ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ದತೆ ಕಾರ್ಯಾಗಾರ.

ಕೊಪ್ಪಳ-25- ಹೋಬಳಿ ಮಟ್ಟದ ಗಂಗಾವತಿ ತಾಲೂಕಿನ ಕನಕಗಿರಿ ಹೋಬಳಿಯ ಮುಸಲಾಪೂರದ ಸರಕಾರ ಪ್ರೌಢಾ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪೂರ್ವಭಾವಿ ಪರೀಕ್ಷಾ ಸಿದ್ದತೆಗಳಿಗಾಗಿ ತಿಳುವಳಿಕೆ ನೀಡಲು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಸು ಅಭಿವೃದಿ ಯೋಜನೆ ಕನಕಗಿರಿ, ಹಾಗೂ ಸಂದೇಶ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುನಿರಾಬಾದ್ ಇವರ ಸಂಯುಕ್ತ ಆಶ್ರಯದಲ್ಲಿ ಹೋಬಳಿಮಟ್ಟದ  ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಸಾವಿತ್ರಿ ಇನಾಮದಾರ್ ಸಿ.ಡಿ.ಪಿ,ಓ ಕನಕಗಿರಿ, ಇವರು ಮಾತನಾಡುತ್ತಾ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆಗ್ರಾಮೀಣ ಮತ್ತು ನಗರ ವ್ಯಾಪ್ತಿಯಲ್ಲಿ ೨೦೦ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ
ಕಾರ್ಯಕ್ರಮ ನಡೆಸಿ ಇಂದಿನ ವರ್ಷದ ಮಕ್ಕಳ ಪರೀಕ್ಷೆ ಪಲಿತಾಂಶ ನೋಡಿ ಪ್ರಗತಿ ಸಾಧಿಸಿದ
ಶಾಲೆ ಆಯ್ಕೆ ಮಾಡಿ ಅದರಲ್ಲಿ ವಿಜ್ಞಾನ ಸಮಾಜ ಇಂಗ್ಲಿಷ ಗಣಿತ ಮನೋ ವೈಧ್ಯರಿಂದ
ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಯಾವರೀತಿ ಉತ್ತರಿಸಬೇಕೆನ್ನುವ ಕೌಶಲ್ಯವನ್ನು
ತಿಳಿಸಿಕೊಡುವ ಮಕ್ಕಳ ಮನಸ್ಸು ಅರಳುವಂತೆ ಹೆಚ್ಚು ಅಂಕಗಳಿಸುವುದು. ಉತ್ತಮ ಆರೋಗ್ಯ,
ಸಮಯದ ಮಹತ್ವ, ಜ್ಞಾಪಕ ಶಕ್ತಿ, ಈ ವಿಷಯಯಗಳ ಕುರಿತು ನುರಿತ ಶಿಕ್ಷಕರಿಂದ ಹಾಗೂ
ಉಪನ್ಯಾಸಕರಿಂದ ಮಾಹಿತಿ ಪಡೆದು ಮಕ್ಕಳು ಹೆಚ್ಚು ಅಂಕ ಗಳಿಸಲು ಕರೆನೀಡಿದರು.
Please follow and like us:
error