ಡಿ.ಇಡಿ ಮತ್ತು ಡಿ.ಪಿ.ಇಡಿ ಪ್ರವೇಶ : ಆನ್‌ಲೈನ ಮೂಲಕ ಅರ್ಜಿ ಸಲ್ಲಿಸಲು ಸೂಚನೆ

 ಆನ್‌ಲೈನ ಮೂಲಕ ಅರ್ಜಿ ಸಲ್ಲಿಸಲು ಸೂಚನೆ
 : ಪ್ರಸಕ್ತ ಸಾಲಿಗೆ ಡಿ.ಇಡಿ ಮತ್ತು ಡಿ.ಪಿ.ಇಡಿ ಕೋರ್ಸ್‌ಗಳ ವ್ಯಾಸಂಗಕ್ಕಾಗಿ ರಾಜ್ಯದಲ್ಲಿಯ ಎಲ್ಲ ಶಿಕ್ಷಕರ ತರಬೇತಿ ಕೇಂದ್ರಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-೧, ಅಂಗವಿಕಲ ಅಭ್ಯರ್ಥಿಗಳಿಗೆ ಕನಿಷ್ಟ ೪೫% ಅಂಕಗಳು, ಇತರೆ ಅಭ್ಯರ್ಥಿಗಳಿಗೆ ೫೦% ಕನಿಷ್ಟ ಅಂಕಗಳನ್ನು ಪಡೆದಿರಬೇಕು. ಈ ಎಲ್ಲಾ ಅರ್ಹತೆಗಳು ಡಿ.ಪಿ.ಇಡಿ ಗೂ ಅನ್ವಯವಾಗುತ್ತದೆ.   ಅರ್ಜಿ ಸಲ್ಲಿಸಲು ಆಗಸ್ಟ್ ೨೦ ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ಮಾಹಿತಿಯನ್ನು ಇಲಾಖಾ ವೆಬ್‌ಸೈಟ್ www.schooleducation.kar.nic.in ನಿಂದ ಪಡೆಯಬಹುದಾಗಿದೆ ಎಂದು ಮುನಿರಾಬಾದ್‌ನಲ್ಲಿರುವ ಡಯಟ್ ಪ್ರಾಚಾರ್ಯರಾದ ಸುನಂದಮ್ಮ ಮೂಗನೂರ   ತಿಳಿಸಿದ್ದಾರೆ.

Leave a Reply