fbpx

ಕುದರಿಮೋತಿ ಗ್ರಾಮದಲ್ಲಿ ಪಿ ಆರ್ ಎ ಕಾಯಕ್ರಮ ನೆರೆವೇರಿತು

ಸಮಗ್ರ ಜಲಾನಯನ ನೀರ್ವಹಣೆ ಯೋಜನೆ ೪ನೇ ಹಂತದ ಅಡಿಯಲ್ಲಿ ಯಲಬುರ್ಗಾ ತಾಲ್ಲೂಕಿನ ಮಂಗಳೂರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕುದರಿಮೋತಿ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ಗ್ರಾಮ ಪಂಚಾಯತಿ ಮತ್ತು ಮಹಿಳೆ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಯಿತು.
ಗ್ರಾಮೀಣ ಜನರ ಸಹಭಾಗಿತ್ವ (ಪಿ.ಆರ್.ಎ) ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲಾ ಸಂಯೋಜಕರಾದ ವ್ಹಿ.ಚಕ್ರಪಾಣಿ ಇವರು ಯೋಜನೆಯು ಯಶಸ್ವಿಯಾಗಿ ಅನುಷ್ಠಾನಗೊಳ್ಳಬೇಕಾದರೆ ಸಮುದಾಯದ ಸಹಭಾಗಿತ್ವ ಅವಶ್ಯಕವಾಗಿರುತ್ತದೆ ಎಂದು ಹೇಳಿದರು. ಅದರಂತೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ಅಧಿಕಾರಿಗಳಾದ ವೆಂಕಪ್ಪ ಇವರು ಮಾತನಾಡಿ ಯೋಜನೆಯ ವಿವಿದ ಘಟಕಗಳಾದ ಕೃಷಿ ತೋಟಗಾರಿಕೆ ಅರಣ್ಯ ಮತ್ತು ಪಶು ಸಂಗೋಪನೆ ಕುರಿತು ರೃತರಿಗೆ ಮಾಹಿತಿ ನೀಡಿದರು. ಅಂತೆಯೇ ಸಹಾಯಕ ಕೃಷಿ ಅಧಿಕಾರಿಗಳಾದ ಎಸ್.ಸಿ. ಚಿಂಚಲಿ ಇವರು ಮಾತನಾಡಿ ರೃತರು ಮಣ್ಣು ಮತ್ತು ನೀರು ಸಂರಕ್ಷಣೆ ಮಾಡುವುದರಿಂದ ಭೂಮಿಯ ಫಲವತ್ತತೆ ಕಾಯ್ದುಕೊಳ್ಳಬಹುದೆಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ್ಲು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ದಾವಲ್ ಬೀ ವಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯರು, ಗಾಮದ ರೃತ ಬಾಂದವರು, ಮತ್ತು ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ದೇವರಾಜ ಸ್ವಾಗತಿಸಿದರು ತಿಮ್ಮಣ್ಣ ಪೂಜಾರ ನಿರೂಪಿಸಿದರು, ವಿದ್ಯಾಶ್ರೀ ವಂದಿಸಿದರು. 
Please follow and like us:
error

Leave a Reply

error: Content is protected !!