ಕುರುಬ ಎಂದು ನಮೂದಿಸಿ – ಎಲ್.ಸಿದ್ದನಗೌಡ

 ಹೊಸಪೇಟೆ- ರಾಜ್ಯ ಸರ್ಕಾರ ಕೈಗೊಂಡಿರುವ  ಐತಿಹಾಸಿಕ ಜಾತಿಜನಗಣತಿಯಲ್ಲಿ ಜಿಲ್ಲೆಯ ಎಲ್ಲಾ ಕುರುಬ ಸಮಾಜ ಭಾಂಧವರು ಜಾತಿಜನಗಣತಿಯಲ್ಲಿ  ಕುರುಬ ಎಂದು ನಮೂದಿಸಬೇಕೆಂದು ಹೂಡಾ ಅಧ್ಯಕ್ಷ ಹಾಗೂ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಲ್. ಸಿದ್ದನಗೌಡ ಹೇಳಿದರು.
              ನಗರದ ಅಮರಾವತಿ ಅತಿಥಿ ಗೃಹದಲ್ಲಿ ಜಿಲ್ಲಾ ಮಟ್ಟದ ಸಭೆಯನ್ನುಧ್ಧೇಶಿಸಿ ಮಾತನಾಡಿದ ಅವರು, ಹಿಂದೆ ೧೯೩೧ ರಲ್ಲಿ ಬ್ರಿಟೀಷರ ಕಾಲದಲ್ಲಿ ಆದ ಜಾತಿಜನಗಣತಿ ಇದುವರೆಗೂ ನಡೆದಿದ್ದಿಲ್ಲ. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ, ಸ್ವಾತಂತ್ರ್ಯ ನಂತರ ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾತಿಜನಗಣತಿ ನಡೆಸುತ್ತಿದೆ. ಇದರಿಂದ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಲು ಅನುಕೂಲವಾಗುತ್ತದೆ. ಆದ್ದರಿಂದ ಸಮಾಜ ಭಾಂಧವರು ಸಮೀಕ್ಷೆ ಗಣತಿದಾರರು ಮನೆಗೆ ಬಂದಾಗ . ಜಾತಿ ಕಲಂನಲ್ಲಿ .ಕುರುಬ. ಕೋಡ್ ಸಂಖ್ಯೆ ೦೭೧೫ ಎಂದು ನಮೂದಿಸಬೇಕು. ನಮ್ಮಲ್ಲಿ ಉಪಜಾತಿಗಳಿಲ್ಲ, ಉಪಜಾತಿ ಕಲಂನಲ್ಲಿ ಯಾವುದನ್ನು ನಮೂದಿಸಬಾರದು ಎಂದು ಮನವಿ ಮಾಡಿದರು. ಸಭೆಯ ಸಾನಿಧ್ಯವನ್ನು ಕಲಬುರ್ಗಿ ವಿಭಾಗ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು, ತಿಂಥಿಣಿ ಬ್ರಿಜ್. ವಹಿಸಿದ್ದರು. ಮಾಜಿ ಹೂಡಾ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಕೆ.ಎಂ. ಹಾಲಪ್ಪ, ಡಿ.ಚಂದ್ರಶೇಖರ, ಡಿ.ಚೆನ್ನಪ್ಪ, ತ.ಚಿದಾನಂದ. ಕೆ.ಎಂ. ಲೋಕೇಶ, ಚಂದ್ರಣ್ಣ, ಮಲ್ಲೇಶಪ್ಪ, ಕೊಟ್ರೇಶಪ್ಪ, ಗುರುಪಾದಪ್ಪ, ಎಚ್. ವೀರಪ್ಪ, ವಕೀಲರಾದ ಎಲ್.ಎಸ್.ಆನಂದ, ಎಚ್.ಮಹೇಶ, ಎರ್ರಿಸ್ವಾಮಿ, ಕ್ಯಾರಿ ವೆಂಕಟೇಶ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.

Leave a Reply