ನೆರಳು ನೆಪಮಾತ್ರ – ಕವಿತೆ


ನೆರಳು ನೆಪಮಾತ್ರ
ನೂರು ಸಾರಿ ಹೇಳಬೇಕಿದೆ
ನನ್ನ ನೆರಳು
ನಾನು ನೆಪಮಾತ್ರ
ಕೂತ ಕುರ್ಚಿಯ ಕೈಕಾಲುಗಳು 
ಕೂತಂತೆ ಇವೆ
ತೆಪ್ಪದಡಿಗೆ 
ನೀರೋ,
ಮೀನೋ,
ಅರ್ಥಹೀನ ಅನುಭವಗಳಷ್ಟೇ
ನೂರಾರು ಮಾತುಗಳಿವೆ
ಹೇಳಹೊರಟಾಗ ಮೌನ ಧನಿ
ಕಣ್ಸೋನ್ನೆಗಳ ತಿರುಗಾಟ
ಒಂದು ಕರಿವಾಲಿಯೊಳಗಿದೆ
ಸಾವಿರ ಸಾವಿರ ಹೆಣ ಹೂಳುವ ಮಸಣ
ಬಾವ ತೃಷೆಯ ಕಡಿತ
ಕೆರೆದು ಹುಣ್ಣಾಗಬೇಕೆಂದು
ಕೆರೆಯುತ್ತಿದ್ದವಳು
ತಟಕ್ಕನೇ ಎದ್ದು
ತೆಕ್ಕೆ ಬಿದ್ದು ಒಂದಾದ ಮೇಲೆ
ನನ್ನ ನೆರಳು ನೆಪಮಾತ್ರ
ಊರಗಸೆಯೊಳಗೆ ಕುಂತವರ
ಕಣ್ಣು ಹುಣ್ಣಾಗುವಂತೆ ಕುಣಿಯುತ್ತಿದ್ದ
ಎದೆಯವಳೊಮ್ಮೆ
ಕಾಲೇರಗಿ, ಕಾವಿಕಟ್ಟಿ
ಹೆಣ್ಣು ಸ್ವಾಮಿಯಾದಾಗಲೂ
ದೆವನೊಬ್ಬ ನಾಮ ಹಲವು
ಅರ್ಥವಾಗಿಲ್ಲ
ಇಂದೋ…..
ಮುಂದೋ
ಕಡಲ ಕಾರ್ಮೊಡ
ಬೊರ್ಗರೆವ ಅಲೆ
ಕಣ್ಬಿಟ್ಟು ಕಾಡುವ ಕವಿತೆ
ಅಲೆಯೊಂದು ಹಾರಾಡಿ 
ಕವಿಯ ಎಳೆಯುವಾಗ 
ಬರಿ ಅಲೆಯ ನೆರಳೋ
ಕವಿತೆಯ ನೆರಳೋ
ಕವಿ ನೆಪಮಾತ್ರ
ಶಿವಕುಮಾರ ಚನ್ನಪ್ಪನವರ 
ರಾಣೇಬೆನ್ನೂರು 
ಫೋನ್ – ೮೮೮೪೨೬೮೭೦೨
            ೯೯೦೦೦೨೧೪೮೪

Leave a Reply