ಟಿವಿ೯ ಚಾನಲ್ ಬಂದ್ ಮಾಡಿಸಿದ ಸಚಿವ ಡಿಕೆಶಿ ವಿರುದ್ಧ ಪ್ರತಿಭಟನೆ

ಕೊಪ್ಪಳ, : ರಾಜ್ಯದ ಕೇಬಲ್ ನೆಟ್‌ವರ್ಕನಲ್ಲಿ ಟಿವಿ೯ ಕನ್ನಡ ಸುದ್ದಿ ವಾಹಿನಿಯನ್ನು ಬಂದ್ ಮಾಡಿಸಿದ ಸಚಿವ ಡಿ.ಕೆ.ಶಿವಕುಮಾರ್ ವರ್ತನೆಯನ್ನು ವಿರೋಧಿಸಿ ಕೊಪ್ಪಳ ಮೀಡಿಯಾ ಕ್ಲಬ್ ನಿಂದ ಅಶೋಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಾಧ್ಯಮದ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವ ಡಿ.ಕೆ.ಶಿವಕುಮಾರ್ ವರ್ತನೆ ಖಂಡನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಸರ್ವಾಧಿಕಾರಿ ಧೋರಣೆ ತೋರುತ್ತಿರುವ ಸಚಿವ ಡಿ.ಕೆ.ಶಿವಕುಮಾರ್‌ರನ್ನು ಸಚಿವ ಸಂಪುಟದಿಂದ ಕೈಬಿಡಲು ಆಗ್ರಹಿಸಲಾಯಿತು. ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ಥಂಬ ಪತ್ರಿಕಾರಂಗದ ಮೇಲೆ ದಬ್ಬಾಳಿಕೆ ಮಾಡಿರುವ ಡಿ.ಕೆ.ಶಿವಕುಮಾರ್‌ರ ಜನವಿರೋಧಿ,ಪ್ರಜಾಪ್ರಭುತ್ವ ವಿರೋಧಿ ಕಾರ‍್ಯ ಖಂಡನೀಯ.  ಮುಖ್ಯಮಂತ್ರಿಗಳು ಈ ಕೂಡಲೇ ಡಿ.ಕೆ.ಶಿವಕುಮಾರ್ ರನ್ನು ವಜಾಗೊಳಿಸಬೇಕು. ಪತ್ರಕರ್ತರಿಗೆ ಹಾಗೂ ಮಾಧ್ಯಮಗಳಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷರಾದ ಸೋಮರಡ್ಡಿ ಅಳವಂಡಿ, ಪ್ರಧಾನ ಕಾರ‍್ಯದರ್ಶಿ ದೇವು ನಾಗನೂರ, ಬಸವರಾಜ್ ಕರುಗಲ್ ಮಾತನಾಡಿದರು. ಪ್ರತಿಭಟನೆಯಲ್ಲಿ ಮುಕ್ಕಣ್ಣ ಕತ್ತಿ,ದೊಡ್ಡೇಶ್ ಎಲಿಗಾರ್, ಶಿವಕುಮಾರ್ ಪತ್ತಾರ, ಸಿರಾಜ್ ಬಿಸರಳ್ಳಿ,ಶ್ರೀಪಾದ್ ಆಯಾಚಿತ್, ತಿಪ್ಪನಗೌಡ ಬೀಕನಳ್ಳಿ,ಮಹೇಶ ಗೌಡ ಭಾನಾಪೂರ,ನಾಬಿರಾಜ್ ದಸ್ತೆನವರ, ದತ್ತು ಕಮ್ಮಾರ್, ಬಸವರಾಜ್ ಮರಡೂರ, ಭರತ್ ಕಂದಕೂರ,ಮಾರುತಿ ಕಟ್ಟಿಮನಿ,ಶಂಕರ ಕೊಪ್ಪದ,ಶರಣಪ್ಪ ಕೊತಬಾಳ, ಬಸವರಾಜ್ ಶೀಲವಂತರ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Leave a Reply