ಕಾರ್ಮಿಕರ ಪರವಾಗಿ ೧೦ ಅಂಶಗಳ ಬೇಡಿಕೆಗಳಿಗೆ ಒತ್ತಾಯಿಸಿ ಸಿಐಟಿಯುನಿಂದ ಸಾಂಕೇತಿಕ ಪ್ರತಿಭಟನೆ

ಕೊಪ್ಪಳ, ಫೆ.೨೬ : ದೇಶದ ಕಾರ್ಮಿಕರ ಪರವಾಗಿ ೧೦ ಅಂಶಗಳ ಬೇಡಿಕೆಗಳಿಗಾಗಿ ಕಳೆದ ೨೦೧೧ ರಿಂದ ಸಿಐಟಿಯು ನಿರಂತರ ಹೋರಾಟ ನಡೆಸುತ್ತಿದ್ದು ಅದರ ಅಂಗವಾಗಿ ನಗರದ ಜಿಲ್ಲಾ ಸಿಐಟಿಯು ಇಲ್ಲಿನ  ಅಶೋಕ ವೃತ್ತದದಲ್ಲಿ ಪ್ರತಿಭಟನೆ ನಡೆಸಿ ರಾಜ್ಯಪಾಲ ವಜುಬಾಯಿ ವಾಲ ರವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ರಾಷ್ಟ್ರದ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ದೇಶದ ಕಾರ್ಮಿಕರ ಪರವಾಗಿ ೧೦ ಅಂಶಗಳ ಬೇಡಿಕೆಗಳಿಗಾಗಿ ೨೦೧೧ ರಿಂದ ಹೋರಾಟಗಳಲ್ಲಿ ನಿರತವಾಗಿವೆ. ಈ ನಿಟ್ಟಿನಲ್ಲಿ ೨೦೧೨ ಫೆಬ್ರವರಿ ೨೮’ರ ಒಂದು ದಿನದ ಮುಷ್ಕರ, ಆನಂತರ ೨೦೧೩ ಫೆಬ್ರವರಿ ೨೦,೨೧’ರ ಎರಡು ದಿವಸಗಳ ಮುಷ್ಕರಗಳು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಚಳುವಳಿಯ ಐತಿಹಾಸಿಕ ಮೈಲಿಗಲ್ಲುಗಳಾಗಿವೆ.
ಈ ಹಿಂದಿನ ಕೇಂದ್ರ ಸರ್ಕಾರ ೧೦ ಅಂಶಗಳ ಬೇಡಿಕೆಗಳ ಈಡೇರಿಕೆಗೆ ವಹಿಸಬೇಕಾದ ಅಗತ್ಯ ಕ್ರಮಗಳು ಗಂಭೀರವಾಗಿ ವಹಿಸದೆ, ನಿರ್ಗಮಿಸಿದೆ. ಆನಂತರ ಬಂದ ನೂತನ ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಕ್ರಮವಹಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ೧೦ ಅಂಶಗಳ ಬೇಡಿಕೆಗಳ ಈಡೇರಿಸುವ ಬದಲು, ಕಾರ್ಮಿಕ ಕಾನೂನುಗಳನ್ನು ಕಾರ್ಪೋರೇಟ್ ವಲಯದ ಪರ – ಕಾರ್ಮಿಕ ವಿರೋಧಿಯಾಗಿ ತಿದ್ದುಪಡಿ ಮಾಡಲು ಮುಂದಾಗಿದೆ. ರಾಜಸ್ಥಾನ ಶಾಸನ ಸಭೆಯಲ್ಲಿ ಅಂತಹ ಅನೇಕ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಿದೆ. ಮಧ್ಯಪ್ರದೇಶ ಸರ್ಕಾರ ಮತ್ತು ಮಹಾರಾಷ್ಟ ಸರ್ಕಾರವು