ದಿಲ್ಲಿ ಗ್ಯಾಂಗ್ ರೇಪ್: ನಾಲ್ವರೂ ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ

 ಕಳೆದ ಡಿಸೆಂಬರ್ 16ರಂದು ದಿಲ್ಲಿಯಲ್ಲಿ 23 ವರ್ಷದ ಅರೆವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಸಾವಿಗೆ ಕಾರಣರಾದ ನಾಲ್ಕೂ ಮಂದಿ ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ದಿಲ್ಲಿಯ ಸಾಕೇತ್ ನ್ಯಾಯಾಲಯವು ಇಂದು ಅಪರಾಹ್ನ 2:30ಕ್ಕೆ ತೀರ್ಪು ನೀಡಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಈ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳಾದ ಮುಖೇಶ್ ಸಿಂಗ್, ಅಕ್ಷಯ್ ಸಿಂಗ್, ವಿನಯ್ ಶರ್ಮ ಹಾಗೂ ಪವನ್ ಗುಪ್ತ ವಿರುದ್ಧದ ಅಪರಾಧವನ್ನು ಸಾಕೇತ್ ನ್ಯಾಯಾಲಯವು ಮಂಗಳವಾರ ದೃಢೀಕರಿಸಿತ್ತು.
ಈ ಎಲ್ಲ ಅಪರಾಧಿಗಳ ವಿರುದ್ಧ ಅತ್ಯಾಚಾರ, ಕೊಲೆ, ಅಪಹರಣ ಮತ್ತು ಸಾಕ್ಷ ನಾಶ ಸೇರಿದಂತೆ 14 ಪ್ರಕರಣಗಳು ದಾಖಲಾಗಿದ್ದವು, ಎಲ್ಲಾ ಪ್ರಕರಣಗಳಲ್ಲೂ ಈ ನಾಲ್ವರ ಆರೋಪ ಸಾಬೀತಾಗಿತ್ತು. ಅಪರಾಧಿಗಳಿಗೆ ಸಾಕೇತ್ ನ್ಯಾಯಾಲಯವು ಇಂದು ಅಪರಾಹ್ನ 2:30ಕ್ಕೆ ಮರಣ ಶಿಕ್ಷೆಯ ವಿಧಿ ಪ್ರಕಟಿಸಿದೆ. ಪ್ರಕರಣದ ಇನ್ನೋರ್ವ ಆರೋಪಿ ತಿಹಾರ್ ಜೈಲ್‌ನಲ್ಲಿ ಈ ಹಿಂದೇ ಆತ್ಮಹತ್ಯೆ ಮಾಡಿಕೊಂಡಿದ್ದನು.
Please follow and like us:
error