ಸ್ಥಿರ ಸುಭದ್ರ ಸರ್ಕಾರಕ್ಕೆ ಕಾಂಗ್ರೆಸ್‌ಗೆ ಬೆಂಬಲಿಸಿ – ಹೆಚ್.ಆರ್.ಶ್ರೀನಾಥ

ಕೊಪ್ಪಳ : ಕಳೆದ ಐದು ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳನ್ನು ಕಂಡ ಅತ್ಯಂತ ಭ್ರಷ್ಟ ಕೊಟಿ ಹಣ ಲೂಟಿ ಮಾಡಿದ ಅಧಿಕಾರಕ್ಕಾಗಿ ಕಿತ್ತಾಟನಡಿಸಿ ಒಳಜಗಳ ಗುಂಪುಗಾರಿಕೆ ಮಾಡಿದ ಯಾವದೆ ಜನಪರ ಕಾಳಜಿ ಇಲ್ಲದ ಜನಪರ ಹೀತ ಕಾಪಾಡದ ಸೋಷಿತ ವರ್ಗಗಳ ಹೀತ ಕಾಪಾಡದ ಕೋಮುವಾದಿ ಭ್ರಷ್ಟ ಬಿ.ಜೆ.ಪಿ ಸರಕಾರವನ್ನು ಬೇರು ಸಹಿತ ಕಿತ್ತ್ಯೂಗುವ ಕಾಲ ಕುಡಿಬಂದಿದೆ ಹಾಗೂ ಕೇವಲ ನಾಲ್ಕೈದು ಜಿಲ್ಲೆಗಳಲ್ಲಿ ಮಾತ್ರ ಸಿಮಿತ ವಾಗಿರುವ ಜೆ.ಡಿ.ಎಸ್ ವರ್ಷವನ್ನು ಅಧಿಕಾರದಿಂದ ದೂರ ಇಡುವುದು ಲೇಸು ಎಂದು ಅವರು ಸ್ಥಿರ, ಸುಭದ್ರ ಸರಕಾರಕ್ಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸ ಬೇಕು ಹಾಗೂ ನನ್ನ ತಂದೆಯವರಾದ   ಹೆಚ್.ಜಿ.ರಾಮುಲು ಅವರು ನಾಲ್ಕು ಬಾರಿ ಸಂಸಧರಾಗಿ ಈ ಕ್ಷೇತ್ರದಲ್ಲಿ ಸಾಕ್ಷಟು ಜನಪರ ಕೇಲಸಮಾಡಿದ್ದಾರೆ. ಅವರ ಮಾರ್ಗದರ್ಶನದಂತೆ ನಡೆಯುತ್ತಿರುವ ನಾನು ಈಗ ಈ ಕ್ಷೇತ್ರದ ಜನತೆಯ ಸೇವೆ ಸಲ್ಲಿಸುವ ಅವಕಾಶ ಬಂದಿದ್ದು ಮತದಾರರು ಆಶೀರ್ವಾದಿಸಬೆಕೆಂದು ಗಂಗಾವತಿ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಹೆಚ್.ಆರ್.ಶ್ರೀನಾಥ ಅವರು ಕಿನ್ನಾಳ ಮುದ್ಲಾಪೂರ, ಬುಡಶಟ್ನಾಳ್, ತಾಳಕನಕಾಪೂರ ಕಾಮನೂರ, ಬುದಗುಂಪಾ, ಗ್ರಾಮಗಳಲ್ಲಿ ಶುಕ್ರವಾರ ಪ್ರಚಾರ ಸಭೆ ನಡೆಸಿ ಮಾತನಾಡಿದರು.
 ಈ ಸಂದರ್ಭದಲ್ಲಿ ಅವರ ಜೊತೆ ಹಿರಿಯರಾದ ಶ್ರೀ ರುದ್ರಮುನಿ ಗಾಳಿ, ಕರಿಯಣ್ಣ ಸಂಗಟಿ, ಅರ್ಜುನಸಾ ಕಾಟವಾ, ಶಂಕ್ರಪ್ಪ, ಟಿ.ಜನಾರ್ಧನ್, ಪ್ರಸನ್ನಗಡಾದ ಅಮರೇಶ ಉಪಲಾಪೂರ, ವಿರಭದ್ರಪ್ಪಾ.ಗ.ಜಿ ಬಿ.ವೀರಪಾಕ್ಷಪ್ಪ ಅಂಬರಿಶ ಹೊಸಮನಿ, ಅನಸಮ್ಮ ವಾಲ್ಮಿಕಿ, ಇಂದಿರಾ ಭಾವಿಕಟ್ಟಿ, ಸಾಕಷ್ಟುಕಾರ್ಯಕರ್ತರು ಉಪಸ್ಥಿತರಿದ್ದರು.   

Related posts

Leave a Comment