ಸಂಸ್ಕಾರವಿಲ್ಲದೇ ಹೋದರೆ ಮಾನವ ಸಂಬಂಧ ನಾಶ-ಗುರೂಜಿ.

ಕೊಪ್ಪಳ. ಜ.೧೩. ಮನುಷ್ಯ ಸಂಸ್ಕಾರವಂತನಾಗದಿದ್ದಲ್ಲಿ ಮಾನವನ ಸಂಬಂಧಗಳು ನಾಶವಾಗುತ್ತವೆ ಎಂದು ಮುದ್ರಾ ಬ್ರಹ್ಮ, ಮುದ್ರಾ ರಹಸ್ಯ ಖ್ಯಾತಿಯ ಶ್ರೀ ಲಕ್ಷ್ಮೀ ಶ್ರೀನಿವಾಸ ಗುರೂಜಿಯವರು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಭಾಗ್ಯನಗರದಲ್ಲಿ ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರದ, ಯುವಚೇತನ ಶಿವರಾಜ ತಂಗಡಗಿ ವೇದಿಕೆ, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಸಹಯೋಗದೊಂದಿಗೆ ಹೃದಯ, ಮಧುಮೇಹ, ಸ್ತ್ರೀ ರೋಗ, ಮೂಳೆ ರೋಗ ಕುರಿತು ಉಚಿತ ಬೃಹತ್ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

Please follow and like us:
error