ಸಾರಥಿ ಚಿತ್ರದ ೫೦ ನೇ ದಿನದ ಸಂಭ್ರಮಾಚರಣೆ

ಕೊಪ್ಪಳ : ನಟ ದರ್ಶನ ಅಭಿನಯದ ಸಾರಥಿ ಚಿತ್ರವು ಕೊಪ್ಪಳದ ಸ್ಟಾರ್ ಚಲನಚಿತ್ರ ಮಂದಿರದಲ್ಲಿ ಶುಕ್ರವಾರ ೫೦ ನೇ ದಿನಕ್ಕೆ ಕಾಲಿರಿಸಿದ  ಪ್ರಯುಕ್ತ ಚಿತ್ರ ಮಂದಿರದಲ್ಲಿ  ವ್ಯವಸ್ಥಾಪಕರಾದ  ಎಂ.ಎಂ.ಕಿಲ್ಲೇದಾರ ಅವರನ್ನು ಕೊಪ್ಪಳದ ಹಿರಿಯ ಸಾಹಿತಿಗಳಾದ ಡಾ. ಮಹಾಂತೇಶ ಮಲ್ಲನಗೌಡರ, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ವಿರಕನ್ನಡಿಗ ಯುವಕ ಸಂಘದ ಅಧ್ಯಕ್ಷರಾದ ಶಿವಾನಂದ ಹೊದ್ಲೂರ ಸನ್ಮಾನಿಸಿದರು. 

ಕೊಪ್ಪಳದ ಹಿರಿಯ ಸಾಹಿತಿಗಳಾದ ಡಾ. ಮಹಾಂತೇಶ ಮಲ್ಲನಗೌಡರ ಈ ಸಂದರ್ಭದಲ್ಲಿ ಮಾತನಾಡಿ,  ಪರಭಾಷೆಯ ಹಾವಳಿಯಿಂದ ಕನ್ನಡದ ಚಲನಚಿತ್ರ ಸೊರಗುತ್ತಿರುವ ಇಂದಿನ ದಿನಮಾನಗಳಲ್ಲಿಯೂ ಸಹಿತ ಸಾರಥಿ  ತನ್ನ ೫೦ನೇ ದಿನದ ಸಂಭ್ರಮಾಚರಣೆಯನ್ನು ಆಚರಿಸಿಕೊಳ್ಳುತ್ತಿರುವುದು ಸ್ವಾಗತಾರ್ಹ ಎಂದರು. 
ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಈ ಸಂದರ್ಭದಲ್ಲಿ ಮಾತನಾಡಿ, ಕನ್ನಡಿಗರು ಕನ್ನಡ ಭಾಷೆಯ ಚಿತ್ರಗಳನ್ನು ನೋಡುವುದರ ಮೂಲಕ ಕನ್ನಡ ಚಿತ್ರರಂಗವನ್ನು ಉಳಿಸಿ ಬೆಳಸಬೇಕಾಗಿದೆ ಎಂದರು.
ವಿರಕನ್ನಡಿಗ ಯುವಕ ಸಂಘದ ಅಧ್ಯಕ್ಷರಾದ ಶಿವಾನಂದ ಹೊದ್ಲೂರ ಈ ಸಂದರ್ಭದಲ್ಲಿ ಮಾತನಾಡಿ, ಕನ್ನಡ ಚಿತ್ರಗಳು ೫೦ ಮತ್ತು ೧೦೦ ದಿನಗಳು ನಡೆಯಲು ಕನ್ನಡ ಪ್ರೇಕ್ಷಕರೇ ಕಾರಣಿಕರ್ತರಾಗಿದ್ದಾರೆ. ಆದ್ದರಿಂದ ಮುಂದಿನ ದಿನಮಾನಗಳಲ್ಲಿಯು ಕನ್ನಡ ಚಿತ್ರಗಳನ್ನು ಅತಿ ಹೆಚ್ಚು ನೋಡುವುದರ ಮೂಲಕ ಕನ್ನಡ ಚಲನ ಚಿತ್ರರಂಗವನ್ನು ಪ್ರೋತ್ಸಾಹಿಸಬೇಕಾದ ಅಗತ್ಯವಿದೆ ಎಂದರು.
ಸ್ಟಾರ್ ಚಲನಚಿತ್ರ ಮಂದಿರದ ಮಾಲಿಕರಾದ ಸಯ್ಯದ್ ಜುಲ್ಲು ಖಾದರ್ ಖಾದ್ರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. 
ಸಾರಥಿ ಚಿತ್ರದ ಪ್ರತಿನಿಧಿಯಾದ ಎಸ್.ಕೆ.ಪಾಷಾರವರು ಮಾತನಾಡಿ, ಕೊಪ್ಪಳ ಜನತೆಯ ಆಶಿರ್ವಾದಿಂದ  ಸಾರಥಿ ಚಲನ ಚಿತ್ರವು ೫೦ನೇ ದಿನವನ್ನು ಪೂರೈಸಿದೆ ಎಂದರು. 
ಶಾರದಾ ಚಲ ಚಿತ್ರಮಂದಿರದ ಮಾಲಿಕರಾದ ಸಿದ್ದಲಿಂಗಪ್ಪ ನೀಡಶೇಸಿ, ಸಯ್ಯದ್ ಜಹೀರ ಹುಸೇನ ಹಮ್ಜವಿ, ಸಯ್ಯದ ಅಲಿಖಾದ್ರಿ, ಎಂ.ಮಲಿಕ್ ಸಾಬ, ಸಯ್ಯದ ಖಾಜಾಸಾಬ, ಸಿದ್ದಪ್ಪ ದೊಡ್ಡಮನಿ, ಗವಿಸಿದ್ದಯ್ಯ ಬಲವಂಚಿ ಹಿರೇಮಠ, ಸ್ವಾಮಿ ಕಿರುಬಂಡಿ, ತಿಪ್ಪಯ್ಯಸ್ವಾಮಿ ಗುಂಜಳ್ಳಿಮಠ, ಪ್ರಕಾಶ ನೀಡಶೇಸಿ, ಅಭಿನಾಶ ಮಲ್ಲನಗೌಡರ, ರುದ್ರಪ್ಪ ಶೆಟ್ಟರ, ಸಿದ್ದಣ್ಣ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು. sarathi darshan film
Please follow and like us:
error