ನೇತ್ರದಾನ ಮಹಾದಾನ

ವಿರೇಶ್ವರ ಮಠದ ಕಾಲಜ್ಞಾನಿ ಬ್ರಹ್ಮ ಸದ್ಗುರು ಶ್ರೀಶರಣ ಬಸವ ಮಹಾಸ್ವಾಮಿಗಳು ಹಿರೇಮಠ 
ನೇತ್ರದಾನ ಮಹಾದಾನ ಸಾರ್ವಜನಿಕರು ತಮ್ಮ ಕಣ್ಣುಗಳನ್ನು ದೃಷ್ಟಿ ದೋಷ ಇರುವವರಿಗೆ ದಾನ ಮಾಡಿ ಸಮಾಜದ ಋಣ ತೀರಿಸಬೇಕು
ಕೊಪ್ಪಳ: ದೇಹದ ಅಂಗಾಗಳ ಬಗೆಯಲ್ಲಿಕಣ್ಣುಗಳ ಪಾತ್ರ ಬಹು ಮುಖ್ಯ ಆದುದರಿಂದ ಸಾರ್ವಜನಿಕರು ತಮ್ಮ ಕಣ್ಣುಗಳನ್ನು ಮತ್ತೊಬ್ಬರಿಗೆ ದಾನ ಮಾಡಿ ಮಾನವೀಯತೆ ಮರೆದು ಸಮಾಜಕ್ಕೆ ಮಾದರಿಯಾಗಬೇಕು ಎಂದು ಟನಕನಕಲ್ ವಿರೇಶ್ವರ ಮಠದ ಕಾಲಜ್ಞಾನಿ ಬ್ರಹ್ಮ ಸದ್ಗುರು ಶ್ರೀಶರಣ ಬಸವ ಮಹಾಸ್ವಾಮಿಗಳು ಹಿರೇಮಠ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಆರ್ಶಿವಚನ ನೀಡಿದರು.
ಕೊಪ್ಪಳ ಜಿಲ್ಲಾ ಅಂಧತ್ವ ನಿವಾರಣಾ ಸಂಘ, ಕುಷ್ಟಗಿಯ ವಿನಾಯಕ ಆಪ್ಟಿಕಲ್, ಹುಬ್ಬಳ್ಳಿಯ ಎಂ.ಎಂ ಜೋಷಿ ನೇತ್ರ ವಿಜ್ಞಾನ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ತಾಲೂಕಿನ ಇರಕಲಗಡಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಸಾನಿಧ್ಯವಹಿಸಿ ಆರ್ಶಿವಚನ ನೀಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾರ್ವಜನಿಕರ ಆರೋಗ್ಯದ ಸಲುವಾಗಿ ಅನೇಕ ಯೋಜನೆಗಳನ್ನು ರೊಪಿಸಿದ್ದು ಕಾರಣ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೋಳ್ಳಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡಿಕೋಳ್ಳದೇ ಇಂತಹ ಸಾರ್ವಜನಿಕ ಉಚಿತ ಕಣ್ಣಿನ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಕಣ್ಣಿನ ತೊಂದರೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೋಳ್ಳುಬೇಕು ಎಂದು ಶುಭ ಹಾರೈಸಿದರು. 
