ವಿದಾಯದ ಮಾತುಗಳಿಂದ ಭಕ್ತರು ದಿಗ್ಬ್ರಮೆಯಲ್ಲಿ !

ನಿನ್ನೆ ರಾತ್ರಿ ಮದ್ದು ಸುಡುವುದಕ್ಕಿಂತ ಮೊದಲು ಆಶೀರ್ವಚನ ನೀಡಿದ ಶ್ರೀ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ವಿದಾಯದ ಬಗ್ಗೆ  ಮಾತನಾಡಿದ್ದು ಭಕ್ತರಲ್ಲಿ ಕೋಲಾಹಲವೆಬ್ಬಿಸಿದೆ. ಕೆಲ ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಬೆನ್ನುಹುರಿಗೆ ಹೊಡೆತ ಬಿದ್ದಿರುವುದರಿಂದ ತಮ್ಮಿಂದ ಮಠಕ್ಕೆ, ಭಕ್ತರಿಗೆ ಸೂಕ್ತವಾಗಿ ಸ್ಪಂದಿಸುವದಕ್ಕಾಗುತ್ತಿಲ್ಲ. 
 ಆ ಕಾರಣಕ್ಕಾಗಿಯೇ ಮಠಕ್ಕೆ ಸ್ವಾಮಿಗಳನ್ನು ನೇಮಿಸೋಣ ಎಂದು ಅತೀ ನೋವಿನಲ್ಲಿ, ಅಳುತ್ತಲೇ ಹೇಳಿದ ಮಾತಿನಿಂದ ಭಕ್ತಸಮೂಹ ದಿಕ್ಕುತೋಚದಂತಾಗಿದೆ.  ಇಷ್ಟರಲ್ಲಿಯೇ ಭಕ್ತರೆಲ್ಲರ ಸಭೆ ಕರೆದು ನಿರ್ಣಯಿಸುವುದಾಗಿ ಹೇಳಿದ್ದು ನಗರದೆಲ್ಲೆಡೆ ಚರ್ಚೆಗೊಳಗಾಗಿದೆ.  
Please follow and like us:
error