ಈ ದಿಸೆಯಲ್ಲಿ ಮುಂದಾಗಿದೆ. ಈ ತಿದ್ದುಪಡಿಗಳು ಜಾರಿಯಾದಲ್ಲಿ ನೂರಾರು ವರ್ಷಗಳ ಹೋರಾಟಗಳ ಮೂಲಕ ಪಡೆದ ಕಾರ್ಮಿಕ ಹಕ್ಕುಗಳು ಏಕಾಏಕಿ ಇಲ್ಲದಾಗಲಿವೆ. ರಾಜಸ್ಥಾನ ರಾಜ್ಯದ ರೀತಿಯ ತಿದ್ದುಪಡಿಗಳು ಕರ್ನಾಟಕ ರಾಜ್ಯದಲ್ಲೂ ತಂದಲ್ಲಿ ರಾಜ್ಯದಲ್ಲಿನ ೧೩೦೬೧ ನೊಂದಾಯಿತ ಕಾರ್ಖಾನೆಗಳ ಪೈಕಿ ೧೨೩೩೫ ಕಾರ್ಖಾನೆಗಳು ಚಾಲ್ತಿಯಲ್ಲಿರುವ ಕೈಗಾರಿಕಾ ವಿವಾದಗಳ ಕಾಯ್ದೆಯ ವ್ಯಾಪ್ತಿಯಿಂದ ಹೊರಗುಳಿಯಲಿವೆ.
ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳವನ್ನು ೪೯ ಶೇಕಡಕ್ಕೆ ಹೆಚ್ಚಿಸುವ, ಕಲ್ಲಿದ್ದಲು ನಿಕ್ಷೇಪಗಳ ಹರಾಜಿಗೆ ಅನುವಾಗುವ, ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ಸುಗ್ರೀವಾಜ್ಷೆಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಹೊರಡಿಸಿದೆ. ಈ ಸುಗ್ರೀವಾಜ್ಞೆಗಳು ಸಾರ್ವಜನಿಕ ವಿಮಾ ರಂಗ, ಸಾರ್ವಜನಿಕ ಉದ್ದಿಮೆಗಳು ಮತ್ತು ರೈತಾಪಿ ಜನತೆ ಹಾಗು ಕೃಷಿಗೆ ಗಂಡಾಂತರಕಾರಿಯಾಗಿ ಪರಿಣಮಿಸಲಿವೆ. ಕೋಲ್ ಇಂಡಿಯಾದ ರೂ.೪೬,೦೦೦ ಕೋಟಿ ಶೇರುಗಳ ವಿಕ್ರಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈಗಾಗಲೆ ೨೨,೫೦೦ ಕೋಟಿ ರೂಗಳ ಶೇರುಗಳನ್ನು ಮಾರಟ ಮಾಡಿದೆ. ರಾಷ್ಟ್ರದ ಖನಿಜ ಸಂಪತ್ತಿನ ಖಾಸಗಿ ಲೂಟಿಗೆ ಇದು ಅವಕಾಶ ಕಲ್ಪಿಸಲಿದೆ.
ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರ ಅಂಗನವಾಡಿ ನೌಕರರನ್ನು ಸರ್ಕಾರಿ ನೌಕರರಂತೆ ಪರಿಗಣಿಸಲು ಗುತ್ತಿಗೆ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು ಸಮಾನ ಕೆಲಸಕ್ಕೆ ಸಮಾನ ವೇತನ ಅಂಶ ಒಳಪಡಿಸಲು, ರೂ.೧೫,೦೦೦/- ರಾಷ್ಟ್ರ ವ್ಯಾಪಿ ಸಮಾನ ಕನಿಷ್ಟ ವೇತನ ಖಾತ್ರಿಗೆ ಕ್ರಮವಹಿಸುತ್ತಿಲ್ಲ.
