ಹಪ್ತಾ ವಸೂಲಿಗೆ ನಿಂತ ನಗರಸಭಾ ಸದಸ್ಯನ ಬಂಧನ

ಗಂಗಾವತಿ : ಮೈನ್ಸ್ ಲಾರಿಗಳಿಂದ ಹಪ್ತಾ ವಸೂಲಿ ಮಾಡುತ್ತಿದ್ದ ಗಂಗಾವತಿಯ ನಗರಸಭಾ ಸದಸ್ಯ ಪರಶುರಾಮ ಮಡ್ಡೇರ್ ಮತ್ತು ಇತರರನ್ನು ಗಂಗಾವತಿಯ ನಗರ ಪೋಲೀಸರು ಬಂಧಿಸಿದ್ದಾರೆ.
ಗಂಗಾವತಿಯ ಮಾರ್ಗವಾಗಿ ಸಾಗುತ್ತಿದ್ದ ಲಾರಿಗಳನ್ನು ತಡೆದು ನಿಲ್ಲಿಸಿ ಹಣ ನೀಡುವುಂತೆ ಧಮಕಿ ಹಾಕಿ, ನೀಡದಿದ್ದರೆ ಲಾರಿಗಳನ್ನು ಸುಡುವುದಾಗಿ ಹೆದರಿಸುತ್ತಿದ್ದರು ಎಂದು ಲಾರಿ ಚಾಲಕ ನೀಡಿದ ದೂರಿನನ್ವಯ ಇವರನ್ನು ಬಂದಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply