ದಿ. ೨೫ ರಂದು ಮಹೇಶ ಬಳ್ಳಾರಿಯವರ ’ಎಡವಿ ಬಿದ್ದ ದೇವರು’ ಕೃತಿ ಬಿಡುಗಡೆ

ಕೊಪ್ಪಳ, ೨೨ : ಕೊಪ್ಪಳದ  ಯುವಕವಿ ಮಹೇಶ ಬಳ್ಳಾರಿ ಇವರ ಮೂರನೇ ಕವನ ಸಂಕಲನ ’ಎಡವಿ ಬಿದ್ದ ದೇವರು’ ಕೃತಿ ಬಿಡುಗಡೆ ಸಮಾರಂಭವನ್ನು  ದಿನಾಂಕ : ೨೫-೦೧-೨೦೧೫ ರಂದು, ಕೊಪ್ಪಳದ ಫಿರ್ದೂಸ್ ನಗರದಲ್ಲಿರುವ ’ಜ.ಚ.ನಿ. ಭವನ’ದಲ್ಲಿ (ಡಾ. ಆರ್.ಎಂ. ಪಾಟೀಲರ ಮನೆ ಮೇಲೆ) ಆಯೋಜಿಸಲಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿಗಳು, ನೃಪತುಂಗ ಪ್ರಶಸ್ತಿ ವಿಜೇತರು, 
       ಕನ್ನಡದ ಖ್ಯಾತ ಕಥೆಗಾರರಾದ ಕುಂ. ವೀರಭದ್ರಪ್ಪ ಕೃತಿ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಟ್ಟೂರಿನ ವಕೀಲರು, ಕವಿಗಳು ಹೊ.ಮ. ಪಂಡಿತಾರಾಧ್ಯ ಆಗಮಿಸಲಿದ್ದಾರೆ. ಅತಿಥಿಗಳಾಗಿ ಎಚ್.ಎಸ್. ಪಾಟೀಲ, ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಬಳ್ಳೊಳ್ಳಿ, ಪ್ರಭು ಹೆಬ್ಬಾಳ, ಶ್ರೀನಿವಾಸ ಗುಪ್ತಾ ಮತ್ತು ಬಿ.ಎಸ್. ಪಾಟೀಲ ಆಗಮಿಸಲಿದ್ದಾರೆ. ಎಲ್ಲ ಸಾಹಿತ್ಯಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲು ಅಂತರಂಗ ಧ್ವನಿ ಪ್ರಕಾಶನ ಮತ್ತು ಗವಿಸಿದ್ಧ ಎನ್. ಬಳ್ಳಾರಿ ವೇದಿಕೆಯ ಸಂಚಾಲಕ ಪ್ರಕಾಶ ಬಳ್ಳಾರಿ   ತಿಳಿಸಿದ್ದಾರೆ.

Leave a Reply