ಮಂಗಳೂರು : ಯುವ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿ

ಕೊಪ್ಪಳ, ಅ. ೨೦ : ಪಂ. ಪುಟ್ಟರಾಜ ಗ್ರಾಮೀಣಾಭಿವೃದ್ಧಿ ವಿದ್ಯಾವರ್ಧಕ ಹಾಗೂ ವಿವಿಧೋದ್ದೇಶಗಳ ಚಾರಿಟೇಬಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಸಂತ ಶಿಸುನಾಳ ಶರೀಫರ ಜಯಂತಿ ಅಂಗವಾಗಿ ಸೆ. ೪ ರಂದು ಮಂಗಳೂರಿನ ಮಂಗಳೇಶ್ವರ ಕಲ್ಯಾನ ಮಂಟಪದಲ್ಲಿ ಯುವ ಸೌರಭ ಸಾಂಸ್ಕೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂತ ಶಿಶುನಾಳ ಶರೀಫರ ಕುರಿತು ಪಾಚಾಸಾಬ ನದಾಫ್ ಪ್ರವಚನ ನೀಡಿದರು. ಶ್ರೀಮತಿ ಸುಜಾತಾ ಓಜನಹಳ್ಳಿ ಸಂಗೀತ ಕಾರ್ಯಕ್ರಮ ನೀಡಿದರು. ಇವರಿಗೆ ರಾಜೇಂದ್ರ ಚಿನ್ನೂರ ತಬಲಾ ಸಾಥ್ ನೀಡಿದರು.
ಕಾರ್ಯಕ್ರಮವನ್ನು ಜಿ.ಪಂ. ಸದಸ್ಯ ಅಶೋಕ ತೋಟದ ಉದ್ಘಾಟಿಸಿದರು. ಮಂಗಳೂರು ಗ್ರಾ.ಪಂ. ಅಧ್ಯಕ್ಷೆ ಶಾಂತಾ ಗುಡಿಸಲಮನಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯೆ ಸುಮಂಗಳಾ ಉಪ್ಪಾರ, ಪತ್ರಕರ್ತ ಕೊಟ್ರಪ್ಪ ಮುತ್ತಾಳ, ಉಪನ್ಯಾಸಕ ಶರಣಪ್ಪ ಉಮಚಗಿ ಮುಖ್ಯ ಅತಿಥಿಗಳಾಗಿದ್ದರು. 
Please follow and like us:
error