fbpx

ಮನುಷ್ಯನಾಗಿರುವದಕ್ಕೆ ಹೆಮ್ಮ ಪಡುವ ದಿನ ಬರಲಿ…

 • Anilkumar Ogennavar ಹೀಗೊಂದು ಪ್ರತಿಕ್ರಿಯೆ ..
  ———————— 
  ಕೈಗೊಂದು ಆಳು 
  ಕಾಲಿಗೊಂದು ಆಳು 
  ಇವರ ತೋಟಕ್ಕೊಂದಿಷ್ಟು 
  ಇವರ ಉಟಕ್ಕೊಂದಾಳು 
  ಎಲ್ಲದಕ್ಕೂ ಆಳನ್ನು ಅವಲಂಬಿಸಿ 
  ಹೇಸಿಗೆಯ ತೊಪ್ಪೆಯಾಗಿದ್ದಾರೆ 
  ಈ ಮೈಗಳ್ಳರು 
  ಬಡವರ ಅಕ್ಕಿಯ ಬಗ್ಗೆ ,ಬಡವರ ಬಗ್ಗೆ 
  ಕೀಳಾಗಿ ಮಾತಾಡುತ್ತಾರಲ್ಲ 
  ಇವರು ಹೊಟ್ಟೆಗೆ ತಿನ್ನುವದು ಅನ್ನವನಲ್ಲ 
  ಮತ್ತಿನ್ನೇನೋ 
  ಸಿದ್ದರಾಮಣ್ಣ ………
  7 hours ago · Unlike · 4
 • Santosh Jantli ಎಲುವಿನೀ ಕಾಯಕ್ಕೆ| ಸಲೆ ಚರ್ಮದ ಹೊದಿಕೆ|
  ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ|
  ಕುಲವಾವುದಯ್ಯ ಸರ್ವಜ್ಞ||
  6 hours ago · Like · 1
 • Puttu Raj ಬಡವರಿಗೆ ಕೇವಲ ಅನ್ನ ಕೂಟ್ಟರೆ ಉದ್ದಾರವಾಗಿ ಬಿಡೊಲ್ಲ, ಅವರ ಮುಂದಿನ ತಲೆಮಾರೂ ಭಿಕ್ಷಾ ಪಾತ್ರೆ ಹಿಡಿದು ನಿಲ್ಲಬೇಕಾಗುತ್ತದೆ. ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಬದುಕುವುದನ್ನು ಕಲಿಸಿ.
 • Puttu Raj ಅನಿಲಕುಮಾರರವರೆ ನಿಮ್ಮ ಸಿದ್ದರಾಮಣ್ಣನವರಿಗೆ ಹೇಳಿ, ಕೇವಲ ಮತದ ಆಸೆಗಾಗಿ ಕ್ಷುಲ್ಲಕ ಯೋಜನೆಗಳನ್ನು ಜಾರಿಗೆ ತರಬೇಡಿ ಎಂದು.
 • Sujatha Kumta anna halisabaradendu amma neerinalli anna nenasidutiddalu yakendre matte annakke akki iralilla adanne hidi neeru majjigeyalli kalsi gabagabane tindiddu indu nenapide. kareyadavara maduve maneyalli kandavara kannu kempagisi ootamadi kotta raveondeyanna sanje neeruchajote tinda sukha anubhavisidavarige gottu.
  2 hours ago · Like · 3
 • Anand Ramanna @Puttu Raj.. melina maathugalu nimage ne… Dodda Dodda lootikoraru laksha laksha koti dochutiruvaga badavara annada mele yaake nimma kannu…. Manusyaragi…
 • Sharath Chakravarthi · 71 mutual friends

  “ಸ್ವಾವಲಂಭಿಯಾಗೊದನ್ನ ಹೇಳಿಕೊಡಲಿ”. ಈ ಮಾತನ್ನ ಕಳೆದ ಕೆಲುವು ದಿನಗಳಿಂದ ಕೇಳಿ ಕೇಳಿ ಸಾಕಾಗಿ ಹೋಯಿತು. ತಾಳ್ಮೆ ಇಂದಲೆ ಕಾಯುತ್ತಿದ್ದೇನೆ. ಯಾರಾದರು ಅದು ಹೇಗೆ ಸ್ವಾವಲಂಭಿಗಳನ್ನ ಸೃಷ್ಟಿ ಮಾಡಬೇಕೆಂದು ಹೇಳುತ್ತಾರೆ ಎಂದು. 
  ಗ್ಯಾಸ್, ವಿದ್ಯುತ್, ಕುಡಿಯುವ ನೀರು, ಎಲ್ಲದರ ಮೇಲೂ ಸಬ್ಸಿಡಿ ಕೊಡಲಾಗುತ್ತಿದೆ. ಇದನ್ನು ನಿಲ್ಲಿಸಿದರೆ ದುಡಿದು ಕಟ್ಟೆ ಹಾಕುತ್ತಿರುವ ನಮ್ಮ ಸ್ವಾವಲಂಭಿ ಉಪದೇಶಕರು ಇನ್ನು ಹೆಚ್ಚಿನ ಶ್ರಮ ಜೀವಿಗಳಾಗಬಹುದೇನೊ…
 • Anand Ramanna ಊಟ ಕೊಟ್ಟರೆ ಹಂಗಿಸುವ ಮಟ್ಟ ತಲುಪಿದ್ದೇವೆ. ಕ್ರೌರ್ಯಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ?
  57 minutes ago · Like · 2
 • ಸಿದ್ದರಾಜು ವಳಗೆರೆಹಳ್ಳಿ ಬೋರೇಗವ್ಡ · 31 mutual friends

