ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬೂದಿಹಾಳ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ

೬೬ ನೇ ಪ್ರಜಾರಾಜ್ಯೋತ್ಸವದ ಅಂಗವಾಗಿ ಬೂದಿಹಾಳ ಗ್ರಾಮದ ಗ್ರಾಮದೇವತೆ ದೇವಸ್ಥಾನದ ಆವರಣದಲ್ಲಿ ಶ್ರೀಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕೊಪ್ಪಳ ಮತ್ತು ಸ್ವ ಸಹಾಯ ಹಾಗೂ ಪ್ರಗತಿ ಬಂದು ಸದಸ್ಯರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಗ್ರಾ. ಪಂ. ಉಪಾಧ್ಯಕೆ ಲಕ್ಷ್ಮವ್ವ ನಿಂಗಜ್ಜ ಹಳ್ಳಿ ವಹಿಸಿದ್ದರು, ಮುಖ್ಯೋಪಾದ್ಯಾಯ ವಿಶ್ವನಾಥ ಪಲ್ಲೇದ ಜ್ಯೋತಿ ಬೆಳಗಹಿಸುವ ಮೂಕಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅಥಿಗಳಾಗಿ, ಕೆ. ಅಣ್ಣಪ್ಪ. ಗ್ಯಾನಜ್ಜ ಬಂಡೆಪ್ಪನವರ, ಮಹಾದೇವಯ್ಯ, ಗವಿಸಿದ್ದಪ್ಪ ಹಳ್ಳಿ, ಯಲ್ಲಪ್ಪ, ಶಂಕ್ರಪ್ಪ ಉಪಸ್ಥಿತರಿದ್ದರು. 
ಮಲ್ಲಪ್ಪ ನಿರೂಪಿಸಿದರು. ವಿರೇಶ ಅಳವಂಡಿ ಸ್ವಾಗತಿಸಿದರು. ಸುದೀರ ಬಾಬು ವಂದಿಸಿದರು. ಬೂದಿಹಾಳ ಗ್ರಾಮದ ಪ್ರಮೂಕ ಬೀದಿಗಳಲಿ ಸ್ವಚ್ಚತೆ ಮಾಡುವ ಮೂಲಕ ಜಾಗೃತಿ ಮೂಡಿಸಲಾಯಿತು. 
ಶಾಲಾ ಮಕ್ಕಳು, ಶಿಕ್ಷಕರು, ಸ್ವ ಸಹಾಯ ಸಂಘಧ ಮಹಿಳೆಯರು, ಪ್ರಗತಿ ಬಂದು ಗುಂಪಿನ ಸದಸ್ಯರು, ಗ್ರಾಮದ ಗುರು ಹಿರಿಯರು ಪಾಲ್ಗೊಂಡು ಯಶ್ವಸ್ವಿ ಗೊಳಿಸಿದರು. 

Leave a Reply