ನಾಳೆ ಬಸವ ಮಂಟಪದಲ್ಲಿ ಅಕ್ಕಮಹಾದೇವಿ,ಮತ್ತು ಹರಳಯ್ಯನವರ ಜಯಂತಿ ಕಾರ್ಯಕ್ರಮ

ಗಂಗಾವತಿ.೦೩- ನಗರದ ರಾಷ್ಟ್ರೀಯ ಬಸವದಳದವರಿಂದ ದಿ,೫ ರವಿವಾರ ಬೆಳಿಗ್ಗೆ ೧೧ಗಂಟೆಗೆ ಸರೋಜಾನಗರದಲ್ಲಿರುವ ಬಸವಂಟಪದಲ್ಲಿ ವೀರ ವಿರಾಗಿಣಿ ಅಕ್ಕಮಹಾದೇವಿಯವರ ಜಯಂತಿ ಮತ್ತು ನಿಜ ಶರಣ ಹರಳಯ್ಯನವರ ಜಯಂತಿ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿದೆ, ಎರಡು ಜಯಂತಿ ದಿ೪.೪.೨೦೧೫ಶನಿವಾರ ಬಂದಿರುವದರಿಂದ ನಾವುಗಳು ರವಿವಾರ, ೯೮೧ನೇ ಪ್ರಾರ್ಥನಾ  ಕಾರ್ಯಕ್ರಮ ಮುಗಿದ ನಂತರ   ವೀರ ವಿರಾಗಿಣಿ ಅಕ್ಕಮಹಾದೇವಿಯವರ ಜಯಂತಿ ಮತ್ತು ನಿಜ ಶರಣ ಹರಳಯ್ಯನವರ ಜಯಂತಿ ವೇದಿಕೆ  ಕಾರ್ಯಕ್ರಮ  ಜರುಗಲಿದೆ.ಎಂದು ರಾಷ್ಟ್ರೀಯ ಬಸವದಳದ ಅಧ್ಯಕ್ಷ .ಕೆ.ಪಂಪಣ್ಣ    ತಿಳಿಸಿದ್ದಾರೆ.

Leave a Reply