ಜಿಲ್ಲಾ ಕಸಾಪ ಸ್ಪಷ್ಠೀಕರಣ

ಕೊಪ್ಪಳ : ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಎಂ.ಎಸ್. ಸವದತ್ತಿಯವರ ಕನ್ನಡ ಸೇವೆಯನ್ನು ಪರಿಗಣಿಸಿ ವಿಜಾಪೂರದಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ೭೯ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸುವಂತೆ ವ್ಯವಸ್ಥೆ ಮಾಡಿತ್ತು ಎಂಬುದನ್ನು ಜ್ಞಾಪಿಸುತ್ತಾ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ.
ಸಾಹಿತಿಗಳಾಗಿ ಗುರುತಿಸಿಕೊಂಡವರನ್ನು  ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಾರೆ. ಎಂ.ಎಸ್.ಸವದತ್ತಿಯವರ ಯಾವ ಕೃತಿಗಳು ಇಲ್ಲಿಯವರೆಗೂ ಪ್ರಕಟಣೆಗೊಂಡಿರುವುದಿಲ್ಲ. ಹೀಗಾಗಿ ಅವರನ್ನು ಪರಿಗಣಿಸುವ ಇಲ್ಲವೆ ಕಡೆಗಣಿಸುವ ಪ್ರಶೆಯೆ ಉದ್ಭವಿಸುವುದಿಲ್ಲ. 
ಈಗ ಆಯ್ಕೆಯಾಗಿರುವ ಹೆಚ್.ಎಸ್.ಪಾಟೀಲ ಅವರು ೧೨ ಸ್ವತಂತ್ರ ಕೃತಿಗಳನ್ನು ಮತ್ತು ೮ ಸಂಪಾದಿತ ಕೃತಿಗಳನ್ನು ಹೊರತಂದಿದ್ದಾರೆ. ಇವರು ಎಂ.ಎಸ್. ಸವದತ್ತಿಯವರನ್ನು ತಮ್ಮ ಗುರುಗಳೆಂದು ಗೌರವದಿಂದ ಹೇಳಿಕೊಳ್ಳುತ್ತಾರೆ. ಇಂತವರನ್ನು ಜಿಲ್ಲಾ ಕಸಾಪ ತನ್ನ ಪದಾಧಿಕಾರಿಗಳ ಸಭೆಯಲ್ಲಿ ಸರ್ವಾನುಮತದಿಂದ ಕೊಪ್ಪಳ ಜಿಲ್ಲಾ ೬ ನೇ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿಕೊಂಡಿದೆ. 
ಹಿಂದಿನ ಸಾಹಿತ್ಯ ಸಮ್ಮೆಳನದ ಸಂದರ್ಭದಲ್ಲಿ ಹಿರಿಯರಿದ್ದು ಕಿರಿಯರನ್ನು ಸಮ್ಮೇಳನದ ಅಧ್ಯಕ್ಷರೆಂದು ಆಯ್ಕೆ ಮಾಡಿದ ಸಂದರ್ಭದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹನಮಂತಪ್ಪ ಅಂಡಗಿ ಯಾಕೆ ಪ್ರಶ್ನಿಸಲಿಲ್ಲ. ಸಂಭಾವನಾ ಗ್ರಂಥಗಳಿಂದ ಭಾರಿ ಪ್ರಮಾಣದ ಸಂಭಾವನೆ ಪಡೆಯುತ್ತಿರುವ ಅಂಡಗಿಯವರು ಇಂತಹ ಉಸಾಬರಿಗೆ ಕೈಹಾಕದಿರಲಿ ಎಂದು ಜಿಲ್ಲಾ ಕಸಾಪ ಅಧ್ಯಕ್ಷರಾದ ವೀರಣ್ಣ ನಿಂಗೋಜಿ  ತಿಳಿಸಿದ್ದಾರೆ.
Please follow and like us:
error