ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳಿ: ಬಸವರಾಜಯ್ಯ

ಅವರು ನಗರದ ಸಿ.ಎಸ್.ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿಸ್ತಾರ ಸಂಸ್ಥೆಯಬೆಂಗಳೂರವರ  ಸಹ ಭಾಗಿತ್ವದಲ್ಲಿ ಹಮ್ಮೀಕೊಂಡಿದ್ದ ೨ ದಿನದ ಲಿಂಗತ್ವತರಭೇತಿಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ, ಶಿಕ್ಷಕರಿಗೆ ಇಲಾಖೆಯ ವತಿಯಿಂದತರಭೇತಿ ಹಾಗೂ ಹಲವಾರು ವಿಷಯಗಳ ಕುರಿತು.ಕಾರ್ಯಾಗಾರವನ್ನು ಹಮ್ಮಿಕೊಳ್ಳುತ್ತಿದ್ದು, ಶಿಕ್ಷಕರು ಸರಿಯಾದರೀತಿಯಲ್ಲಿಕಾರ್ಯಗಾರವನ್ನು ಸದುಪಯೋಗ ಪಡಿಸಿಕೊಂಡು ತರಗತಿಗಳಲ್ಲಿ ಅದರ ಬಳಕೆಮಾಡಿಕೊಂಡಾಗ ಮಾತ್ರ ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ಸಾದ್ಯಎಂದು ಹೇಳಿದರು. 
ಪ್ರಸ್ತಾವಿಕವಾಗಿ ವಿಸ್ತಾರಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಆಶಾ ಮಾತನಾಡುತ್ತಾ  ಲಿಂಗತ್ವತರಬೇತಿ ಕೇವಲ ಸಮುದಾಯದಲ್ಲವರಿಗೆ ಶಿಕ್ಷಕರಿಗೆ ನೀಡುವದರಿಂದ ಸಮಾಜದಲ್ಲಿಅತ್ಯಾಚಾರದಂತಹ ಪ್ರಕರಣಗಳನ್ನು ತಡೆಗಟ್ಟಲು ಸಾಧ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣಾಧಿಕಾರಿಗಳಾದ ವೈ ಸುದರ್ಶನರಾವ್ ,ವಿಸ್ತಾರಸಂಸ್ಥೆಯ ಸಂಪನ್ಮೂಲ ವ್ಯಕ್ತಗಳಾದ ಶ್ರೀಮತಿ ಶೈಲಜಾ ,ಶಿಕ್ಷಕರು ಹಾಜರಿದ್ದರು.ಶಿಕ್ಷಕರಾದ ಬೀರಪ್ಪಅಂಡಗಿ ಚಿಲವಾಡಗಿಕಾರ್ಯಕ್ರಮವನ್ನು ನಿರೂಪಿಸಿದರು.ಶಾಲೆಯ ಮುಖ್ಯೋಪಾದ್ಯಾಯರಾದ ಭರಮಪ್ಪಕಟ್ಟಿಮನಿ ಸ್ವಾಗತಿಸಿ,ಪ್ರಭುರಾಜ ಬಳಿಗಾರ ಎಲ್ಲರಿಗೂ ವಂದಿಸಿದರು.
Please follow and like us:
error