ಅರಳು ಪ್ರಶಸ್ತಿಗಾಗಿ ಪುಸ್ತಕಗಳಿಗೆ ಆಹ್ವಾನ

ಕೊಪ್ಪಳ ಆ. ೩೦ (ಕ.ವಾ.): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ೧. ೫ ಕೋಟಿ ರೂ. ಗಳ ದತ್ತಿ ನಿಧಿಯಿಂದ ಬೆಂ.ಮ.ಸಾ.ಸಂ. ಅರಳು ಪ್ರಶಸ್ತಿ ಗಳನ್ನು ನೀಡಲಾಗುತ್ತಿದ್ದು, ಕನ್ನಡದ ಯುವ ಬರಹಗಾರರಿಂದ ವಿವಿಧ ಸಾಹಿತ್ಯ ಪ್ರಕಾರಗಳ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.
ಕವನ, ಸಣ್ಣಕಥೆ, ಕಾದಂಬರಿ, ನಾಟಕ, ಲಲಿತ ಪ್ರಬಂಧ, ಪರಿಸರ, ವಿನೋದ ಸಾಹಿತ್ಯ, ಅನುವಾದ, ಮಕ್ಕಳ ಸಾಹಿತ್ಯ, ವಿಮರ್ಶೆ/ಸಂಶೋಧನೆ ಈ ಹತ್ತು ಸಾಹಿತ್ಯ ಪ್ರಕಾರಗಳಲ್ಲಿ ಕನ್ನಡದಲ್ಲಿ ರಚಿಸಿದ ಪುಸ್ತಕಗಳನ್ನು ಸ್ಪರ್ಧೆಗೆ ಕಳುಹಿಸಬಹುದಾಗಿದೆ. ಈ ಸ್ಪರ್ಧೆಯಲ್ಲಿ ಕಳೆದ ಆಗಸ್ಟ್ ೧೫ ಕ್ಕೆ ೩೫ ವರ್ಷ ಮೀರಿರದ ಕನ್ನಡ ಯುವ ಬರಹಗಾರರು ಭಾಗವಹಿಸಬಹುದಾಗಿದ್ದು, ೨೦೧೦ ರ ಜನವರಿಯಿಂದ ಡಿಸೆಂಬರ್ ವರೆಗೆ ಪ್ರಥಮ ಮುದ್ರಣವಾಗಿ ಪ್ರಕಟವಾಗಿರುವ ಪುಸ್ತಗಳನ್ನು ಸಲ್ಲಿಸಬೇಕು. ಪ್ರತಿ ಒಂದು ಪ್ರಕಾರಕ್ಕೆ ಪುಸ್ತಕದ ಮೂರು ಪ್ರತಿಗಳನ್ನು ಕಳುಹಿಸಬೇಕು. ಒಂದಕ್ಕಿಂತ ಹೆಚ್ಚು ಪುಸ್ತಕಗಳು ಅತ್ಯುತ್ತಮವೆಂದು ಪರಿಗಣಿಗತವಾದರೆ ಬಹುಮಾನದ ಹಣವನ್ನು ಸಮನಾಗಿ ವಿತರಿಸಲಾಗುವುದು. ಆಯ್ಕೆಯಾದ ಕೃತಿಗಳಿಗೆ ೧೦೦೦೦ ರೂ. ಗಳ ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಪುಸ್ತಕಗಳನ್ನು ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-೧೮ ಇವರಿಗೆ ಸೆ. ೩೦ ರ ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂ: ೦೮೦-೨೬೬೨೩೫೮೪ ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Please follow and like us:
error

Related posts

Leave a Comment