ಮಕ್ಕಳ ಹಕ್ಕುಗಳ ಗ್ರಾಮ ಸಭೆ

ಕೊಪ್ಪಳ : ತಾಲೂಕಿನ ಓಜನಹಳ್ಳಿ ಗ್ರಾಮ ಪಂಚಾಯತಿಯ ನರೆಗಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಿದ್ದು, ತಾಲೂಕ ಪಂಚಾಯತ ಸದಸ್ಯರಾದ ರಮೇಶ ಚೌಡಕಿಯವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. 
ಉದ್ಘಾಟನ ಬಾಷಣದಲ್ಲಿ ಸಮುದಾಯ ಮತ್ತು ಪಾಲಕರ ಜವಾಬ್ದಾರಿಯಿಂದ ಮಕ್ಕಳ ಹಕ್ಕುಗಳ ರಕ್ಷಣೆಯನ್ನು ಮಾಡಲಿಕ್ಕೆ ಎಲ್ಲರೂ ಒಂದಾಗಿ ಉತ್ತಮ ಶಿಕ್ಷಣವನ್ನು ಪಡೆದ ನಾಗರಿಕ ಸಮಾಜವನ್ನು ನಿರ್ಮಿಸಲು ಕರೆ ನೀಡಿದರು. 
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಮಕ್ಕಳ ರಕ್ಷಣ ಯೋಜನೆಯ ಆನಂದ ಎನ್ ಹಳ್ಳಿಗುಡಿ, ಮಕ್ಕಳ ಅಂಕಿ ಅಂಶ ಸಭೆಯ ಮೂಂದೆ ಪ್ರಸ್ತುತ ಪಡಿಸಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆಯಲ್ಲಿ ಗ್ರಾಮ ಪಂಚಾಯತಿ ಅವರ ಬೇಡಿಕೆಗಳಿಗೆ ಸ್ಪಂದಿಸಿ ಈಡೇರಿಸಿದರೆ ಮಕ್ಕಳ ಅಭಿವೃದ್ಧಿಯಿಂದ ಗ್ರಾಮದ ಅಭಿವೃದ್ದಿ ಸಾಧ್ಯ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಭಾಲ್ಯ ವಿವಾಹ, ಬಾಲಕಾರ್ಮಿಕತೆ, ಮುಂತಾದ ಅನಿಷ್ಠ ಪದ್ದತಿಗಳ ವಿರುದ್ದ ಗ್ರಾಮ ಮಟ್ಟದ ಮ್ಕಕಳ ಹಕ್ಕುಗಳ ರಕ್ಷಣಾ ಸಮಿತಿ ರಚನೆ ಮಾಡಿದ್ದು, ಜವಾಬ್ದಾರಿಯುತ ಅಧಿಕಾರಿಗಳು ಮಕ್ಕಳ ಹಕ್ಕುಗಳು ಉಲ್ಲಂಗನೆ ಆಗದಂತೆ ಕರ್ತವ್ಯ ನಿರ್ವಹಿಸಲು ಕರೆ ನೀಡಿದರು.
ಡಿಸಿಪಿಯು ನ ರವಿ ಬಡಿಗೇರ ಬಾಲ ನ್ಯಾಯ ಕಾಯ್ದೆ ಮತ್ತು ಐಸಿಪಿಎಸ್ ಕಾರ್ಯಕ್ರಮಗಳಬಗ್ಗೆ ವಿವರಿಸಿದರು. ಗ್ರಾ.ಪಂ ವ್ಯಾಪ್ತಿಯ ವಿವಿದ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಪ್ರಶ್ನೋತ್ತರ ಹಾಗೂ ಕುಂದು ಕೊರತೆಗಳ ಬಗ್ಗೆ ಚರ್ಚಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಸದಸ್ಯರಾದ ವೀರಪಾಕ್ಷಗೌಡ ರಾಮತಾಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನರೆಗಲ್ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ವೀರಣ್ಣ ಕೋನಸಾಗರ ಹಾಗೂ ಸರ್ವಸದ್ಯರು, ಮತ್ತು ಗ್ರಾ.ಪಂ ವ್ಯಾಪ್ತಿಯ ಶಾಲಾ ಮುಖ್ಯೋಪಾಧ್ಯಾಯರು, ಆಂಗನವಾಡಿ ಕಾರ್ಯಕರ್ತೆಯರು, ವಿಸ್ತಾರ ಸಂಸ್ಥೆಯ ಕಾರ್ಯಕರ್ತರು, ರುದ್ರಮುನಿಶ್ವರ ಯುವಕ ಸಂಘದ ಪದಾಧಿಕಾರಿಗಳು, ಪಂಚಾಯತ ಅಭಿವೃದ್ದಿ ಅಧಿಕಾರಿ ಆದಯ್ಯ ಹೇರೂರ, ಗ್ರಾ. ಪಂ ಸಿಬ್ಬಂದಿ ಉಪಸ್ಥಿತರಿದ್ದರು.
  ಗೋವಿಂದರಡ್ಡಿ ಕಾರ್ಯಕ್ರಮ ನಿರೂಪಿಸಿದರು. ಅಂದಾನಗೌಡ್ರ ಸ್ವಾಗತಿಸಿದರು. ಮುಖ್ಯೋಪಾದ್ಯಾಯರು ವಂದಿಸಿದರು. 

Leave a Reply