ಯಂಕಣ್ಣ ಪೂಜಾರ: ಕರ್ನಾಟಕ ರಾಜ್ಯ ಪುರಸ್ಕೃತ ಉತ್ತಮ ಗೃಹ ರಕ್ಷಕ ಪ್ರಶಸ್ತಿ

ಕೊಪ್ಪಳ ಅಗಷ್ಟ ೧೬, : ದಿ ೧೫ ರಂದು ಭಾಗ್ಯನಗರದ ಸಾರ್ವಜನಿಕ ಮೈದಾನದಲ್ಲಿ ನಡೆದ ೬೭ ನೇ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಭಾಗ್ಯನಗರ ಗ್ರಾಮಪಂಚಾಯತಿ ವತಿಯಿಂದ ಕರ್ನಾಟಕ ರಾಜ್ಯ ಪುರಸ್ಕೃತ ಉತ್ತಮ ಗೃಹ ರಕ್ಷಕ ಪ್ರಶಸ್ತಿಯನ್ನು ನೀಡಲಾಯಿತು. ಯಂಕಣ್ಣ ಪೂಜಾರ (ಹೋಮ ಗಾರ್ಡ) ಈ ಪ್ರಶಸ್ತಿಗೆ ಭಾಜನರಾದವರು. 
ಈ ಸಂದರ್ಭದಲ್ಲಿ ಗ್ರಾ. ಪಂ ಅಧ್ಯಕ್ಷ ಹೊನ್ನುರಸಾಬ ಬೈರಾಪುರ, ಉಪಾಧ್ಯಕ್ಷಿಣಿ ಹುಲಿಗೆಮ್ಮ ನಾಯಕ, ಉದ್ದಿಮೆದಾರ ಶ್ರೀನಿವಾಸ ಗುಪ್ತಾ, ಯಮನೂರಪ್ಪ ಕಬ್ಬೇರ, ಮಲ್ಲೇಶಪ್ಪ ಬುಲ್ಟ್ಪಿ, ಪಂಪಣ್ಣ್ಣ ಕಂಚಗುಂಡಿ, ಚಂದ್ರು ಉಂಕಿ, ಗ್ರಾ. ಪಂ ಸದಸ್ಯರಾದ ಪರುಶುರಾಮ್  ನಾಯಕ, ಶ್ರಿನಿವಾಸ ಹ್ಯಾಟಿ, ಯಮನಪ್ಪ ನಾಯಕ ಗ್ರಾಮದ ಗಣ್ಯರು, ಯುವ ಮಿತ್ರರು, ಹಾಗೂ ಸ್ನೇಹಿತರು ಉಪಸ್ಥಿತರಿದ್ದರು. ಎಂದು ಪತ್ರಿಕಾ ಪ್ರಕಟಣೆಗೆ ಹನಮಗೌಡ ಪೂಜಾರ ತಿಳಿಸಿದ್ದಾರೆ. 

Leave a Reply