ಜನಜಾಗೃತಿ ಬೀದಿನಾಟಕ ಪ್ರದರ್ಶನ ಯಶಸ್ವಿ

ಕೊಪ್ಪಳ ಡಿ.೧೯  : ಕೊಪ್ಪಳ ನಗರದ ಕೇಂದ್ರಿಯ ಬಸ್ ನಿಲ್ದಾಣದ ಆವರಣದಲ್ಲಿ ಸೋಮವಾರ ಸಂಜೆ ಜಿಲ್ಲಾ ಕಾರ್ಮಿಕ ಯೋಜನಾ ಸಂಘ, ಜಿಲ್ಲಾಧಿಕಾರಿಗಳ ಕಾರ್ಯಾಲಯ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಜನಜಾಗೃತಿ ಬೀದಿನಾಟಕ ಪ್ರದರ್ಶನವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. 
ಬೀದಿನಾಟಕದ ಉದ್ಘಾಟನೆಯನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ ಅವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಸಂಚಾರಿ ಆಫಿಸರ್ ವಿವೇಕ ಡಿವಿಜನಲ್ ಅವರು ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಮಹಾಂತೇಶ ಸಜ್ಜನ್, ಬಸ್ ನಿಲ್ದಾಣ ಡೀಪೊ ಮ್ಯಾನೇಜರ್ ಬಿ.ವೈ.ಭಟ್ಟರ್, ಕಾರ್ಮಿಕ ಕಲ್ಯಾಣ ಅಧಿಕಾರಿ ಮಹಾಂತೇಶ, ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕರಾದ ಬಸವರಾಜ ಹಿರೇಗೌಡ್ರು ಅನೇಕರು ಆಗಮಿಸಿದ್ದರು. 
ಬಸವರಾಜ ಹಿರೇಗೌಡ್ರು ಸ್ವಾಗತಿಸಿದರು. ಉದ್ಘಾಟಕರು ಹಾಗೂ ಅತಿಥಿಗಳು ತಮಟೆ ಬಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕಲಾವಿದ ಶಿವಮೂರ್ತಿ ಮೇಟಿ ನೇತೃತ್ವದ ಚೇತನ ಸಾಂಸ್ಕೃತಿಕ ಕಲಾ ಸಂಸ್ಥೆ ಓಜನಹಳ್ಳಿ ತಂಡದಿಂದ ಜಾಗೃತಿ ಗೀತೆಗಳು ಹಾಗೂ ‘ಕಳಿಸಬ್ಯಾಡವ್ವ ಕೆಲಸಕ್ಕೆ’ ಎಂಬ ನಾಟಕ ಪ್ರದರ್ಶಿಸಲಾಯಿತು. 

Leave a Reply