You are here
Home > Koppal News > ಸಂವಿಧಾನ ದಿನಾಚರಣೆ.

ಸಂವಿಧಾನ ದಿನಾಚರಣೆ.

ಕೊಪ್ಪಳ-26- ನಗರದ ಅಂಬೇಡ್ಕರ ವೃತ್ತದಲ್ಲಿ ಸಂವಿಧಾನದ ದಿನಾಚರಣೆಯ ಅಂಗವಾಗಿ ಅಂಜುಮನ ಕಮೀಟಿ ಮತ್ತು ಮುಸ್ಲಿಂ ಸಮಾಜದ ಯುವಕರು ಅಂಬೇಡ್ಕರವರ ಭಾವ ಚಿತ್ರಕ್ಕೆ ಮಾರ್ಲಾಪಣೆ ಮಾಡುವ ಮೂಲಕ ಸಂವಿಧಾನದ ದಿನಾಚರಣೆ ಆಚರಣೆ ಮಾಡಲಾಯಿತು. ಈ ಸಂಬರ್ಭದಲ್ಲಿ ಮುಸ್ಲಿಂ ಸಮಾಜದ ಯುವಕರಾದ ಸೈಯದ್ ಮಹೆಮೂದ ಹುಸೇನಿ ಅವರು ಮಾತನಾಡಿ ಈ ದೇಶದಲ್ಲಿ ದಲಿತರ ಮೇಲೆ ಹಲವು ಕಡೆ ದಲಿತರನ್ನ ಅವಮಾನ ಮಾಡುವ ಕೆಲವರು ಈ ಶೆಡ್ಯಾಂತರ ನಡೆಸುತ್ತಿದ್ದಾರೆ, ದಲಿತರೆ ನೀವು ಯಾವುದೇ ಕಾರಣಕ್ಕೂ ಭಯ ಪಡುವಂತಿಲ್ಲಾ ನಿಮ್ಮ ಜೊತೆ ನಮ್ಮ ಮುಸ್ಲಿಂ ಸಮಾಜ ಇದೆ ಎಂದು ಈ ಸಂದರ್ಭದಲ್ಲಿ ಹೇಳಿದರು ಈ ಸಂದರ್ಭದಲ್ಲಿ ಅಂಜುಮನ್ ಕಮೀಟಿಯ ಅಧ್ಯಕ್ಷರಾದ ಎಂ ಫಾಷಾ ಕಾಟನ್, ಮಾನ್ವಿ ಪಾಷಾ, ಗಪಾರ್ ಡಿಡ್ಡಿ, ಜಾಫರ್ ಸಂಗಟಿ, ಅಪ್ಸರ್ ವಕೀಲ್, ಸೈಯದ್ ಮಹೆಮೂದ ಹುಸೇನಿ, ಆರ್. ಎಂ ರಫಿ, ಯುಸೂಪ್ ಮಾಳೇಕೊಪ್ಪ, ದಸ್ತಗೀರ (ಡಿ.ಕೆ) ಸಲೀಂ ಗೊಂಡಬಾಳ, ಖಲೀಲ್ ಮಾನ್ವಿ, ಮಾಜೀದ್ ಖಾನ್, ಸಲೀಂ ಖಾದ್ರಿ, ಮರ್ಧಾನ, ಸದ್ದಾಂ ಖಾಜಿ,  ಎಂ.ಕೆ, ಇರ್ಪಾನ್, ಹಾಗೂ ಇನ್ನು ಮುಂತಾದವರು ಉಪಸ್ಥಿತರಿದ್ದರು.

Leave a Reply

Top