ಸಮ್ಮೇಳನದ ಸುದ್ದಿಮನೆಯ ಸುದ್ದಿ…

ಗಂಗಾವತಿ: ಕನ್ನಡ ಸಾಹಿತ್ಯ ಕಂಪನ್ನು ರಾಜ್ಯ, ರಾಷ್ಟ್ರದಾದ್ಯಂತ ಬಿತ್ತರಿಸಲು ಮಾಧ್ಯಮ ಪ್ರತಿನಿಧಿಗಳ ದಂಡು ಸಮ್ಮೇಳನದ ಅಂಗಳದಲ್ಲಿತ್ತು. ಮುಖ್ಯ ವೇದಿಕೆಯ ಹಿಂಭಾಗದಲ್ಲಿ ಸ್ಥಾಪಿಸಲಾದ `ಮಾಧ್ಯಮ ಕೇಂದ್ರ` ಮೂರು ದಿನಗಳ ಕಾಲ ನೂರಾರು ಪತ್ರಕರ್ತರಿಂದ ತುಂಬಿ ತುಳುಕಿತು.
ಸಮ್ಮೇಳನ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ಆಗಮಿಸಿರುವ ಮಾಧ್ಯಮ ಪ್ರತಿನಿಧಿಗಳು ದಿನನಿತ್ಯದ ಅಧಿವೇಶನ, ಗೋಷ್ಠಿಗಳ ಸಾರವನ್ನು ಓದುಗರಿಗೆ ಭರ್ಜರಿಯಾಗಿಯೇ ಉಣಬಡಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಬಹುತೇಕ ಎಲ್ಲ ಪತ್ರಿಕೆಗಳೂ ಸಮ್ಮೇಳನಕ್ಕೆಂದೇ ಮೂರ್ನಾಲ್ಕು ಪುಟಗಳನ್ನು ಮೀಸಲಿಟ್ಟಿವೆ. ರಾಜ್ಯಮಟ್ಟದ ಪತ್ರಿಕೆಗಳು ಆರೆಂಟು ಪ್ರತಿನಿಧಿಗಳನ್ನು ಕಳಿಸಿರುವುದು, ಎಲ್ಲ ಗೋಷ್ಠಿ- ಕಾರ್ಯಕ್ರಮಗಳ ವಿಸ್ತೃತ ವರದಿ ಒದಗಿಸಲು ಅನುವಾಗಿದೆ.
ಇನ್ನು ವಿದ್ಯುನ್ಮಾನ ಮಾಧ್ಯಮಗಳ ಪ್ರತಿನಿಧಿಗಳೂ ಸಮ್ಮೇಳನದ ಅಂಗಳದಲ್ಲಿ ಬೀಡು ಬಿಟ್ಟಿದ್ದಾರೆ. ಮಹತ್ವದ ಕಾರ್ಯಕ್ರಮಗಳ ನೇರಪ್ರಸಾರಕ್ಕೆ ಟಿವಿ ಚಾನೆಲ್‌ಗಳು ಒಬಿ ವ್ಯಾನ್ ರವಾನಿಸಿವೆ.
ಹೈಟೆಕ್ ಸೌಲಭ್ಯ: ಮಾಧ್ಯಮ ಕೇಂದ್ರದಲ್ಲಿ 50 ಕಂಪ್ಯೂಟರ್‌ಗಳು ಬ್ರಾಡ್‌ಬ್ಯಾಂಡ್ ಸಂಪರ್ಕದೊಂದಿಗೆ 24 ತಾಸು ಕೆಲಸ ನಿರ್ವಹಿಸಿದವು. ಗೋಷ್ಠಿ ಮುಗಿಯುತ್ತಲೇ ಪತ್ರಕರ್ತರು ಧಾವಿಸಿ, ಕಂಪ್ಯೂಟರ್‌ನಲ್ಲಿ ಸುದ್ದಿ ಸಿದ್ಧಪಡಿಸಿ ಕಳಿಸುತ್ತಿದ್ದರು. ಕೆಲವು ಪತ್ರಿಕೆಗಳ ವರದಿಗಾರರು ಲ್ಯಾಪ್‌ಟಾಪ್ ತಂದಿದ್ದು, ಸುದ್ದಿ- ಫೋಟೋ ಕಳಿಸಲು ಅವರಿಗೂ ಅನುವಾಗುವಂತೆ `ವೈ-ಫೈ` ಸೌಲಭ್ಯ ಕಲ್ಪಿಸಲಾಗಿತ್ತು. ತಾಂತ್ರಿಕ ತೊಂದರೆ ಉಂಟಾದರೆ, ಕೇಂದ್ರದಲ್ಲೇ ಇದ್ದ ಸಿಬ್ಬಂದಿ ಧಾವಿಸಿ ಬಂದು ಸರಿಪಡಿಸುತ್ತಿದ್ದರು.
ಆದ್ಯತೆಗಳು ಬೇರೆ: ಸುದ್ದಿ ಮಾಡುವಲ್ಲೂ ಮಾಧ್ಯಮಗಳ ಆದ್ಯತೆಗಳು ಬೇರೆ ಬೇರೆಯಾಗಿವೆ. ಮುದ್ರಣ ಮಾಧ್ಯಮಗಳ ವರದಿಗಾರರು ಅಧಿವೇಶನ, ಗೋಷ್ಠಿಗಳಿಗೆ ಕಡ್ಡಾಯವಾಗಿ ಹಾಜರಾದರೆ, ವಿದ್ಯುನ್ಮಾನ ಮಾಧ್ಯಮಗಳಿಗೆ ವಿಶಿಷ್ಟಪೂರ್ಣ ಸುದ್ದಿಗಳನ್ನು ದೃಶ್ಯಗಳಲ್ಲಿ ಚೆಂದವಾಗಿ ಕಟ್ಟಿಕೊಡುವಲ್ಲಿ ಹೆಚ್ಚು ಆಸಕ್ತಿ. ಪುಸ್ತಕ ಮಳಿಗೆಗಳಲ್ಲಿ ವ್ಯಾಪಾರ ಮತ್ತು ಭೋಜನಶಾಲೆ- ಈ ಎರಡರ ವರದಿಯನ್ನು ಎರಡೂ ಮಾಧ್ಯಮಗಳು ಹೆಚ್ಚು ಹೆಚ್ಚಾಗಿ ಕೊಟ್ಟವು. ಕೆಲವು ಪತ್ರಿಕೆಗಳು ಹೆಚ್ಚಿನ ಸಂಖ್ಯೆಯ ವರದಿಗಾರರನ್ನು ನಿಯೋಜಿಸಿ, ಸಾಹಿತ್ಯ ಸಮ್ಮೇಳನದ ಯಾವುದೇ ಸುದ್ದಿ ಕೈತಪ್ಪದಂತೆ ನೋಡಿಕೊಂಡವು.
ಅಡ್ಜಸ್ಟ್: ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿರುವ ವರದಿಗಾರರು ಊಟೋಪಚಾರಕ್ಕೆ ಹೊಂದಿಕೊಂಡಿದ್ದಾರೆ. ವಸತಿಗೆ ನೀಡಲಾದ ಲಾಡ್ಜ್‌ಗಳಲ್ಲಿ ಸೊಳ್ಳೆಕಾಟ, ನೀರಿನ ಕೊರತೆ ಇದ್ದರೂ `ಮೂರ್ ದಿನ ತಾನೇ..? ಅಡ್ಜಸ್ಟ್ ಮಾಡ್ಕೊಂಡ್ರಾಯ್ತ ಬಿಡಿ` ಎಂದು ಸುಮ್ಮನಾಗಿದ್ದಾರೆ. ಬೆಳಿಗ್ಗೆ ಸ್ನಾನ ಇತ್ಯಾದಿ ನಿತ್ಯಕರ್ಮ ಮುಗಿಸಿ ಸಿದ್ಧವಾಗಿ ಸಮ್ಮೇಳನಕ್ಕೆ ಹೊರಟರೆ, ವಾಪಸು ಬರುವುದು ರಾತ್ರಿಯೇ. ಹೀಗಾಗಿ ವಸತಿ ವ್ಯವಸ್ಥೆ ಬಗ್ಗೆ ಯಾರೂ ಅಷ್ಟಾಗಿ ದೂರಲಿಲ್ಲ.
