ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿಗಳು ಭರ್ತಿ ಮಾಡುವ ಹುದ್ದೆಗಳ ವಿವರ

  ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ ಗ್ರಾಮೀಣ ನಿರುದ್ಯೋಗ ಯುವ ಅಭ್ಯರ್ಥಿಗಳಿಗೆ ಕೌಶಲ್ಯಾಧಾರಿತ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಇದೇ ನ. ೨೩ ರಂದು ಹುಲಿಗಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗಮೇಳದಲ್ಲಿ ಹಲವು ಕಂಪನಿಗಳು ಭಾಗವಹಿಸಲಿದ್ದು, ಅವುಗಳಲ್ಲಿ ಖಾಲಿ ಇರುವ ಹುದ್ದೆಗಳು ಹಾಗೂ ನೀಡಲಾಗುವ ವೇತನದ ವಿವರಗಳನ್ನು ಒದಗಿಸಲಾಗಿದೆ.
  ಆಶಾ ಎಲೆಕ್ಟ್ರಾನಿಕ್ಸ್, ಹುಬ್ಬಳ್ಳಿ:- ಖಾಲಿ ಹುದ್ದೆಗಳ ಸಂಖ್ಯೆ ೧೦೦ ಇದ್ದು, ಐಟಿಐ. ಎಲೆಕ್ಟ್ರಿಕಲ್ಸ್/ಫಿಟ್ಟರ್ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವವರಿದ್ದಾರೆ.  ಅವರಿಗೆ ಅಂದಾಜು ಮಾಸಿಕ ವೇತನ ರೂ.೭೦೦೦ ನೀಡಲಾಗುತ್ತದೆ.  ಫಸ್ಟ್ ಸೋರ‍್ಸ್, ಹುಬ್ಬಳ್ಳಿ:- ಖಾಲಿ ಹುದ್ದೆಗಳ ಸಂಖ್ಯೆ ೩೫೦ ಇದ್ದು, ಪಿಯುಸಿ. ಪದವಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವವರಿದ್ದಾರೆ.  ಅವರಿಗೆ ಅಂದಾಜು ಮಾಸಿಕ ವೇತನ ರೂ.೭೮೦೦ ನೀಡಲಾಗುತ್ತದೆ.  ಟ್ರಾಯರ್ ಸಲ್ಯೂಷನ್ಸ್, ಹುಬ್ಬಳ್ಳಿ:- ಖಾಲಿ ಹುದ್ದೆಗಳ ಸಂಖ್ಯೆ ೧೫೦ ಇದ್ದು, ಪಿಯುಸಿ/ಪದವಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವವರಿದ್ದಾರೆ.  ಅವರಿಗೆ ಅಂದಾಜು ಮಾಸಿಕ ವೇತನ ರೂ.೮೨೦೦ ನೀಡಲಾಗುತ್ತದೆ.  ಕನೆಕ್ಟ್ ಕನ್ಸಲ್ಟನ್ಸ್:- ಖಾಲಿ ಹುದ್ದೆಗಳ ಸಂಖ್ಯೆ ೫೦ ಇದ್ದು, ಪಿಯುಸಿ/ಪದವಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವವರಿದ್ದಾರೆ.  ಅವರಿಗೆ ಅಂದಾಜು ಮಾಸಿಕ ವೇತನ ರೂ.೭೨೦೦ ನೀಡಲಾಗುತ್ತದೆ.  ಗೋಲ್ಡನ್ ಕಂನ್ಸಲ್ಟೆನ್ಸಿ, ಹುಬ್ಬಳ್ಳಿ:- ಖಾಲಿ ಹುದ್ದೆಗಳ ಸಂಖ್ಯೆ ೨೨ ಇದ್ದು, ಪಿಯುಸಿ/ಪದವಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವವರಿದ್ದಾರೆ.  ಅವರಿಗೆ ಅಂದಾಜು ಮಾಸಿಕ ವೇತನ ರೂ.೭೨೦೦ ನೀಡಲಾಗುತ್ತದೆ.  ಅರವಿಂದ ಮಿಲ್ಸ್:- ಖಾಲಿ ಹುದ್ದೆಗಳ ಸಂಖ್ಯೆ ೨೦೦ ಇದ್ದು, ೮ನೇ ತರಗತಿ, ಪಿಯುಸಿ. ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವವರಿದ್ದಾರೆ.  ಅವರಿಗೆ ಅಂದಾಜು ಮಾಸಿಕ ವೇತನ ರೂ.೮೦೦೦ ರಿಂದ ೯೦೦೦ ನೀಡಲಾಗುತ್ತದೆ.  ಹಾಗೂ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗುವುದು.  ಸಾಯಿ ಎಕ್ಸ್‌ಪೋರ್ಟ್ಸ:- ಖಾಲಿ ಹುದ್ದೆಗಳ ಸಂಖ್ಯೆ ೧೦೦೦ ಇದ್ದು, ೮ನೇ ತರಗತಿ, ಪಿಯುಸಿ. ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವವರಿದ್ದಾರೆ.  ಅವರಿಗೆ ಅಂದಾಜು ಮಾಸಿಕ ವೇತನ ರೂ.೭೫೦೦ ನೀಡಲಾಗುತ್ತದೆ.  ಹಾಗೂ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.   ಶೋಭಾ ಡೆವಲಪ್ಪರ‍್ಸ್:- ಖಾಲಿ ಹುದ್ದೆಗಳ ಸಂಖ್ಯೆ ೧೦೦೦ ಇದ್ದು, ೧೦ನೇ ತರಗತಿ, ಪಿಯುಸಿ. ಐಟಿಐ.ಎಲೆಕ್ಟ್ರಿಕಲ್ ಹೊಂದಿದ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವವರಿದ್ದಾರೆ.  ಅವರಿಗೆ ಅಂದಾಜು ಮಾಸಿಕ ವೇತನ ರೂ.೯೦೦೦ ನೀಡಲಾಗುತ್ತದೆ.  ಹಾಗೂ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.  ಸಾಯಿ ಕನ್ಸಲ್ಟೆನ್ಸಿ:- ಖಾಲಿ ಹುದ್ದೆಗಳ ಸಂಖ್ಯೆ ೧೦೦೦ ಇದ್ದು, ೮ನೇ ತರಗತಿ, ಪಿಯುಸಿ. ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಎಲೆಕ್ಟ್ರಿಕಲ್, ವೆಲ್ಡಿಂಗ್, ಕಂಪ್ಯೂಟರ್, ಫಿಟ್ಟರ್, ವೈರಿಂಗ್, ಗಾರ್ಮೆಂಟ್ಸ್, ರಿಟೇಲ್ಸ್, ಸೆಕ್ಯೂರಿಟಿ ಕ್ಷೇತ್ರಗಳಲ್ಲಿ ಆಯ್ಕೆ ಮಾಡಿಕೊಳ್ಳುವವರಿದ್ದಾರೆ.   
  ಹೆಚ್ಚಿನ ಮಾಹಿತಿಗಾಗಿ ಬಿ.ಕಲ್ಲೇಶ್, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್, ಕೊಪ್ಪಳ – ೯೪೮೧೦೯೯೨೫೬, ಬಸವರಾಜ ಮೂಲಿಮನಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ’ಸಂಜೀವಿನಿ’ ಎನ್.ಆರ್.ಎಲ್.ಎಂ. ಜಿಲ್ಲಾ ಪಂಚಾಯತ್, ಕೊಪ್ಪಳ – ೯೬೬೩೬೬೨೩೨೧, ಬಸವರಾಜ ಪಾಟೀಲ್, ಜಿಲ್ಲಾ ವ್ಯವಸ್ಥಾಪಕರು, ’ಸಂಜೀವಿನಿ’ ಎನ್.ಆರ್.ಎಲ್.ಎಂ. ಜಿಲ್ಲಾ ಪಂಚಾಯತ್, ಕೊಪ್ಪಳ ೯೪೮೦೬೩೦೩೭೭ ಇವರನ್ನು ಸಂಪರ್ಕಿಸಬಹುದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ   ತಿಳಿಸಿದ್ದಾರೆ.

Related posts

Leave a Comment