ಇSIಅ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಆರಂಭಿಸಲಾಗಿದ್ದ ಇSIಅ ವಿಮಾದಾರರ ಮಕ್ಕಳಿಗೆ ಉಚಿತ ವೈಧ್ಯಕೀಯ ಶಿಕ್ಷಣ ನೀಡುವ ವೈಧ್ಯಕೀಯ ಕಾಲೇಜುಗಳ ಮುಚ್ಚಲು ಮುಂದಾಗಿದೆ. ಇPಈ ಪಿಂಚಣಿಗೆ ಇದ್ದ ಸೇವಾವಧಿಯ ಕೊನೆಯ ೧೨ ತಿಂಗಳ ವೇತನದ ಸರಾಸರಿ ಬದಲು ೬೦ ತಿಂಗಳ ಸರಾಸರಿಯ Pಡಿo-ಡಿಚಿಣಚಿ ಆಧರಿಸಿ ಲೆಕ್ಕಹಾಕಲು ಮುಂದಾಗಿದೆ. ಕನಿಷ್ಠ ಒಂದು ಸಾವಿರ ಮಾಸಿಕ ಪಿಂಚಣಿಯನ್ನು ೨೦೧೪ ಸೆಪ್ಟೆಂಬರ್‌ನಿಂದ ೨೦೧೫ ಮಾರ್ಚ್‌ವರೆಗೆ ಮಾತ್ರ ಜಾರಿಗೊಳಿಸಿದೆ.
ನವ (ಉದಾರವಾದಿ) ಹೆಸರಿನಲ್ಲಿ ಕಾರ್ಮಿಕ ವಿರೋಧಿ ಆರ್ಥಿಕ ನೀತಿಗಳನ್ನು, ಆ ಮೂಲಕ ಕಾರ್ಮಿಕ ಕಾನೂನುಗಳ ಸಡಿಲತೆಗೆ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕ್ಕೆ ಒತ್ತಾಸೆ ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ೨೦೧೫ ಫೆಬ್ರವರಿ ೨೬ ರಂದು ರಾಷ್ಟ್ರವ್ಯಾಪಿ ಸತ್ಯಾಗ್ರಹ – ಶಾಂತಿಯುತ ಕಾಯ್ದೆ ಭಂಗ – ಬಂಧನಕ್ಕೊಳಗಾಗುವ ಹೋರಾಟಕ್ಕೆ  ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಈ ದಿನ ಹೋರಾಟ ನಡೆಸಿ ಈ ಕೆಳಕಂಡ ಬೇಡಿಕೆಗಳ  ಈಡೇರಿಕೆಗೆ ಕ್ರಮ ವಹಿಸಬೇಕೆಂದು ಕೋರಿ ಈ ಮನವಿ ಸಲ್ಲಿಸುತ್ತಿದ್ದೇವೆ. 
ಬೇಡಿಕೆಗಳು :
ಕಾರ್ಮಿಕ ಕಾನೂನುಗಳಿಗೆ ಕಾರ್ಪೋರೇಟ್ ವಲಯದ ಪರ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ಕೈ ಬಿಡಬೇಕು.
v ವಾಣಿಜ್ಯ ಉದ್ದೇಶಗಳಿಗಾಗಿ ಕಲ್ಲಿದ್ದಲು ನಿಕ್ಷೇಪ ಹರಾಜಿಗೆ ಅನುವಾಗುವ ಸುಗ್ರೀವಾಜ್ಞೆ ಮತ್ತು ಕೋಲ್ ಇಂಡಿಯಾ ಶೇರು ಮಾರಾಟ ನಿಲ್ಲಿಸಬೇಕು.
v ವಿಮಾ ರಂಗದಲ್ಲಿ ವಿದೇಶಿ ನೇರ ಬಂಡವಾಳ ಮಿತಿಯನ್ನು ೪೯ ಶೇಕಡಕ್ಕೆ ಹೆಚ್ಚಿಸುವ ಸುಗ್ರೀವಾಜ್ಞೆ ವಾಪಸ್ಸಾಗಬೇಕು.
v ಭೂ ಸ್ವಾದೀನ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ವಾಪಸ್ಸಾಗಬೇಕು.