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ವೀರಬಸಪ್ಪ ಪಟ್ಟಣ್ಣಶೆಟ್ಟರ ಮಾತನಾಡಿ ನೇತ್ರ ತಜ್ಞರಾದ ಡಾ. ಎಂ.ಎಂ ಜೋಷಿ ನೇತ್ರ ವಿಜ್ಞಾನ ಸಂಸ್ಥೆಯು ಕೈಗೊಳ್ಳುತ್ತಿರುವ ಇಂತಹ ಉಚಿತ ಕಣ್ಣಿನ ಶಿಬಿರಗಳು ಉತ್ತರ ಕರ್ನಾಟಕ ಭಾಗದಲ್ಲಿ ತುಂಬಾ ಯಶಸ್ವಿಯಾಗಿದ್ದು ಸ್ಲಾಘನೀಯ ವಿಷಯ ಎಂದು ಹೇಳಿದರು.  ಉಳ್ಳವರು ರಾಜ್ಯದ ಅನೇಕ ಬೃಹತ ಪ್ರಮಾಣದ ಕಣ್ಣಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೋಳ್ಳುತ್ತಾರೆ ಆದರೇ ಗ್ರಾಮೀಣ ಮಟ್ಟದ ಸಾರ್ವಜನಿಕರು ಬೃಹತ್ ಮಟ್ಟದ ಆಸ್ಪತ್ರೆಗಳಲ್ಲಿ ಸಾಧ್ಯವಿಲ್ಲಿ ಈ ಕಾರಣ ದಿಂದ ಡಾ,ಎಂ.ಎಂ ಜೋಷಿಯವರು ಇಂತಹ ಉಚಿತ ಕಣ್ಣಿನ ಶಿಬಿರಗಳನ್ನು ಆಯೋಜಿಸಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಕಸ್ತೂರಮ್ಮ ಬಸವನಗೌಡ ಪಾಟೀಲ್ ಉಚಿತ ಕಣ್ಣಿತ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಿವಮ್ಮ ಶೇಖರಪ್ಪ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಹುಬ್ಬಳ್ಳಿಯ ಎಂ.ಎಂ ಜೋಷಿ ನೇತ್ರ ವಿಜ್ಞಾನ ಸಂಸ್ಥೆಯ ನೇತ್ರ ತಜ್ಞೆ ಡಾ.ವಿಜಯ ಲಕ್ಷ್ಮೀ, ಉಚಿತ ಕಣ್ಣಿನ ಶಿಬಿರದ ಸಂಯೋಜಕ ಡಾ.ಸಂಜಿವ ಕುಲಕರ್ಣಿ, ತಾಲೂಕು ಪಂಚಾಯ್ತಿ ಉಪಾಧ್ಯಕ್ಷೆ ಲಕ್ಷ್ಮವ್ವ ನೂರೇಶ್ ಪವಾರ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಶರಣಪ್ಪ ಪಟ್ಟಣ್ಣಸೆಟ್ಟರ್, ಗ್ರಾಮದ ಮುಖಂಡರಾದ ವೀರಬಸಪ್ಪ ಶೆಟ್ಟರ, ವೀರಣ್ಣ ಹನ್ಸಿ, ರವೀಂದ್ರ ಪಟ್ಟಣ್ಣಶೆಟ್ಟರ್, ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಮಾಂಜನೇಯ, ಡಾ.ಇರ್ಪಾನಾ ಬಿ ಅಂಜುಮನ್ ವೈದಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಕಿನ್ನಾಳ, ಕಿರಿಯ ಆರೋಗ್ಯ ಸಹಾಯಕಿ ಶೈಲಜಾ ಪಾಟೀಲ್, ಹಿರಿಯ ಆರೋಗ್ಯ ಸಹಾಯಕಿ ಸುಮಿತ್ರಾ ಬಿ ಚನ್ನ, ರಕ್ತ ಪರೀಕ್ಷಕ ಅಣ್ಣಪ್ಪ ಅಂಗಡಿ, ದಶರತ ಮತ್ತಿತರರು ಉಪಸ್ಥಿತರಿದ್ದರು. ಸರಕಾರಿ ಕಿರಿಯ ಪ್ರಾತಮಿಕ ಶಾಲೆಯ ವಿದ್ಯಾರ್ಥಿಗಳಾದ ಆಶಾ ಮತ್ತು ಕಾವ್ಯ ಪ್ರಾರ್ಥಿಸಿದರು. ಫಾರ್ಮಾಸಿಸ್ಟ್ ಸುರೇಶ ಮೋರಗೇರಿ ಕಾರ್ಯಕ್ರಮ ನಿರೂಪಿಸಿದರು. ಕಿರಿಯ ಆರೋಗ್ಯ ಸಹಾಯಕಿ ಬಸಮ್ಮ ಸ್ವಾಗತಿಸಿದರು. ಕಿರಿಯ ಆರೋಗ್ಯ ಸಹಾಯಕ ಕಾಶಪ್ಪ ಹಳ್ಳಿ ವಂದಿಸಿದರು. ಉಚಿತ ಕಣ್ಣಿನ ಶಿರದಲ್ಲಿ ಸುಮಾರ ೨೫೦ಕ್ಕು ಹೆಚ್ಚು ಜನರು ಕಣ್ಣುಗಳ ತಪಾಸಣೆ ಮಾಡಿ ಅವರಲ್ಲಿ ಕಣ್ಣಿನಲ್ಲಿ ಪೊರೆ ಹೊಂದಿದ ೪೦ ಜನರನ್ನು ಶಸ್ತ್ರ ಚಿಕಿತ್ಸೆಗಾಗಿ ಸಾರಿಗೆ ಬಸ್ಸ ಮೂಲಕ ಹುಬ್ಬಳ್ಳಿಯ ಎಂ.ಎಂ ಜೋಷಿ ಆಸ್ಪತ್ರಗೆ ಕಳುಹಿಸಲಾಯಿತು. 

Leave a Reply