You are here
Home > Koppal News > ನಗರ ವಂಚಿತ ಸಮುದಾಯಗಳ ಜಾಗೃತಿ

ನಗರ ವಂಚಿತ ಸಮುದಾಯಗಳ ಜಾಗೃತಿ

ದಿ ೧೩ರಂದು ನಗರದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಕೊಪ್ಪಳ ಸ್ಲಂ ಜನಜಾಗೃತಿ ವೇದಿಕೆಯಿಂದ ” ನಗರ ವಂಚಿತ ಸಮುದಾಯಗಳ ಜಾಗೃತಿಗಾಗಿ ಸಾಹಿತ್ಯ ಭವನದಿಂದ ಸಾರ್ವಜನಿಕ ಮೈದಾನವರೆಗೂ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ರಾಜ್ಯ ಜಾತಾದ ಬಗ್ಗೆ ಪ್ರಾಸ್ತಾವಿಕವಾಗಿ ರಾಜ್ಯ ಸಂಚಾಲಕರಾದ ಎ. ನರಶಿಂಹಮೂರ್ತಿ ಹಾಗೂ ಐಸಾಕ ಹರಳುಶೇಲ್ವ ಮಾತನಾಡಿದರು. ನಗರವನ್ನು ಸುಂದರವಾಗಿ ಮಾಡುತ್ತಿರುವುದು ನಗರದ ಚಲನೆಗಾಗಿ ದಿನನಿತ್ಯದ ತಮ್ಮ ಬದುಕನ್ನು ಸವಿಸುತ್ತಿರುವವರು ಕೊಳಗೇರಿಯ ನಿವಾಸಿಗಳು ಬದುಕನ್ನು ಹಸನಮಾಡಲು ಇಲ್ಲಿವರೆಗೂ ಯಾವುದೆ ಕ್ರಮಗಳಾಗಲಿ, ಕೆಲಸಗಳಾಗಲಿ ಆಗಿಲ್ಲ ಹಾಗಾದರೆ ನಾವು ಈ ದೇಶದ ಪ್ರಜೆಗಳಲ್ಲವೇ ನಮಗೆ ಈ ನಗರದ ಮೇಲೆ ನಮಗೂ ಹಕ್ಕಿದೆ ಎಂದು ಹೇಳಿದರು.
    ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತರೂ ಹೋರಾಟಗಾರರೂ ಆದ ಂIಖಿUಅ ಯ ಬಸವರಾಜ ಶೀಲವಂತರವರು ಕೊಪ್ಪಳ ನಗರದ ಮೂಲ ಸೌಕರ್ಯಕ್ಕೆ ಬಂದಿರುವಂತಹ ಹಣವನ್ನು ಕೊಪ್ಪಳದ ಪ್ರಭಾವಿ ರಾಜಕಾರಣಿಗಳು ಒಟ್ಟಾಗಿ ಕೊಳ್ಳೆ ಹೊಡೆಯುತ್ತಿದ್ದಾರೆ. ಇಲ್ಲಿನ ಜಿಲ್ಲಾದಿಕಾರಿಗಳಾಗಲಿ, ಆಯುಕ್ತರಿಗಾಗಲಿ ಇವರ ಬಗ್ಗೆ ಒಂಚೂರು ಪರಿವೆ ಇಲ್ಲ.  ಇವತ್ತಿನ ದಿನ ಸ್ಲಂ ಜನಾಂದೋಲ ಕರ್ನಾಟಕ ಸಂಘಟನೆ ವಂಚಿತ ಸಮುದಾಯಗಳನ್ನು ಜಾಗೃತಿ ಮೂಡಿಸುತ್ತಾ ಸಂಘಟಿಸುತ್ತಿದೆ. ಇವತ್ತು ರಾಜ್ಯಾದ್ಯಂತ ಜಾಥ ಮಾಡಿಕೊಂಡು ನಮ್ಮ ನಗರಕ್ಕೆ ಬಂದಿದೆ ಜಾಥಾ ಯಶಸ್ವಿಯಾಗಲಿ, ಕೊಳಗೇರಿಗಳು ಜಾಗೃತಿ ಪಡೆದುಕೊಂಡು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಎ. ನರಸಿಂಹಮೂರ್ತಿ ಅವರು ಮಾತನಾಡಿ ಕೊಳಗೇರಿ ಜನರೆಂದರೆ ವೋಟು ಬ್ಯಾಂಕುಗಳೆಂದು ಪರಿಗಣಿಸಿದ್ದಾರೆ. ಆದರೆ ನಾವು ಯಾವುದೇ ರಾಜಕೀಯ ಪಕ್ಷದ ಬಾಲಂಗೋಚಿಗಳಲ್ಲ. ವೋಟ ಬ್ಯಾಂಕ ಅಲ್ಲ ನಾವು ಒಂದು ರಾಜಕೀಯ ಶಕ್ತಿ ನಾವು ನಿರ್ಧರಿಸಿದವರು ಚುನಾವಣೆಗಳಲ್ಲಿ ಗೆದ್ದು ಬರುತ್ತಿದ್ದಾರೆ. ಆದರೆ ಇವರ್‍ಯಾರಿಗೂ ನಮ್ಮ ಕೂಗೂ ಕೇಳಿಸುತ್ತಿಲ್ಲ. ಹಾಗಾಗಿ ಬರುವ ಚುನಾವಣೆದಿನಗಳಲ್ಲಿ ಸ್ಲಂ ನಿವಾಸಿಗಳು  ಎಲ್ಲಾ ರಾಜಕೀಯದವರನ್ನು ಇಲ್ಲಿಯವರೆಗೆ, ನಮಗೇನು ಮಾಡಿದ್ದೀರಾ? ಎಂದು ಪ್ರಶ್ನಿಸಬೇಕಾಗಿದೆ. ನಮಗೆ ಯಾರು ನಿವೇಶನಗಳನ್ನು ಕೊಡುತ್ತಾರೋ ಅಂಥವರಿಗೆ ನಾವು ಮತಹಾಕಿ ಗೆಲ್ಲಿಸಬೇಕಿದೆ ಎಂದು ಹೇಳಿದರು.

Leave a Reply

Top