fbpx

ಸದೃಡ ದೇಹಕ್ಕೆ ಕ್ರೀಡೆಗಳು ಅವಶ್ಯಕ- ತಾ ಪಂ ಅಧ್ಯಕ್ಷ ಮಹಾದೇವಿ.

ಕೊಪ್ಪಳ -೬ ಸದೃಡವಾದ ದೇಹಕ್ಕೆ ಮತ್ತು ಸದೃಡ ಮನಸ್ಸಿಗೆ ಕ್ರೀಡೆಗಳು ಅವಶ್ಯವಾಗಿದ್ದು ವಿದ್ಯಾರ್ಥಿಗಳು ಸ್ಪರ್ದಾ ಮನೋಭಾವದಿಂದ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸಿ ಆರೋಗ್ಯಕರವಾದ ಸ್ಪರ್ಧೆ ನಿಮ್ಮದಾಗಿಸಿಕೊಳ್ಳಬೇಕೆಂದು ಯಲಬುರ್ಗಾ ತಾಲೂಕ ಪಂಚಾಯಿತಿ ಅಧ್ಯಕ್ಷ ಮಹಾದೇವಿ ಕಂಬಳಿ ಹೇಳಿದರು.
ಅವರು ಯಲಬುರ್ಗಾ ತಾಲೂಕಿನ ಬೇಣಕಲ್ ಗ್ರಾಮದ ನೃಪತುಂಗ ಫ್ರೌಢ ಶಾಲೆಯಲ್ಲಿ ಯಲಬುರ್ಗಾ ವಲಯ ಮಟ್ಟದ ಕ್ರೀಡಾಕೂಟದ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ೨೦೧೫-೧೬ ಸಾಲಿನ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತಾನಾಡಿದ ಅವರು ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಬೆಳೆಯಲು ಶಿಕ್ಷಕರೋಂದಿಗೆ ಪಾಲಕರು ಸಹ ಪ್
ನೀವೇ ಮೊದಲು ಶಿಸ್ತಿನಲ್ಲಿ ಇಲ್ಲದಿದ್ದರೆ ಮಕ್ಕಳಿಗೆ ಹೇಗೆ ಶಿಸ್ತಿನ ಪಾಠ ಹೇಳಿಕೊಡುತ್ತಿರಾ , ಎಂದು ದೈಹಿಕ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿ.ಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ ಮಾತನಾಡಿ ವಿಧ್ಯಾರ್ಥಿಗಳು  ಛಲ ಮತ್ತು ಆತ್ಮವಿಶ್ವಾಸದಿಂದ  ಕ್ರೀಡೆಗಳಲ್ಲಿ ಭಾಗವಹಿಸಿ ಕಲಿತ ಶಾಲೆಗಳಲ್ಲಿ ಕೀರ್ತಿ ತರಬೇಕು .ಸೋಲು ಗೆಲವುಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ನಿಮ್ಮದಾಗಿರಲಿ ಪ್ರತಿಯೊಬ್ಬ ವಿಧ್ಯಾರ್ಥಿ ದೈಹಿಕ ಕ್ರೀಡಯಲ್ಲಿ ತೊಡಗಿಸಿದಾಗ ಸಧೃಡವಾಗಿ ಬೆಳೆಯಲು ಸಾಧ್ಯವಾಗುವುದು, ಕ್ರೀಡೆಗಳಲ್ಲಿ ಭಾಗವಹಿಸಿದಾಗ ಅಂತಹ  ಕ್ರೀಡಾಪಟು ವಿಧ್ಯಾರ್ಥಿ ಮುಂದೆ ದೊಡ್ಡ ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ನೃಪತುಂಗ ಶಿಕ್ಷಣ ಸಮಿತಿಯ ಅಧ್ಯಕ್ಷನಾದ ವೈಜನಾಥ ದಿವಟರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ ಪಂ ಅದ್ಯಕ್ಷ ಅಕ್ಕಮ್ಮ ವಜ್ರಬಂಡಿ ,ಉಪಾದ್ಯಕ್ಷ ಅನ್ನಪೂರ್ಣ ತಳವಾರ ,ಸದಸ್ಯರಾದ ಮುಕ್ಕಣ್ಣ ಸೊರಟುರ ,ಗವಿಸಿದ್ದಪ್ಪ ನೀರಲಗಿ, ವಿರುಪಾಕ್ಷಪ್ಪ ಚಳಗೇರಿ, ದೇವಮ್ಮ ಹಳ್ಳಿಕೆರಿ ,ರೇಣುಕಾ ಕಾಳಿ, ಮಲ್ಲಿಕಾರ್ಜುನ ಗದಗ,ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶೇಖರಪ್ಪ ಬಳೆಗೆರ, ಪರಮಾನಂದ ಯಾಳಿಗಿ ನಿಂಗಪ್ಪ ಹಂಡಿ, ಶರಣಪ್ಪ ಕಡಿ ಉಮೇಶ ಕಂಬಳಿ, ಶರಣಪ್ಪ ವೀರಾಪುರ,ಗವಿಸಿದ್ದಪ್ಪ ಕುಂಬಾರ,ಕಳಕಪ್ಪ ಪಲ್ಲೇದ, ಹನುಮಪ್ಪ ಕಲ್ಲುರ, ಬಿ.ಎಸ್. ಜಿಗೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರೋತ್ಸಾಹ ನೀಡಬೇಕು ಮಕ್ಕಳ ಯೊಗ್ಯತೆ ಅನುಗುಣವಾಗಿ ಸಾಧನೆಗೆ ಪ್ರೇರಪಿಸಬೇಕು, ಎಂದು ಹೇಳಿದ ಅವರು ಇಂದು ಚಾಲನೆಗೊಂಡ ಕ್ರೀಡಾಕೂಟವು ದೈಹಿಕ ಶಿಕ್ಷPರ ಸಂಘಟನೆ ಕೊರತೆಯಿಂದಾಗಿ ಕ್ರೀಡಾಕೂಟವು ಅವ್ಯವಸ್ಥೆಯಿಂದ ಕೂಡಿದ್ದು ಇದರಿಂದ ಕ್ರೀಡಾಪಟೂಗಳಿಗೆ ತಮ್ಮ ಪ್ರತಿಭೆ ಹೊರಹೊಮ್ಮಲಿಕ್ಕೆ ಅಡ್ಡಿಯಾಗುವದಲ್ಲದೆ ಶಿಕ್ಷಕರು ವಿಧ್ಯಾರ್ಥಿಗಳಿಗೆ ಕೇವಲ ಶಿಕ್ಷಣ ನೀಡುವದೊಂದೆ ಗುರಿಯಲ್ಲ, ಅವರಿಗೆ ಮೊದಲು ಶಿಸ್ತಿನ ಪಾಠ ಹೇಳಿ ಕೊಡುವ ಜವಬ್ದಾರಿ ತಮ್ಮ ಮೇಲಿದೆ.

Please follow and like us:
error

Leave a Reply

error: Content is protected !!