ಜನ ಆರೋಗ್ಯ ರಕ್ಷಣೆಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಬದ್ದ.

ಕೊಪ್ಪಳ, ೦೧- ಜಿಲ್ಲೆಯ ಎಲ್ಲಾ ಗ್ರಾಮದ ಜನ ಆರೋಗ್ಯ ರಕ್ಷಣೆಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಬದ್ದವಾಗಿದ್ದು ಬರುವ ದಿನಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುವುದೆಂದು ರಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿ ಡಾ|| ಸಿ.ಎಸ್.ಕರಮುಡಿ ಹೇಳಿದರು.
ಅವರು ಯಲಬುರ್ಗಾ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ. ಶ್ರೀ ಗವಿಶ್ರೀ ಗ್ರಾಮೀಣಾಭಿವೃದ್ಧಿಯ ಹಾಗೂ ಶಿಕ್ಷಣ ಸೇವಾ ಸಂಸ್ಥೆ ಕೊಪ್ಪಳ ಹಾಗೂ ದೇಶಪಾಂಡೆ ಕುಟುಂಬದಿಂದ ೧೨೦ ಜನರಿಗೆ ಉಚಿತ ಕನ್ನಡ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.
ರೆಡ್ ಸಂಸ್ಥೆ ಜಮರಿಗಾಗಿ ಇದ್ದು ನಿಮ್ಮ ಆರೋಗ್ಯ ರಕ್ಷಣೆಗೆ ಎಲ್ಲಾರಿತಿಯ ತಪಾಸಣೆ ಚಿಕಿತ್ಸೆಗೆ ಸಂಸ್ಥೆ ಶ್ರಮವಹಿಸುತ್ತಿದೆ. ವಿವಿದ ಸಂಸ್ಥೆಗಳ ಸಹಕಾರದಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಉದ್ದೇಶ ನಮ್ಮದು ಎಂದರು.
ಕಲ್ಲೂರ ಗ್ರಾಮದಲ್ಲಿ ಶ್ರೀಗವಿಶ್ರೀ ಸಂಸ್ಥೆ ಹಾಗೂ ದೇಶಪಾಂಡೆ ಕುಟುಂಬದ ಸಹಯೋಗದಲ್ಲಿ ಪ್ರತಿವರ್ಷ ವಿವಿದ ತಜ್ಞ ವೈದ್ಯರೋಂದಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಲಾಗುದೆಂದು ಹೇಳಿದರು.
ಗ್ರಾಮದ ೧೨೦ ಜನರಿಗೆ ಉಚಿತ ನೇತ್ರ ತಪಾಸಣೆ ಹಾಗೂ ಉಚಿತ ಕನ್ನಡ ಮತ್ತು ೨೫ ಜನರಿಗೆ ಉಚಿತ ನೇತ್ರ ಶಸ್ತ್ರ ಚಿಕಿತ್ಸೆಯು ಮಾಡಲಾಗಿದ್ದು ಮುಂದಿನ ಯೋಜನೆಗಳನ್ನು ಸದುಪಯೋಗ ಪಡಿಸಿ ಕೊಳ್ಳುವಂತೆ ಕೋರಿದರು.ಇಂದಿನ ದಿನದಲ್ಲಿ ದುಶ್ಚಟಗಳಿಗೆ ಒಳಪಡುವವರ ಸಂಖ್ಯೆ ಹೆಚ್ಚುತ್ತಿದ್ದು ಗ್ರಾಮದ ಸ್ವಚ್ಚತೆ ಹಾಗೂ ದುಶ್ಚಟದಿಂದ ದೂರ ವಿದ್ದಾಗ ಆರೊಗ್ಯವಂತ ಸಮಾಜ ನಿರ್ಮಾಣವಾಗಲೂ ಸಾಧ್ಯ ಎಂದು ಹೇಳಿದರು.
ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಗವಿಶ್ರೀ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸೇವಾ ಸಂಸ್ಥೆ ಅಧ್ಯಕ್ಷ ಸಂತೋಷ ದೇಶಪಾಂಡೆ ಮಾತನಾಡಿ ಕಲ್ಲೂರಿನ ದೈವ ಶ್ರೀಕಲ್ಲಿನಾಥನ ಕೃಪೆಯಿಂದ ಪ್ರತಿ ವರ್ಷ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ  ಸಾಮಾಜಿಕ ಕೆಲಸಗಳನ್ನು ಹಮ್ಮಿಕೊಳ್ಳೋಣ ಎಂದರು.
    ಕಾರ್ಯಕ್ರಮದಲ್ಲಿ ಕಲ್ಲೂರ ಗ್ರಾ.ಪಂ.ಅಧ್ಯಕ್ಷರಾಮಣ್ಣ ಬಂಗಾಳೀಗಿಡ.ತಾ,ಪಂ ಸದಸ್ಯ ಅಮರೇಶ ಶೇಟ್ಟರೆ. ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕ ಸುಧಿರ ಅವರಾದಿ ಗ್ರಾ.ಪಂ ಸರ್ವ ಸದಸ್ಯರು ಗ್ರಾಮದ ಹಿರಿಯರು ಉಪಸ್ಥಿತರಿದ್ದರು, ದೇವೇಂದ್ರಪ್ಪ ಹಿಟ್ನಾಳ ನಿರುಪಿಸಿ ವಂದಿಸಿದರು.

Leave a Reply