ಅನ್ಯ ಜಿಲ್ಲೆಯವರ ಹೈ-ಕ ಪ್ರಮಾಣಪತ್ರ ರದ್ದು : ಹಿಂದಿರುಗಿಸಲು ಸೂಚನೆ

ಅನ್ಯ ಜಿಲ್ಲೆಗಳಿಗೆ ಸೇರಿದ ಸರ್ಕಾರಿ ನೌಕರರು ಹತ್ತು ವರ್ಷಗಳ ಸೇವೆ ಆಧಾರದ ಮೇಲೆ ಪಡೆದುಕೊಂಡ ೩೭೧ (ಜೆ) ಅಡಿ ಪಡೆದುಕೊಂಡ ಪ್ರಮಾಣಪತ್ರಗಳನ್ನು ರದುಪಡಿಸಲಾಗಿದ್ದು, ಅಂತಹ ಪ್ರಮಾಣಪತ್ರಗಳನ್ನು ಉಪವಿಭಾಗಾಧಿಕಾರಿಗಳ ಕಚೇರಿಗೆ ಹಿಂದಿರುಗಿಸಬೇಕು ಎಂದು ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಸೂಚನೆ ನೀಡಿದ್ದಾರೆ.
  ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಅನ್ಯ ಜಿಲ್ಲೆಗಳಿಗೆ ಸೇರಿದ ಸರ್ಕಾರಿ ನೌಕರರು ದಿ: ೦೧-೦೧-೨೦೧೩ ಕ್ಕಿಂತ ಹಿಂದಿನ ೧೦ ವರ್ಷ ಹಾಗೂ ಅದಕ್ಕಿಂತ ಹೆಚ್ಚು ವರ್ಷಗಳಿಂದ ಈ ಭಾಗದಲ್ಲಿಯೇ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಹೈ-ಕ ವೃಂದ, ನೇಮಕ, ಮುಂಬಡ್ತಿ ಹಾಗೂ ವರ್ಗಾವಣೆ ಸೌಲಭ್ಯ ಪಡೆಯಲು ಹೈದ್ರಾಬಾದ್-ಕರ್ನಾಟಕ ಮೀಸಲಾತಿ ನಿಯಮಗಳ ೩೭೧ (ಜೆ) ಅಡಿ ಪಡೆದುಕೊಂಡ ಅರ್ಹತಾ ಪ್ರಮಾಣಪತ್ರಗಳನ್ನು ಹಿಂಪಡೆಯುವಂತೆ ಕಳೆದ ಜ. ೧೪ ರಂದು ಸರ್ಕಾರ ಹೊರಡಿಸಿದ ಆದೇಶದಲ್ಲಿ ಸೂಚನೆ ನೀಡಿದ್ದು, ಅಂತಹ ಪ್ರಮಾಣಪತ್ರಗಳನ್ನು ಈಗಾಗಲೆ ಉಪವಿಭಾಗಾಧಿಕಾರಿಗಳ ಕಚೇರಿಯಿಂದ ರದ್ದುಪಡಿಸಲಾಗಿದೆ.  ಇಂತಹ ಅರ್ಹತಾ ಪ್ರಮಾಣಪತ್ರಗಳನ್ನು ಪಡೆದಿರುವ ಸರ್ಕಾರಿ ನೌಕರರು ಕೂಡಲೆ ಅವುಗಳನ್ನು ಹಿಂದಿರುಗಿಸಬೇಕು.  ಒಂದು ವೇಳೆ ಹಿಂದಿರುಗಿಸದೆ, ಮೀಸಲಾತಿ ಸೌಲಭ್ಯಕ್ಕೆ ಬಳಸಿಕೊಳ್ಳಲು ಯತ್ನಿಸಿದಲ್ಲಿ, ಕಾನೂನು ಕ್ರಮಗಳಿಗೆ ಅವರೇ ಹೊಣೆಗಾರರಾಗುತ್ತಾರೆ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಅವರು  ತಿಳಿಸಿದ್ದಾರೆ.

Related posts

Leave a Comment