ಮೆಕ್ಕೆಜೊಳ ಬೆಳೆ ಮಾಹಿತಿ ಮಾರ್ಗದರ್ಶನ.

ಕೊಪ್ಪಳ-30- ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಶಂಕರಗೌಡ ಮಾಲಿಪಾಟೀಲ ಇವರ ಹೊಲದಲ್ಲಿ ಜೆ.ಕೆ.ಎಂ.ಹೆಚ್-೫೦೨ ತಳಿಯ ಮೆಕ್ಕಜೊಳ ಬೆಳೆಯ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಉತ್ತಮ ಬೆಲೆ ಬೆಳೆದ ರೈತ ಶಂಕರಗೌಡ ಮಾಲಿಪಾಟೀಲರನ್ನು ಸನ್ಮಾನಿಸಲಾಯಿತು ಜೆ.ಕೆ ಕಂಪನಿಯ ಅಧಿಕಾರಿ ಪ್ರಶಾಂತ ಆರ್.ಎಂ ರೈತರಿಗೆ ಬೆಳೆಯ ಬಗ್ಗೆ ಮೆಕ್ಕಜೊಳ ತಳಿಗಳ ಬಗ್ಗೆ ಮಾಹಿತಿ ನೀಡಿದರು ನುರಾರು ಜನ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
    ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಹನುಮಂತಗೌಡ ಮಾಲಿಪಾಟೀಲ್, ಭೀರಪ್ಪ ಗುಡಗೇರಿ, ಶೇಖರಪ್ಪ ಹಳ್ಳಿ, ಯರಿಯಪ್ಪಗೌಡ ಹಿರೇಗೌಡ್ರು, ನಿವೃತ್ತ ಕೃಷಿ ಸಹಾಯಕ ಕೆ.ಎನ್.ಭದ್ರಾಪೂರ, ರಾಜಶೇಖರ, ಅಳವಂಡಿ ರೈತ ಸಂಪರ್ಕ ಕೇಂದ್ರದ ವಿ.ಎನ್.ಮ್ಯಾಗೇರಿ, ಬೀಜ ವಿತರಕರಾದ ರಾಜಶೇಖರ ದಂಡಿನ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ನಿಂಗಪ್ಪ ಮಾಲಿಪಾಟೀಲ್ ಸ್ವಾಗತಿಸಿ ವಂದಿಸಿದರು.

Leave a Reply