ನೀವಾ..?: ಎಲ್ಲೋ ನೋಡಿದ ಸ್ನೇಹಿತರು ದಿಢೀರ್ ಎಂದು ಪ್ರತ್ಯಕ್ಷರಾಗುವುದು, ಮುಖತಃ ನೋಡದೇ ಬರೀ ಫೋನಿನಲ್ಲೇ ತಾಸುಗಟ್ಟಲೇ ಹರಟೆ ಹೊಡೆದವರು ಮುಖಾಮುಖಿಯಾಗುವುದು ಮೀಡಿಯಾ ಸೆಂಟರ್‌ನ ಇನ್ನೊಂದು ವೈಶಿಷ್ಟ್ಯ. `ಮುಧೋಳ್ ಸಮ್ಮೇಳನದಾಗ ಸಿಕ್ಕಿದ್ದು ಬಿಟ್ರ ಮತ್ತ ಇಲ್ಲೇ ನೋಡ್ರಿ ನಿಮ್ಮನ್ನ ನೋಡಿದ್ದು` ಎಂದೋ `ಓಹ್… ನಿಮ್ ಹೆಸರು ಕೇಳಿದ್ದೆ. ಅಲ್ಲಲ್ಲ ಓದಿದ್ದೆ… ನೋಡಿರಲಿಲ್ಲ. ನೈಸ್ ಟು ಮೀಟ್ ಯೂ` ಎಂದೋ ಹೇಳುತ್ತ ವೃತ್ತಿ ಸ್ನೇಹಿತರ ಜತೆ ಕುಶಲೋಪರಿ ನಡೆಸುವ ದೃಶ್ಯಗಳೂ ಸಾಮಾನ್ಯವಾಗಿವೆ
ಪತ್ರಿಕಾರಂಗದ ಹಿರಿಯರೂ, ವಿವಿಧ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರೂ ಒಂದೇ ತಾಣದಲ್ಲಿ ಸೇರಿದ್ದು ಉದಯೋನ್ಮುಖ ಹಾಗೂ ಕಿರಿಯ ಪತ್ರಕರ್ತರಿಗೆ ಖುಷಿ ಕೊಟ್ಟಿತು. ಎಲ್ಲರನ್ನೂ ಭೇಟಿ ಮಾಡಿ, ಮಾತಾಡಿಸಲು ಸಮ್ಮೇಳನ ಒಳ್ಳೆಯ ಅವಕಾಶ ಕಲ್ಪಿಸಿದೆ ಎಂದು ಪತ್ರಕರ್ತರೊಬ್ಬರ ಅಭಿಮತ ವ್ಯಕ್ತಪಡಿಸಿದರು. ಪರಿಚಯದ ಪತ್ರಕರ್ತರನ್ನು ಭೇಟಿ ಮಾಡಲು ಮೀಡಿಯಾ ಸೆಂಟರ್‌ಗೆ ಬರುತ್ತಿದ್ದ ಸಾಹಿತಿಗಳು, ಇತರ ಪತ್ರಕರ್ತರಿಗೆ ಕೊರತೆಯೇನೂ ಇರಲಿಲ್ಲ.
ಊಟದ ವ್ಯವಸ್ಥೆ: ಸಮ್ಮೇಳನದ ಮೂರೂ ದಿನಗಳಲ್ಲಿ ಮೀಡಿಯಾ ಸೆಂಟರ್‌ನ ಪಕ್ಕದಲ್ಲೇ ಪ್ರತ್ಯೇಕ ಕೌಂಟರ್‌ನಲ್ಲಿ ಪತ್ರಕರ್ತರಿಗೆ ಊಟ- ಉಪಾಹಾರ ವಿತರಿಸಲಾಯಿತು. ಇದಕ್ಕಾಗಿಯೇ ನಿಯೋಜನೆಗೊಂದಿದ್ದ ಸ್ವಯಂಸೇವಕರು, ನಗುಮೊಗದೊಂದಿಗೆ ರುಚಿಕಟ್ಟಾಗ ಊಟ ಬಡಿಸಿದರು. ಬಾಟಲಿ ಹಾಗೂ ಪ್ಯಾಕೆಟ್‌ಗಳಲ್ಲಿ ಕುಡಿಯುವ ನೀರಿನ ಪೂರೈಕೆ ಅಬಾಧಿತವಾಗಿ ಸಾಗಿತ್ತು
ಭಾಗವಹಿಸಿದ  ಒಟ್ಟು ಪತ್ರಕರ್ತರು 311

