗೆ ಹೇಳುತ್ತಿದ್ದರು ಆದರೆ ಇಂದು ದಂಡಿಸದಂತೆ ಹೇಳುತ್ತಾರೆ. ಶಿಕ್ಷಕರ ಮೇಲೆ ವಿಶ್ವಾಸವಿಟ್ಟು ಕಲಿಸಲು ಸ್ವಾತಂತ್ರ್ಯ ನೀಡುವುದು ಅಗತ್ಯವಿದೆ, ಈ ವಿಶ್ವಾಸವನ್ನು ಶಿಕ್ಷಕರೂ ಉಳಿಸಿಕೊಳ್ಳಬೇಕೆಂದು ತಿಳಿಸಿದರು. 
ಶಾಸಕ ರಾಘವೇಂದ್ರ ಹಿಟ್ನಾಳ್ ಉತ್ತಮ ಶಿಕ್ಷಣ ಸಂಸ್ಥೆಗಳು ಪ್ರಾರಂಭಗೊಂಡು ,ಗುಣಮಟ್ಟದ ಶಿಕ್ಷಣದ ಮೂಲಕ ಉತ್ತಮ ಸಮಾಜ ನಿರ್ಮಾಣವಾಗುತ್ತದೆ.  ಗ್ರಾಮದಲ್ಲಿ ಈ ಶಾಲೆ ಪ್ರಾರಂಭಗೊಂಡಿರುವುದು ಸಂತಸದ ಸಂಗತಿಯೆಂದು ತಿಳಿಸಿದರು.
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕೃಷ್ಣ ಎಂ. ಇಟ್ಟಂಗಿಯವರು ವಹಿಸಿದ್ದರು.  ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯ ಮಠದ ಶ್ರೀ ಪರಮಹಂಸ ಶಿವಪ್ರಕಾಶಾನಂದ ಬಾರತಿ ಸ್ವಾಮಿಗಳು, ಶ್ರೀಕ್ಷೇತ್ರ ನಂದೀಪುರ ಶ್ರೀ ಮಹೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.  ಶೈಕ್ಷಣಿಕ ಸಲಹೆಗಾರ ಬಿ.ರಾಜಕುಮಾg,À ರಾಘವೇಂದ್ರ ಪಾನಗಂಟಿ, ಗ್ರಾ.ಪಂ.ಅಧ್ಯಕ್ಷ ಹೊನ್ನೂರಸಾಬ್ ಭೈರಾಪುರ, ತಾಪಂ.ಸದಸ್ಯ ಶ್ರೀನಿವಾಸ ಹ್ಯಾಟಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಯಮನಪ್ಪ ಕಬ್ಬೇರ್, ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಶಂಭುಲಿಂಗನಗೌಡ, ಸಂಸ್ಥೆಯ ಕಾರ್ಯದರ್ಶಿ ಕೃಷ್ಣ ಎ.ಕಬ್ಬೇರ, ಉಪಾಧ್ಯಕ್ಷ ಸುರೇಶ್ ಎನ್.ಕಠಾರೆ ಮುಂತಾದವರ ಉಪಸ್ಥಿತರಿದ್ದರು.  ಅರವಿಂದ್ ಪ್ರಾರ್ಥಿಸಿ, ಪ್ರಾಂಶುಪಾಲ ಆರ್.ದತ್ತಾತ್ರೇಯ ಆರ್.ಸಾಗರ್ ನಿರೂಪಿಸಿದರು.  ಶಿಕ್ಷಕಿಯರಾದ ಶ್ರೀದೇವಿ ಕಡಕೋಳ ಸ್ವಾಗತಿಸಿ, ರೀತು ಮೆಹರ್ವಾಡೆ ವಂದಿಸಿದರು. ತುರ್ತು ಕಾರ್ಯದ ನಿಮಿತ್ತ ಕಾರ್ಯಕ್ರಮಕ್ಕೆ ಮೊದಲೇ ಆಗಮಿಸಿದ ಸಂಸದ ಕರಡಿ ಸಂಗಣ್ಣ ಶಾಲೆಗೆ ಭೇಟಿ ನೀಡಿ  ತೆರಳಿದ್ದರು.

Please follow and like us:
error