ಇಂದು ಸಮುದಾಯ ಸಾಂಸ್ಕೃತಿಕ ಸಂಭ್ರಮ, ಕವಿ ಗೋಷ್ಠಿ

ಕೊಪ್ಪಳ, ಜು.೦೭ : ದ್ವಾರಕಾ ಸಮುದಾಯ ಅಭಿವೃದ್ಧಿ ಸಂಸ್ಥೆ ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಸಮುದಾಯ ಸಾಂಸ್ಕೃತಿಕ ಸಂಭ್ರಮ ಹಾಗೂ ಸಮುದಾಯ ಕವಿಗೋಷ್ಠಿ ಕಾರ್ಯಕ್ರಮವು ಜು.೧೨ರಂದು ಬೆ. ೧೦.೩೦ರಿಂದ ನಗರದ ಸಾಹಿತ್ಯಭವನದ ಹತ್ತಿರದ ಸಿರಿಗನ್ನಡ ಪುಸ್ತಕ ಮಳಿಗೆ ಆವರಣದಲ್ಲಿ ಸಂಸ್ಥೆಯ ೫ನೆಯ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಲಾಗಿದೆ.
ಸಮಾರಂಭದ ಸಾನಿಧ್ಯವನ್ನು ಶ್ರೀ ಮಹಾದೇವಯ್ಯಸ್ವಾಮಿಗಳು ಮುಂಡರಗಿ ಶ್ರೀ ಅನ್ನದಾನೀಶ್ವರ ಶಾಖಾ ಮಠ ಕುಕನೂರು ಇವರು ವಹಿಸುವರು. ಸಂಸ್ಥೆಯ ಅಧ್ಯಕ್ಷ ಎಚ್. ಎಸ್. ಪಾಟೀಲ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಉಪ ವಿಭಾಗಾಧಿಕಾರಿ ಪಿ. ಎಸ್. ಮಂಜುನಾಥ, ಜಿ.ಪಂ. ಸಿ.ಇ.ಒ ಕೃಷ್ಣಾ ಉದುಪುಡಿ, ಜಿ.ಪಂ. ಅಧ್ಯಕ್ಷ ಅಮರೇಶ ಕುಳಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಕೊಟ್ರಪ್ಪ ಚೋರನೂರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಜಿ. ಎಸ್. ಗೋನಾಳ, ಅಧ್ಯಕ್ಷ ಸಾಧಿಕ ಅಲಿ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷರಾದ ಬಸವರಾಜ ಆಕಳವಾಡಿ, ನಿವೃತ್ತ ಪ್ರಚಾರ್ಯ ಸಿ. ವಿ. ಜಡಿಯವರ, ನಗರ ಸಭೆ ಅಧ್ಯಕ್ಷೆ ಶ್ರೀಮತಿ ಬಸಮ್ಮ ಹಳ್ಳಿಗುಡಿ, ಉಪಾಧ್ಯಕ್ಷ ಬಾಳಪ್ಪ ಬಾರಕೇರ ಅವರುಗಳು ವಹಿಸಲಿದ್ದಾರೆ.
ಸಮುದಾಯ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ವಹಿಸುವರು. ಜಿಲ್ಲೆಯ ಸಾಹಿತಿಗಳು ತಮ್ಮ ಸ್ವರಚಿತ ಕವನಗಳನ್ನು ಓದುವರು. ನಂತರ ನಡೆಯುವ ಸಮುದಾಯ ಸಾಂಸ್ಕೃತಿಕ  ಸಮಾರಂಭದಲ್ಲಿ ಭರತನಾಟ್ಯ, ಸಮೂಹ ನೃತ್ಯ, ಭಾಗವಗೀತೆ, ಜನಪದಗೀತೆ, ಸಂಪ್ರದಾಯದದ ಪದಗಳು ಮಿಮಿಕ್ರಿ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು 

Related posts

Leave a Comment