ಪತ್ರಕರ್ತನ ಮೇಲೆ ಹಲ್ಲೆ : ಖಂಡನೆ

ಕೊಪ್ಪಳ.೧೩-ಯಲಬುರ್ಗಾದಲ್ಲಿ ಸ್ಥಳೀಯ ಪಾಕ್ಷಿಕ ಪತ್ರಿಕೆಯ ವರದಿಗಾರ ಕಳಕಪ್ಪ ಅಂಗಡಿ ಅವರ ಮೇಲೆ ಯಲಬುರ್ಗಾ ಶಾಸಕ ಈಶಣ್ಣ ಗುಳಗಣ್ಣವರ್ ಪುತ್ರ ಮತ್ತು ಇತರ ಬೆಂಬಲಿಗರು ಸೇರಿ ಹಲ್ಲೆ ಮಾಡಿರುವ ಘಟನೆಯನ್ನು ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ. ನಗರದ ವಾರ್ತಾ ಭವನದಲ್ಲಿ ಭಾನುವಾರ ಸಭೆ ಸೇರಿದ ಸಂಘದ ಸದಸ್ಯರು ಹಲ್ಲೆಕೋರರನ್ನು ಬಂಧಿಸುವಂತೆ ಆಗ್ರಹಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಬಸವರಾಜ ಶೀಲವಂತರ್ ಮಾತನಾಡಿ, ದಿನೇ ದಿನೇ ಪತ್ರಕರ್ತರ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ಹೆಚ್ಚುತ್ತಿದ್ದರೂ ಸರಕಾರ ಮೌನ ವಹಿಸಿರುವುದು ಸರಿಯಲ್ಲ. ರಾಜಕೀಯ ಪಕ್ಷಗಳ ಮುಖಂಡರು ಇಂಥ ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿರುವುದನ್ನು ಗಮನಿಸಿದರೆ ಪ್ರಸ್ತುತ ಸರಕಾರ ರಾಜ್ಯದಲ್ಲಿ ಗೂಂಡಾ ಆಡಳಿತವನ್ನು ನಡೆಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಸಭೆಯಲ್ಲಿ ಹಿರಿಯ ಪತ್ರಕರ್ತರಾದ ವಿಠ್ಠಪ್ಪ ಗೋರಂಟ್ಲಿ, ಸಂಘದ ಜಿಲ್ಲಾ ಸಂಚಾಲಕ ಬಸವರಾಜ ಕರುಗಲ್, ಸಹ ಸಂಚಾಲಕ ನಾಗರಾಜ ಸುಣಗಾರ, ಪತ್ರಕರ್ತರಾದ ಭೀಮಸೇನ ಚಳಗೇರಿ, ಎನ್.ಎನ್.ಮೂರ್ತಿ ಪ್ಯಾಟಿ, ಗಂಗಾಧರ ಬಂಡಿಹಾಳ, ಹುಸೇನ ಪಾಷಾ, ಶ್ರೀಪಾದ ಅಯಾಚಿತ್, ಶರಣು ಹಂಪಿ ಸೇರಿದಂತೆ ಹಲವು ಸದಸ್ಯರು ಪಾಲ್ಗೊಂಡಿದ್ದರು

Leave a Reply