ಹಣತೆ’ ದೀಪಾವಳಿ ವಿಶೇಷಾಂಕ: ರಾಜ್ಯ ಮಟ್ಟದ ಕತೆ-ಕವನ ಸ್ಪರ್ಧೆ

ಕಳೆದ ಒಂಬತ್ತು ವರ್ಷಗಳಿಂದ ಪ್ರಗತಿಪರ ನಿಲುವಿನಲ್ಲಿ ಪರಿಣಾಮಕಾರಿಯಾಗಿ ದುಡಿಯುತ್ತಿರುವ ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ, ಈ ಸಂಘಟನೆಯಿಂದ ಪ್ರತಿ ಸಲದ ಯೋಜನೆಯಂತೆ ಈ ವರ್ಷವೂ ಬರುವ ಅಕ್ಟೋಬರ್ ನಲ್ಲಿ ಕನ್ನಡದ ಸಶಕ್ತ ಬರಹಗಾರರ ಚಿಂತನೆಗಳನ್ನೊಳಗೊಂಡ ‘ಹಣತೆ’ ದೀಪಾವಳಿ ವಿಶೇಷಾಂಕ-2011 ಹೊರತರಲಾಗುತ್ತಿದೆ.
ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಸಣ್ಣ ಕತಾ ಸ್ಪರ್ಧೆ ಮತ್ತು ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ನಾಡಿನ ಹೆಸರಾಂತ ಸಾಹಿತಿಗಳು ಈ ಸ್ಪರ್ಧೆಯ ತೀರ್ಪುಗಾರರಾಗಿರುತ್ತಾರೆ. ಎರಡೂ ವಿಭಾಗದಲ್ಲಿ ಆಯ್ಕೆಯಾಗಿ ಮೊದಲ ಮೂರು ಬಹುಮಾನ ಪಡೆದ ಕತೆ-ಕವನಗಳನ್ನು ‘ಹಣತೆ’ ವಿಶೇಷಾಂಕದಲ್ಲಿ ಪ್ರಕಟಿಸಲಾಗುವುದು. ವಿಶೇಷಾಂಕ ಬಿಡುಗಡೆ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನವನ್ನು ನೀಡಲಾಗುವುದು.ಸಣ್ಣ ಕತಾ ಸ್ಪರ್ಧೆಗೆ ಪ್ರಥಮ ಬಹುಮಾನ ರೂ. 3,000, ದ್ವಿತೀಯ 2,000 ಹಾಗೂ ತೃತೀಯ 1,000 ರೂ ನೀಡಲಾಗುವುದು.
ಕವನ ಸ್ಪರ್ಧೆಗೆ ಮೊದಲ ಬಹುಮಾನ 1,500, ದ್ವಿತೀಯ 1,000 ಹಾಗೂ ತೃತೀಯ 750 ರೂ. ನೀಡಲಾಗುವುದು.
ಜೊತೆಗೆ ವಿಜೇತರೆಲ್ಲರಿಗೂ ಸ್ಪರ್ಧೆಯ ಪ್ರತಿಷ್ಠೆಗನುಗುಣವಾದ ಬಹುಮಾನ ಫಲಕವನ್ನು ಗೌರವಪೂರ್ವಕವಾಗಿ ನೀಡಲಾಗುವುದು.
ಸ್ಪರ್ಧೆಗೆ ಪ್ರವೇಶ ಕಳಿಸಲು ಕೊನೆಯ ದಿನಾಂಕ ಜುಲೈ 25, 2011 ಆಗಿರುತ್ತದೆ.ಸ್ಪರ್ಧೆಗೆ ಕಳಿಸುವ ಕತೆ-ಕವನ ಸ್ವತಂತ್ರವಾಗಿ ರಚನೆಗೊಂಡಿರಬೇಕು. ಈ ಹಿಂದೆ ಎಲ್ಲಿಯೂ ಪ್ರಕಟವಾಗಿರಬಾರದು. ಕತೆ-ಕವನಗಳ ಜೊತೆ ಸ್ಪರ್ಧೆಯ ಹೆಸರು, ವಿಳಾಸ ಬರೆಯದೆ ಪ್ರತ್ಯೇಕ ಹಾಳೆಯಲ್ಲಿ ಬರೆದು ಲಕೋಟೆಯಲ್ಲಿಟ್ಟು ಕಳುಹಿಸಬೇಕು.
ಸ್ಪರ್ಧೆಗೆ ಕಳಿಸುವ ಲಕೋಟೆಯ ಮೇಲೆ ‘ಹಣತೆ’ ದೀಪಾವಳಿ ವಿಶೇಷಾಂಕ ಸಾಹಿತ್ಯ ಸ್ಪರ್ಧೆ -2011 ಎಂದು ಸ್ಪಷ್ಟವಾಗಿ ನಮೂದಿಸಿರಬೇಕು. ಕತೆ-ಕವನ ನುಡಿ ತಂತ್ರಾಂಶದಲ್ಲಿ ಸಿದ್ಧಪಡಿಸಿ ಇ-ಮೇಲ್ ಮೂಲಕವೂ ಕಳಿಸಬಹುದು. ಸಂಪಾದಕರ ತೀರ್ಮಾನವೇ ಅಂತಿಮವಾಗಿರುತ್ತದೆ.
ಕತೆ-ಕವನಗಳನ್ನು ಅರವಿಂದ ಕರ್ಕಿಕೋಡಿ, ಸಂಪಾದಕರು, ‘ಹಣತೆ’ ದೀಪಾವಳಿ ವಿಶೇಷಾಂಕ-2011, ‘ಅಮ್ಮಾ’, ಅಗ್ರಹಾರ, ಅಂಚೆ : ಹಳದೀಪುರ, ತಾ: ಹೊನ್ನಾವರ-581327, ಉತ್ತರ ಕನ್ನಡ ಜಿಲ್ಲೇ

Please follow and like us:
error