ವಾರ್ತಾಇಲಾಖೆಯ ಸಿಬ್ಬಂದಿ  9

ಮೀಡಿಯಾ ಸೆಂಟರ್ ಉಸ್ತುವಾರಿಗಳು 10

ಟಿವಿ ಚಾನಲ್ ಗಳು
ಸಮಯ ಟಿವಿ               16 + ಓಬಿ
 ಈ ಟಿವಿ                      9
ಉದಯ ಟಿವಿ               9  +ಓಬಿ
ಟಿವಿ 9                       10  +ಓಬಿ
ಸುವರ್ಣ ನ್ಯೂಸ್         12 + ಓಬಿ
ಜನಶ್ರೀ                     11 +ಓಬಿ
ಕಸ್ತೂರಿ                     10
ಡಿಡಿ                         10
ಗಂಗಾವತಿ ಲೋಕಲ್ ಚಾನಲ್ಸ್ 12


ಪತ್ರಿಕೆಗಳು            ಪತ್ರಕರ್ತರು

ಪ್ರಜಾವಾಣಿ                    15
ಕನ್ನಡಪ್ರಭ                     14
ವಿಜಯಕರ್ನಾಟಕ           15
ಸಂಯುಕ್ತ ಕರ್ನಾಟಕ       10
ಉದಯವಾಣಿ                 9
ಹಿಂದು                           3
ಡೆಕ್ಕನ್ ಕ್ರೋನಿಕಲ್         2
ಹೊಸ ದಿಗಂತ                7
ಈ ನಮ್ಮ ಕನ್ನಡ ನಾಡು   4
ರಾಯಚೂರ ವಾಣಿ          5
ನಾಗರಿಕ                       5
ನಾಡು ನುಡಿ                  7
ಗಂಗಾವತಿ ವಾಯ್ಸ್        4
ಪ್ರಜಾಪ್ರಪಂಚ               8
ಸಮರ್ಥವಾಣಿ               9
ಸುವರ್ಣಗಿರಿ                 4
ಲೋಕದರ್ಶನ             10
ಸುದಿನ                        1
ಜನಕೂಗು                    3
ನವೋದಯ                 4
ಸುದ್ದಿಮೂಲ                 9
ಕೋಟೆ ಕರ್ನಾಟಕ         1
ಅನ್ಮೋಲ್ ಟೈಮ್ಸ್       8
ಆಕಾಶವಾಣಿ                6
ಈ ನಾಡು                   2
ಸಾಕ್ಷಿ                         2
ಇಂಡಿಯನ್ ಎಕ್ಸ್ ಪ್ರೆಸ್ 3

ಈಶಾನ್ಯ ಟೈಮ್ಸ್                   2
ಆಂದ್ರ ಜ್ಯೋತಿ                      1
ಸಂಜೆವಾಣಿ                           4
ಮೈಸೂರು ಮಿತ್ರ                    2
ಡೆಕ್ಕನ್ ಹೆರಾಲ್ಡ್                     1
ಸಂಜೆ ದರ್ಪಣ                        1
ಕರ್ನಾಟಕ ಪೋಲೀಸ್             1
ಹಿಂದೂಸ್ಥಾನ ಸಮಾಚಾರ್      1
ವಾರ್ತಾಭಾರತಿ                    1
ಸುದ್ದಿ ಸಿಂಚನ                       2
ಇಂದು ಸಂಜೆ                       2
ಕೆಪಿಎನ್                             1
ಸುವರ್ಣಟೈಮ್ಸ್ ಕರ್ನಾಟಕ    2
ಸಿಂದೂರ ಬಿಂಬ                   1
ಭವ್ಯ ಸಂದೇಶ                     1
ಪಾಂಡವ                            6
ಪ್ರಕೃತಿ ಬಯಲು                   3
ಪ್ರಜಾನುಡಿ                          3
ಕನ್ನಡ ಮಿತ್ರ                        4
ಕನ್ನಡನೆಟ್                         2


3 ಜೆರಾಕ್ಸ್
2 ಫ್ಯಾಕ್ಸ್
50 ಕಂಪ್ಯೂಟರ್
ಮಾಡೆಮ್ , ವೈ ಫೈ
Please follow and like us:
error