  ನನಗೆ ಈ ಜಾತಿವಾದಿ ಗಬ್ಬುಗಳಿಂದ ಸಾವಿನ ಬೆದರಿಕೆಯೂ ಬಂದಿದೆ. ಎರಡು ಬಾರಿ! ನಮ್ ದೇಶ ಇಂತಾ ಅನಾಗರೀಕ ಕಟುಕರಿಂದಲೇ ತುಂಬಿಹೋಗಿದೆ. ಕಂಪ್ಯೂಟರು ಬಳಸೋಕೆ ಬರೋರಲ್ಲಿ, ಓದಿದವರಲ್ಲಿ, ಮದ್ಯಮ ವರ್ಗದವರಲ್ಲಿ ಈ ರೀತಿ ಎಳಸಾಗಿ-ಹೊಲಸಾಗಿ ಆಡೋರು ಇನ್ಯಾವ ದೇಶದಲ್ಲೂ ಕಾಣುವುದಿಲ್ಲ. ಇವರುಗಳಿಗೆ ಮುಟ್ಟಾಳುತನ, ದುರಬಿಮಾನ ನೆತ್ತಿಗೇರಿದೆ. ಯಾವ ಹೊಸ ತಿಳುವಳಿಕೆಯೂ ಇವರ ರೋಗವನ್ನು ವಾಸಿ ಮಾಡಲಾರದೇನೋ. ಇವರು ಮನುಸ್ಯರಾಗೋದನ್ನ ಕಾದುನೋಡೋಣ.
 • Gladson Almeida · 8 mutual friends

  ಇಲ್ಲದವರಿಗೆ ತುತ್ತು ಅನ್ನ ಕೊಡಲು ಉಳ್ಳವರ ತನು, ಮನ, ಧನ ಎಲ್ಲವೂ ಹಿಂದೇಟು ಹಾಕುತ್ತದೆ. ಆದರೆ ಇದೇ ಕೆಲಸವನ್ನು ಸರಕಾರ ಮಾಡಿದರೆ, ಉಳ್ಳವರಿಗೆ ಕಣ್ಣುರಿ. ತುತ್ತು ಅನ್ನ ಕೊಡೊದ್ಕಿಂತ ಬಡವರನ್ನು ‘ಸ್ವಾವಲಂಬಿ’ಗಳಾಗಿ ಮಾಡಬೇಕಂತೆ… ಇರಲಿ ಸರಕಾರ ಗ್ಯಾಸ್, ವಿದ್ಯುತ್, ಪೆಟ್ರೋಲ್, ಡಿಸೇಲ್, ಕುಡಿಯುವ ನೀರಿನ ಸಬ್ಸಿಡಿ ನಿಲ್ಲಿಸಿ ಇವರನ್ನು ಸರಕಾರದ ಮೇಲೆ ಅವಲಂಬಿಗಳಾಗಿರಬೇಡಿ, ಬದಲಾಗಿ ಸ್ವಾವಲಂಬಿಗಳಾಗಿ ಎಂದಾಗ ದುಡಿದು ದುಡಿದು ಕಟ್ಟೆ ಹಾಕುತ್ತಿರುವ ನಮ್ಮ ‘ಸ್ವಾವಲಂಬಿ ಉಪದೇಶಕರು’ಏನ್ ಹೇಳ್ತಾರೊ ಅಂಥಾ ನೋಡಬೇಕು. ಮನೆಯಲ್ಲಿ ಗ್ಯಾಸ್ ಇದ್ದರೂ, ಪಕ್ಕದ ಮನೆಯವರ ಪಡಿತರ ಚೀಟಿ ಪಡ್ಕೊಂದು ಸೀಮೆ ಎಣ್ಣೆ ತಂದು ಉಪಯೋಗಿಸುವ ಇವರು ಸ್ವಾವಲಂಬಿಗಳು. ಅದೇ ಪಕ್ಕದ ಮನೆಯ ಪಡಿತರ ಚೀಟಿ ಪಡ್ಕೊಂದು ನ್ಯಾಯಬೆಲೆ ಅಂಗಡಿಯಿಂದ ಗೋಧಿ ತಂದು ಇವರ ಕೋಳಿಗಳನ್ನು ಸಾಕುವ ಈ ಮಂದಿ ಸ್ವಾವಲಂಬಿಗಳು. ಅಯ್ಯೊ ಸರಕಾರ ನ್ಯಾಯಬೆಲೆಯಲ್ಲಿ ವಿತರಿಸುವ ಅಕ್ಕಿ ಕೀಳು ಎಂದು ‘kitty party’ಗಳಲ್ಲಿ ತೆಗಳುವ ಜನ, ಅದೇ ‘ಸ್ಟೊರ್ ಅಕ್ಕಿಯನ್ನು’ ಇನ್ಯಾರದೋ ರೇಷನ್ ಕಾರ್ಡ್ ಉಪಯೋಗಿಸಿ ಮನೆಗೆ ತಂದು ಅದರಿಂದ ಇಡ್ಲಿ, ದೋಸೆ ಮಾಡಿ ತಿನ್ನುವ ಈ ಮಂದಿ ಸ್ವಾವಲಂಬಿಗಳು…ತುತ್ತು ಅನ್ನ ಕೊಟ್ಟವರನ್ನು ಹಂಗಿಸುವ ಮಟ್ಟಕ್ಕೆ ಇಳಿದ್ದಿದ್ದೇವೆ. ಇದಕ್ಕಿಂತ ಮಿಗಿಲಾದ ಅನಾಗರಿಕತೆ, ಕ್ರೌರ್ಯ ಯಾವುದಿದೆ ಸ್ವಾಮಿ?
Please follow and like us:
error

Leave a Reply

error: Content is protected !!