ಉಪಚುನಾವಣೆ : ಸೆ. ೭ ರಂದು ೪ ಅಭ್ಯರ್ಥಿಗಳಿಂದ ನಾಮಪತ್ರ

ಕೊಪ್ಪಳ ಸೆ. ೦೭ (ಕ.ವಾ): ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಸೆ. ೦೭ ರಂದು ಬುಧವಾರ ೦೪ ಅಭ್ಯರ್ಥಿಗಳು ಒಟ್ಟು ೬ ನಾಮಪತ್ರ ಸಲ್ಲಿಸಿದ್ದಾರೆ.
  ಕುಣಿಕೇರಿ ಗ್ರಾಮದ ಶಂಕರನಾಯಕ್ ಮುಂಗಲಿ ಪಕ್ಷೇತರ ಅಭ್ಯರ್ಥಿಯಾಗಿ ಎರಡು ನಾಮಪತ್ರ,  ಕೊಪ್ಪಳದ ಸಣ್ಣ ಮೌಲಾ ಸಾಬ್- ಪಕ್ಷೇತರ, ಕೊಪ್ಪಳದ ಕರಡಿ ಸಂಗಣ್ಣ- ಬಿಜೆಪಿ, ಗಂಗಾವತಿಯ ಚಕ್ರವರ್ತಿ ನಾಯಕ್ ರಾಷ್ಟ್ರೀಯ ಕ್ರಾಂತಿಕಾರಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಒಂದು ನಾಮಪತ್ರ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಒಂದು ನಾಮಪತ್ರ ಸಲ್ಲಿಸಿದ್ದಾರೆ.  ಈವರೆಗೆ ಒಟ್ಟು ೦೬ ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಎಂ. ಶರಣಬಸಪ್ಪ ಅವರು ತಿಳಿಸಿದ್ದಾರೆ.
Please follow and like us:
error