ಮಾಜಿಕ ತುಡಿತಕ್ಕೆ ಕುಟುಂಬದ ಸಹಕಾರ ಅಗತ್ಯ – ಮಲ್ಲನಗೌಡರ.

ಕೊಪ್ಪಳ, ಆ. ೨೮ ಸಮಾಜದೊಂದಿಗೆ ಬೆರೆತು ನಿರಂತರ ಸಮುದಾಯ ಅಭಿವೃದ್ಧಿ ಕಾರ್ಯಕ್ಕೆ ಸ್ಪಂದಿಸಲು ಕುಟುಂಬದ ಸಹಕಾರ ಅಗತ್ಯ, ಅಂಥಹ ಸಹಕಾರ ಗೊಂಡಬಾಳ ಕುಟುಂಬದಲ್ಲಿದೆ ಎಂದು ಹಿರಿಯ ಸಾಹಿತಿ ಡಾ|| ಮಹಾಂತೇಶ ಮಲ್ಲನಗೌಡರ ಅಭಿಪ್ರಾಯಪಟ್ಟರು. ಅವರಿಂದು ಭಾಗ್ಯನಗರದ ಮಂಜುನಾಥ ಜಿ. ಗೊಂಡಬಾಳ ರ ಮನೆಯಲ್ಲಿ ಕನ್ನಡ ಜಾನಪದ ಪರಿಷತ್ತು, ದಲಿತ ಸಾಹಿತ್ಯ ಪರಿಷತ್ತು ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಹಾಗೂ ಸಾಹಿತ್ಯ ಗೊಂಡಬಾಳ ರ ೮ ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡಿದ್ದ ಮಾತುಕತೆ, ಕವಿತೆ ವಾಚನ ಮತ್ತು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಮನೆಯ ಕಾರ್ಯಕ್ರಮಗಳನ್ನು ಕುಟುಂಬದ ಎಲ್ಲಾ ಸದಸ್ಯರನ್ನು ಸೇರಿಸಿಕೊಂಡು ಆಪ್ತರನ್ನು ಬರಮಾಡಿಕೊಂಡು ವಿಶಿಷ್ಟವಾದ ಕಾರ್ಯಗಳನ್ನು ಮಾಡುತ್ತಿರುವದು ಅಭಿನಂದನಾರ್ಹ ಕೆಲಸ ಎಂದ ಅವರು ಜಾನಪದ ದೇಶದ ದೊಡ್ಡ ಸಂಪತ್ತು ಎಂದು ಹೇಳಿದರು. ನಾಗರಿಕ ವೇದಿಕೆ ರಾಜ್ಯಾಧ್ಯಕ್ಷ ಮಹೇಶಬಾಬು ಸುರ್ವೆ ಮಾತನಾಡುತ್ತ, ಸಮಾಜದಲ್ಲಿ ಉತ್ತಮ ಕೆಲಸ ಮಾಡುವವರನ್ನು ಗುರುತಿಸುವ ಕೆಲಸ ಮಾಡಬೇಕು, ಅದನ್ನು ಗೊಂಡಬಾಳ ಮಾಡುತ್ತಿದ್ದಾರೆ, ರಾಜ್ಯಮಟ್ಟದ ದಲಿತ ಸಾಹಿತ್ಯ ಸಮ್ಮೇಳನವನ್ನು ಏಕಾಂಗಿಯಾಗಿ ಸಂಘಟಿಸಿ ತೋರಿಸಿದ್ದಾರೆ, ಅದು ಅವರ ಶಕ್ತಿ ಮುಂದೆಯೂ ಉತ್ತಮ ಕಾರ್ಯಗಳನ್ನು ಮಾಡಲಿ ಎಂದರು. ಪತ್ರಕರ್ತ ಜಿ. ಎಸ್. ಗೋನಾಳ ಮಾತನಾಡಿ ರಾಜಕೀಯದಲ್ಲಿ ಸಾಹಿತ್ಯ

, ಸಂಸ್ಕೃತಿಯ ಅರಿವಿದ್ದವರು ಬರಬೇಕು, ಸಮಾಜದ ಬಗ್ಗೆ ಪ್ರೀತಿ ಇದ್ದು ಸೇವಾ ಮನೋಭಾವದವರು ಬರಬೇಕು, ಆದರೆ ಅಲ್ಲಿ ಬರೀ ದುಡ್ಡೇ ದೊಡ್ಡ ಪ್ರಾಶಸ್ತ್ಯವಾಗಿರುವದನ್ನು ಯುವಜನತೆ ಖಂಡಿಸಬೇಕು, ಗೊಂಡಬಾಳರಂತ ಸಂಘಟಕರಿಗೆ ರಾಜಕೀಯ ಶಕ್ತಿ ಸಿಗಬೇಕು ಎಂದರು. ವಕೀಲ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ವಿಜಯ ಅಮೃತ್‌ರಾಜ್ ಕವಿತೆ ವಾಚನ ಮಾಡಿ ಮಾತನಾಡಿದರು. ಜಾನಪದ ಕಲೆಯನ್ನು ಬೆಳೆಸುತ್ತಿರುವ ಸಂಘಟಕ ವೈ. ಬಿ. ಜೂಡಿಯವರನ್ನು ಇದೇ ವೇಳೆ ಜನಪದ ಪುಸ್ತಕ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಕ್ಯಾನಿಂಗ್ ತಜ್ಞವೈದ್ಯ ಡಾ|| ಅಶೋಕಕುಮಾರ ಗೊಂಡಬಾಳ, ಅಂತರಾಷ್ಟ್ರೀಯ ಕರಾಟೆಪಟು ಶ್ರೀನಿವಾಸ ಪಂಡಿತ, ಕಲಾವಿದ ನಿರ್ದೇಸಕ ಬಸವರಾಜ ಕೊಪ್ಪಳ ಇತರರು ಇದ್ದರು. ಇದೇ ವೇಳೆ ಜನಪದ ಸಂಸ್ಕೃತಿ ಕುರಿತು ಮಾತುಕತೆ ನಡೆಯಿತು. ವಿಜಯಕುಮಾರ ಗೊಂಡಬಾಳ ಪ್ರಾರ್ಥಿಸಿದರು, ಜ್ಯೋತಿ ಗೊಂಡಬಾಳ ಸ್ವಾಗತಿಸಿದರು, ಮಂಜುನಾಥ ಜಿ. ಗೊಂಡಬಾಳ ಕಾರ್ಯಕ್ರಮ ನಿರೂಪಿಸಿದರು, ಕೊನೆಯಲ್ಲಿ ಆನಂದ ಗೊಂಡಬಾಳ ವಂದಿಸಿದರು.

Please follow and like us:
error