ಅತಿಥಿ ಉಪನ್ಯಾಸಕರಿಂದ ಮತ್ತೊಮ್ಮೆ ತರಗತಿ ಬಹಿಷರಿಸಿ ಅನಿರ್ದಿಷ್ಟಾವದಿವರೆಗೆ ಪ್ರತಿಭಟನಾ ಸಿದ್ದತೆ

ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಂದ ಮತ್ತೊಮ್ಮೆ ತರಗತಿ ಬಹಿಷರಿಸಿ ಅನಿರ್ದಿಷ್ಟಾವದಿವರೆಗೆ ಪ್ರತಿಭಟನಾ ಸಿದ್ದತೆ.
ಉನ್ನತ ಶಿಕ್ಷಣ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಏರಿಸಬೇಕೆಂದು ಕೇವಲ ವೇದಿಕೆಯ ಮೇಲೆ ಬಂದು ತಾಸಿಗಿಂತಲೂ ಹೆಚ್ಚು ಸಮಯ ಬಾಷಣ ಮಾಡಿದರೆ ಸಾಲದು. ಮಾನ್ಯ ಉನ್ನತ ಶಿಕ್ಷಣ ಸಚಿವರೇ ನೀವು ಸುಳ್ಳುಗಾರರು ಮತ್ತು ಕೇವಲ ಭರವಸೆ ನೀಡುವ ವ್ಯಕ್ತಿ. ನಿಮಗೆ ಉನ್ನತ ಶಿಕ್ಷಣದ ಬಗ್ಗೆ ಮತ್ತು ಸರಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದಿದ್ದೇಆದರೆ ಈ ಕೂಡಲೇ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿ ನಿಮ್ಮ ಮಾತನ್ನು ಮತ್ತು ಭರವಸೆಯನ್ನು ನಿಜವಾಗಿಸಿಕೊಳ್ಳಿ.
ಅತಿಥಿ ಉಪನ್ಯಾಸಕರು ಸಾಕಷ್ಟು ಬಾರಿ ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಾಗ ರಸ್ತೆ ಮಧ್ಯದಲ್ಲಿಯೇ ಮುಂಜಾನೆಯಿಂದ ಸಾಯಂಕಾಲದವರೆಗೂ ಬಿಸಿನಲ್ಲಿಯೇ ಕುಳಿತು ನೀರನ್ನು ಕುಡಿಯದೆ ಹಸಿವನ್ನು ತಡೆದುಕೊಂಡು ಕೆಲವು ಮಹಿಳೆಯರು ಮೂರ್ಛೆ ಹೋದರೂ ಕೂಡಾ, ಮತ್ತು ಕೆಲವರು ವಿಷ ಕುಡಿದು ಸಾವು ಬದುಕಿನ ನಡುವೆ ಹೋರಾಡುವ ಸ್ಥಿತಿಯಲ್ಲಿಯೂ ಅತಿಥಿ ಉಪನ್ಯಾಸಕರನ್ನು ಭೇಟಿಯಾಗಬೇಕೆಂಬ ಸಾಮನ್ಯ ಜ್ಞಾನ ಮತ್ತು ಸೌಜನ್ಯವೂ ಕೂಡಾ ಮುಖ್ಯಮಂತ್ರಿಗಳಿಗೂ ಮತ್ತು ಉನ್ನತ ಶಿಕ್ಷಣ ಸಚಿವರಿಗೂ ಇಲ್ಲ. ಇದನ್ನು ನೋಡಿದರೆ ನಿಮಗೆಷ್ಟು ಉನ್ನತ ಶಿಕ್ಷಣದ ಬಗ್ಗೆ ಮತ್ತು ಅತಿಥಿ ಉಪನ್ಯಾಸಕರ ಬಗ್ಗೆ ಕಾಳಜಿ ಇದೆ ಎಂಬುದು ಗೊತ್ತಾಗುತ್ತದೆ. 
