ಇತರರಕಷ್ಟ್ಠಗಳಲ್ಲಿ ಭಾಗಿಯಾಗಿ ಅದರ ನಿವಾರಣೆಗೆ ಪ್ರಯತ್ನಿಸಿ : ಅನ್ಸಾರಿ

ಕೊಪ್ಪಳ,ಜ.೩೧: ಮಾನವ ಮಾನವನಾಗಿ ಜೀವನ ಸಾಗಿಸುವದರ ಜೋತೆಗೆ ಸಹೋದರತ್ವ ಭಾವನೆಯನ್ನು ಬೆಳೆಸಿಕೊಂಡು ಹೋಗಬೇಕು ಮತ್ತು ಇತರ ಜನರ ಕಷ್ಟಗಳಲ್ಲಿ ಭಾಗಿಯಾಗಿ ಅದರ ನಿವಾರಣೆಗೆ ಪ್ರಯತ್ನಿಸಬೇಕು. ಅದೇ ಎಲ್ಲಾ ಧರ್ಮಗಳು ಬೋದಿಸುತ್ತದೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.
ಅವರು ಸೋಮವಾರ ರಾತ್ರಿ ವೇಳೆಯಲ್ಲಿ ನಗರದಲ್ಲಿ ಗಡಿಯಾರ ಕಂಬದ ಬಳಿ ಜವಾಹರ ರಸ್ತೆಯಲ್ಲಿ ಹಜ್ರತ ಖ್ವಾಜಾಗರೀಬ್ ನವಾಜ್ ಸಮಾಜ ಸೇವಾ ಯವಕ ಸಂಘ ದಿಡ್ಡಿಕೇರಿ ಕೊಪ್ಪಳ ವತಿಯಿಂದ ಏರ್ಪಡಿಸಿದ ಜಶ್ನೆ ಮೀಲಾದೆ ಮುಸ್ತಫಾ (ಸ) ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
  ಒಬ್ಬಮನುಷ್ಯ ಇನ್ನೋಬ್ಬ ಮನುಷ್ಯನ ಜೋತೆಗೆ ಕೊಡಿ ಕೊಂಡು ಸಹೋದರತ್ವ ಭಾವನೆ ಬೆಳೆಸಿ ಕೊಂಡು ಜೀವನಸಾಗಿಸಬೇಕು ಇತರರಿಗೆ ಕಷ್ಟ ಕೊಟ್ಟರೆ ಅದು ಇಸ್ಲಾಂ ಧರ್ಮವಾಗಲಿ ಮಹ್ಮದ ಪೈಗಂಬರ್ (ಸ)ವಾಗಲಿ ಸಹಿಸುವದಿಲ್ಲ ಎಂದು ಸ್ಪಷ್ಟಪಡಿಸಿದರು. ಮಾನವ ಧರ್ಮ ಅತ್ಯಂತ ಮಹತ್ವದ್ದಾಗಿದ್ದು ಇಸ್ಲಾಂ ಧರ್ಮಕೂಡ ಅದನ್ನೆ ಹೇಳುತ್ತದೆ ಮಹ್ಮದ ಪೈಗಂಬರ್ (ಸ) ಇಡೀಮಾನವ ಕುಲಿಕ್ಕೆ ಸಂದೇಶ ನೀಡಿದ್ದಾರೆ ಕುರ್‌ಆನ್ ಇಡೀ ಮಾನವಕುಲಕ್ಕೆ ದೇವನೊಬ್ಬ ಎಂದು ಸಂದೇಶ ನೀಡಿದೆ ಎಂದು ತಿಳಿಸಿದ ಅವರು ಮಹ್ಮದ ಪೈಗಂಬರ ಜನ್ಮದಿನಾಚರಣೆಯಲ್ಲಿ ಪ್ರತಿಯೊಬ್ಬರಿಗೂ ಆಹ್ವಾನ ನೀಡಿ ಕರೆತನ್ನಿ ಎಂದು ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ ಯುವಮುಖಂಡ ಕೆ,ವಾಸುದೇವ ಮಾತನಾಡಿದರು. ಜಿ.ಪಂ ಸದಸ್ಯ ಕೆ.ರಾಘವೇಂದ್ರ ಹಿಟ್ನಾಳ ನಗರ ಸಭೆ ಉಪಾಧ್ಯಕ್ಷ ಅಮ್ಜದ ಪಟೇಲ್, ಸದಸ್ಯರಾದ ಕಾಟನಪಾಷಾ, ಮಾನ್ವಿಪಾಷಾ, ಸಿದ್ದಣ್ಣ ನಾಲ್ವಾಡ, ಜನಾರ್ಧನ ಟಿ., ಖಲೀಲ ಅಹ್ಮದ ದಾಗದಾರ, ದಾಮೋದರ್ ವರ್ಣೆಕರ, ಇಬ್ರಾಹಿಸಾಬ ಅಡ್ಡೆವಾಲೆ, ಎಂ.ಡಿ.ಸಾದಿಕಶೇಖ, ಜೀಲಾನ ಮೈಲೈಕ್, ವಾಹೀದ್ ಸೋಂಪೂರು ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದ ಸಾನಿಧ್ಯವನ್ನು ಸೂಫಿ ಅಲ್‌ಹಾಜ ಮಹ್ಮದ ಬಕ್ಷಿಸಾಹೇಬ ನಕ್ಷಬಂದಿಉಲ್ ಖಾದ್ರಿ ಮೌಲಾನಾ ಮುಸ್ತಫಕಮಾಲ್ ಮುಫ್ತಿ ನಜೀರಹ್ಮದ ಖಾದ್ರಿ ಆಶೀರ್ವಚನ ನೀಡಿದರು. ಮೌಲಾನಾ ಸಮದಖಾದ್ರಿ ಅಸದುಲ್ಲಾಖಾದ್ರಿ ಹಾಫೀಜ್ ಮೊಹಿಯುದ್ದೀನ್ ಖಾದ್ರಿ ನಾಸೀರಹ್ಮದ್ ತಸ್ಕೀನ ಮಹೆಬೂಬ ಪಾಷಾಖಾದ್ರಿ ಮತ್ತಿತರರು ಉಪಸ್ಥಿತರಿದ್ದರು.
Please follow and like us:
error