v ರಾಜಸ್ಥಾನ ಶಾಸನ ಸಭೆ ಅಂಗೀಕರಿಸಿರುವ ಕಾರ್ಮಿಕ ಕಾನೂನು ತಿದ್ದುಪಡಿ ಮಸೂದೆಗಳ ವಾಪಸ್ಸಾಗಬೇಕು.
v ರೂ.೧೫,೦೦೦/- ರಾಷ್ಟ್ರವ್ಯಾಪಿ ಸಮಾನ ಕನಿಷ್ಠ ವೇತನ ನಿಗದಿಯಾಬೇಕು.
v ಗುತ್ತಿಗೆ ಕಾರ್ಮಿಕ ಕಾನೂನಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ತಿದ್ದುಪಡಿ ಮಾಡಬೇಕು.
v ರೂ.೩,೦೦೦/- ಕನಿಷ್ಠ ಪಿಂಚಣಿಗಾಗಿ, ಬೋನಸ್ ಭವಿಷ್ಯ ನಿಧಿ, ಉಪಧನ ಕಾಯ್ದೆಗಳಲ್ಲಿನ ಮಿತಿಗಳ ಹೆಚ್ಚಳ ಮಾಡಬೇಕು.
v ಸಾರ್ವಜನಿಕ ಉದ್ದಿಮೆಗಳ ಶೇರು ವಿಕ್ರಯ ನಿಲ್ಲಿಸಬೇಕು.
v ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ನಿಧಿ ಸ್ಥಾಪನೆ — ಕಲ್ಯಾಣ ಯೋಜನೆಗಳ ಜಾರಿಗಾಗಿ. ಸಮರ್ಪಕ ಹಣ ಮೀಸಲಿಡಬೇಕು.
v ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಸಾರ್ವತ್ರಿಕ ಸಾರ್ವಜನಿಕ ವಿತರಣಾ ವ್ಯವಸ್ಥೆ ಜಾರಿ ಮಾಡಬೇಕು.
v ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟು ಹಾಗೂ ಸಮರ್ಪಕ ಜಾರಿ ಮಾಡಬೇಕು.
v ೪೫ ದಿನಗಳಲ್ಲಿ ಸಂಘಗಳ ನೊಂದಾವಣೆಗಾಗಿ, ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಓ) ನ ಸಂಘ ಕಟ್ಟುವ ಸ್ವಾತಂತ್ರಕ್ಕಾಗಿ – ಸಂಘ ಕಟ್ಟುವ ಹಕ್ಕಿನ ಸಂರಕ್ಷಣೆಗಾಗಿ ಐಎಲ್‌ಒದ ೮೭ನೇ ಸಮಾವೇಶ ಹಾಗು ಸಂಘ ಕಟ್ಟುವ ಹಕ್ಕಿನ ಮತ್ತು ಸಾಮೂಹಿಕ ಚೌಕಾಸಿಯ ೯೮ನೇ ಸಮಾವೇಶದ ಸಂಸತ್ ಅನುಮೊದನೆಯಾಗಲು ಕ್ರಮ ವಹಿಸಬೇಕು. 
 ಎಂದು ಸಿಐಟಿಯು ಜಿಲ್ಲಾ ಸಂಚಾಲಕ ಗೌಸಸಾಬ ನದಾಫ್, ಗ್ರಾ.ಪಂ. ನೌಕರರ ತಾಲೂಕಾಧ್ಯಕ್ಷ ಗೋವಿಂದಪ್ಪ ಮಾದಿನೂರು, ಭೀಮಣ್ಣ ಎಸ್. ಮಾದಿನೂರು, ಸಹ ಕಾರ್ಯದರ್ಶಿ ಅಮರೇಶ ಹೀರೆಬಗನಾಳ ನೇತೃತ್ವದಲ್ಲಿ ವಿವಿಧ ಇಲಾಖೆ ಕಾರ್ಮಿಕರು ಹಾಗೂ ಗ್ರಾ.ಪಂ. ನೌಕರರು ಪಾಲ್ಗೊಂಡಿದ್ದರು.
Please follow and like us:
error