ತತ್ವಪದ ಕಲಾವಿದ ರಾಮಣ್ಣ ಅವಣ್ಣಿ ಮಾದಿನೂರುಗೆ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ.

ಕೊಪ್ಪಳ,ಜ.೧೧ ತಾಲೂಕಿನ ಇಟಗಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಇಟಗಿ ಉತ್ಸವದಲ್ಲಿ ಜಾನಪದ, ತತ್ವಪದ ಕಲಾವಿದ ರಾಮಣ್ಣ ತಂ. ಸಣ್ಣ ಮಲ್ಲಪ್ಪ ಅವಣ್ಣಿ ಸಾ: ಮಾದಿನೂರು ನೀಡಿದ ಕಾರ್ಯಕ್ರಮಕ್ಕೆ  ನೆರೆದ ಜನತೆಯನ್ನು ಮಂತ್ರಮುಗ್ದರನ್ನಾಗಿಸಿದರು. ಅವರಿಗೆ ಸಮಿತಿಯು ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ, ಇಟಗಿ ಉತ್ಸವದ ಸಾಂಸ್ಕೃತಿಕ ಸಮಿತಿ, ಪ್ರವಾಸೋಧ್ಯಮ ಇಲಾಖೆ ಕೊಪ್ಪಳ- ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ೩ ದಿನಗಳ ಇಟಗಿ ಉತ್ಸವದ ಕೊನೆಯ ದಿನವಾದ ಶನಿವಾರ ತತ್ವಪದ ಹಾಗೂ ಜನಪದ ಕಲಾವಿದ ರಾಮಣ್ಣಸಣ್ಣಮಲ್ಲಪ್ಪ ಅವಣ್ಣಿ ಮಾದಿನೂರು ಇವರಿಗೆ ಸಮಿತಿ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ ನೀಡಿ ಗೌರವಿಸಿತು.

Please follow and like us:
error