ಅತಿಥಿ ಉಪನ್ಯಾಸಕರ ಸಮಸ್ಯೆಗಳು ಸಾಕಷ್ಟು ಇವೆ ಸೇವಾ ಭದ್ರತೆ ಒದಗಿಸುವುದು ಪ್ರತಿ ತಿಂಗಳು ವೇತನ ನೀಡುವುದು, ಖಾಯಂ ಮಾಡುವುದು, ಈಗಿರುವ ವೇತನವನ್ನು ೨೫,೦೦೦ ರೂಗಳಿಗೆ ಹೆಚ್ಚಿಸುವುದು, ಮುಂತಾದ ಬೇಡಿಕೆಗಳನ್ನು ಹೊತ್ತುಕೊಂಡು ರಾಜ್ಯ ಮಟ್ಟದಲ್ಲಿ ಹಲವಾರು ಬಾರಿ ಪ್ರತಿಭಟನೆ ಮಾಡಿದ್ದಾರೆ. ಇವತ್ತಿನವರೆಗೂ ಸರಕಾರ ಬೇಡಿಕೆಗಳನ್ನು ಈಡೇರಿಸುವಲ್ಲಿ ಮನಸ್ಸು ಮಾಡುತ್ತಿಲ್ಲ. ನೂತನ ಕಾಂಗ್ರೆಸ್ ಸರ್ಕಾರದ ಮೇಲೆ ಅತಿಥಿ ಉಪನ್ಯಾಸಕರೆಲ್ಲರೂ ಬೇಡಿಕೆ ಈಡೇರಿಕೆಯ ಭರವಸೆ ಇಟ್ಟಿದ್ದರು. ಆದರೆ ಈ ಕಾಂಗ್ರೆಸ್ ಸರಕಾರವು ಕೂಡಾ ಅತಿಥಿ ಉಪನ್ಯಾಸಕರಿಗೆ ಕೈಕೊಟ್ಟಿದೆ. 
ಜನೇವರಿ ೨೭, ೨೦೧೪ ರಿಂದ ಬೇಡಿಕೆಗಳ ಈಡೇರಿಕೆಗಾಗಿ ಅತಿಥಿ ಉಪನ್ಯಾಸಕರೆಲ್ಲರೂ ತರಗತಿ ಬಹಿಷರಿಸಿ ಅನಿರ್ದಿಷ್ಟಾವದಿವರೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ಈ ಸಮಯದಲ್ಲಿ ಆರ್.ವಿ.ದೇಶಪಾಂಡೆಯವರು ಈ ವರ್ಷದ ಬಜೆಟ್ ಮಂಡನೆ ಮಾಡುವ ಮೊದಲೇ ಅಂದರೆ ೧೪-೦೨-೨೦೧೪ ರ ಮೊದಲು ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲಾಗುತ್ತದೆ ಎಂಬ ಮಾತನ್ನು ಕೊಟ್ಟಿದ್ದರು. ಈ ಮಾತಿಗೆ ಬೆಲೆ ಕೊಟ್ಟು ಅನಿರ್ಧಿಷ್ಠಾವದಿಯ ಧರಣಿಯನ್ನು ಸ್ಥಗಿತಗೊಳಿಸಲಾಗಿತ್ತು. ಈವತ್ತಿನ ವರೆಗೂ ಉನ್ನತ ಶಿಕ್ಷಣ ಸಚಿವರು ತಮ್ಮ ಮಾತಿಗೆ ತಕ್ಕಂತೆ ನಡೆದುಕೊಂಡಿಲ್ಲ. ಕಾರಣ ನಮ್ಮ ಬೇಡಿಕೆಗಳು ಈಡೇರುವವರೆಗೂ ನಾವು ಪ್ರತಿಭಟನೆ ಮಾಡುತ್ತಲೇ ಇರುತ್ತೇವೆ. ಸರಕಾರದ ಪೊಳ್ಳು ಮತ್ತು ಸುಳ್ಳು ಭರವಸೆ ವಿರುದ್ದ ಮತ್ತೊಮ್ಮೆ ತರಗತಿ ಭಹಿಷರಿಸಿ ಅನಿರ್ದಿಷ್ಟಾವದಿವರೆಗೆ ಉಗ್ರ ಪ್ರತಿಭಟನೆ ಮಾಡಲು ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರು ಸಜ್ಜಾಗಿದ್ದಾರೆ. ಈ ಅವಧಿಯಲ್ಲಿ ಏನೇ ಅವಗಡಗಳು ಮತ್ತು ಅನಾಹುತಗಳು ಸಂಭವಿಸಿದರೆ ಸರಕಾರವೇ ನೇರವಾಗಿ ಹೊಣೆ ಯಾಗುತ್ತದೆ ಎಂದು ರಾಜ್ಯದ ಎಲ್ಲಾ ಅಥಿತಿ ಉಪನ್ಯಾಸಕರ ಪರವಾಗಿ ಕೊಪ್ಪಳ ಜಿಲ್ಲಾ ವ್ಯಾಪ್ತಿ ಹೈದ್ರಾಬಾದ್  ಕರ್ನಾಟಕ ಅತಿಥಿ ಉಪನ್ಯಾಸಕರ ಸಂಘದ ಸಹ ಕಾರ್ಯದರ್ಶಿಯಾದ ಬಸವರಾಜ ಹುಳಕಣ್ಣವರ ತಿಳಿಸಿದ್ದಾರೆ. 
Please follow and like us:
error