ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯ- ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ಸಭೆ

 ಹಳೆಯ ವಿದ್ಯಾರ್ಥಿಗಳ ಸಭೆ
 
ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ಸಭೆ ಜರುಗಿತು. ಸಭೆಯಲ್ಲಿ ಒಕ್ಕೂಟದ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದಿತು. ಒಕ್ಕೂಟದ ಗೌರವಾಧ್ಯಕ್ಷರಾಗಿ ಶ್ರೀ.ಮ.ನಿ.ಪ್ರ.ಜ. ಗವಿಸಿದ್ದೇಶ್ವರ ಸ್ವಾಮಿಗಳು, ಕಾರ್ಯಾಧ್ಯಕ್ಷರಾಗಿ ಪ್ರಾಚಾರ್ಯ ಎಸ್.ಎಲ್.ಮಾಲಿಪಾಟೀಲ,  ಅಧ್ಯಕ್ಷರಾಗಿ ಚಂದ್ರಶೇಖರೆ ಪಾಟೀಲ ಹಲಗೇರಿ, ಉಪಾಧ್ಯಕ್ಷರಾಗಿ ಉಮೇಶ ಚಕ್ಕಿ, ಕಾರ್ಯದರ್ಶಿಯಾಗಿ ಬಾಳಪ್ಪ ಬಾರಕೇರ, ಖಜಾಂಚಿಯಾಗಿ ಪ್ರೊ.ಎಸ್.ಬಿ.ಹಿರೇಮಠ ಅಲ್ಲದೇ ೧೨ ಜನ ಸದಸ್ಯರು ಆಯ್ಕೆಯಾದರು. ಈ ಸಭೆಯಲ್ಲಿ  ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಮಾತನಾಡಿ ಕಾಲೇಜಿನ ಸರ್ವಾಂಗಿಣ ಅಭಿವೃದ್ಧಿಗಾಗಿ ನಿಮ್ಮ ಜೊತೆ ನಾವೆಲ್ಲ ಶ್ರಮವಹಿಸುತ್ತೇವೆ ಎಂದರು. ಸಭೆಯ ಅಧ್ಯಕ್ಷತೆ ಪ್ರಾಚಾರ್ಯ ಎಸ್.ಎಲ್.ಮಾಲಿಪಾಟೀಲ ವಹಿಸಿ ಮಾತನಾಡಿ ನಮ್ಮ ಜೊತೆಗೆ  ಸದಾ ಸಂಪರ್ಕದಲ್ಲಿದ್ದೂಕೊಂಡು ತಮ್ಮ ಅಮುಲ್ಯ ಸೇವೆಯನ್ನು  ಕಾಲೇಜಿನ ಅಭಿವೃದ್ಧಿಗಾಗಿ ನೀಡಬೇಕೆಂದು ಕರೆ ನೀಡಿದರು. ಸ್ವಾಗತ ಪ್ರೊ.ಎಸ್.ಬಿ.ಹಿರೇಮಠ, ನಿರೂಪಣೆ ಪ್ರೊ.ಶರಣಬಸಪ್ಪ ನೆರವೇರಿಸಿದರು. 
Please follow and like us:
error