ನಗರದಲ್ಲಿ ವಾರ್ಡ ನಂ ೨೮ ಸಿದ್ದೇಶ್ವರ ನಗರದಲ್ಲಿ ವಾಸವಾಗಿರುವ ಜನರಿಗೆ ವಿದ್ಯುತ್ ಇಲ್ಲದೆ ಅಂದಕರ ಜೀವನ.

ಕೊಪ್ಪಳ -14- ನಗರದ ವಾರ್ಡ ನಂ ೨೮ ಸಿದ್ದೇಶ್ವರ ನಗರದಲ್ಲಿ ವಾಸವಾಗಿರುವ ಜನರಿಗೆ ವಿದ್ಯುತ್ ಇಲ್ಲದೆ ಅಂದಕರ ಜೀವನ ಸಾಗಿಸುತ್ತಿದ್ದಾರೆ ಈ ಜನಾಂಗಕ್ಕೆ ವಿದ್ಯುತ್ ಒದಗಿಸುವ ಕುರಿತು ಜಿಲ್ಲಾ ಮಟ್ಟದ ಬುಡ್ಗಜಂಗಮ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾಧಿಕಾರಿಗಳಿಗೆ  ಮನವಿ ಸಲ್ಲಿಸಲಾಯಿತು. 
ಈ ಮುಂಚೆ ಹಲವುಬಾರಿ ಸಂಬಂದಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿರುವುದಿಲ್ಲ. ನಗರಸಭೆ ಅಧಿಕಾರಿಗಳು ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದು ಮೌಖಿಕವಾಗಿ ಸುಳ್ಳು ಬರವಸೆ ನೀಡುತ್ತಿದ್ದಾರೆ. ನಮ್ಮ ನಗರದಲ್ಲಿ ಶಾಲಾ ಕಾಲೇಜು ಮಕ್ಕಳಿಗೆ ಕತ್ತಲಲ್ಲಿ ಓದಲು ಬರೆಯಲು ತುಂಬಾ ತೊಂದರೆ ಉಂಟಾಗಿದೆ. ನಮ್ಮ ನಗರದ ನಿವಾಸಿಗಳು ಅಂದಕಾರ ಜೀವನ ಸಾಗಿಸುತ್ತಿದ್ದಾರೆ. ಆದ ಕಾರಣ ಅತಿ ಶಿಘ್ರದಲ್ಲಿ ನಮ್ಮ ಮನವಿ ಪರಿಗಣಿಸಿ ನ್ಯಾಯ ಒದಗಿಸಬೆಕೆಂದು ಕೇಳಿಕೊಂಡಿದ್ದಾರೆ.  ಈ ಸಂದರ್ಭದಲ್ಲಿ ಬಸವರಾಜ ವಿಭೂತಿ, ಶಂಕ್ರಪ್ಪ ವಿಭೂತಿ, ಶೇಖರ ತಾಟಿಕುಂಟಿ, ಮಲ್ಲಿಖಾರ್ಜುನ ರೆಡ್ಡಿ, ಚಂದಪ್ಪ ಹುಳ್ಳಿ, ಮಲ್ಲಿಕಾರ್ಜುನ ರೇವಲ್ಲಿ, ಪರಸಪ್ಪ ಹುಳ್ಳಿ, ವೀರುಪಾಕ್ಷ ಶಿರಿವಾಟಿ ಮುಂತಾದವರು ಉಪಸ್ಥಿತರಿದ್ದರು.

Please follow and like us:
error